Advertisement

ಯುವಕರೆ ದುಶ್ಚಟಗಳಿಂದ ದೂರಯಿರಿ: ಆನಂದಪ್ಪ ಸುರಪೂರ

06:54 PM Aug 01, 2022 | Team Udayavani |

ದೋಟಿಹಾಳ: ಇಂದಿನ ಆಧುನಿಕ ವ್ಯಾಪಾರೀಕರಣವು ಸಂಪೂರ್ಣ ಯುವಕರ ಮೇಲೆ ನಿಂತಿದೆ. ಅವರೇ ವ್ಯಸನಿಗಳಾದರೆ ದೇಶದ ಅರ್ಥವ್ಯವಸ್ಥೆಗೆ ತೊಂದರೆಯಾಗಲಿದೆ. ಇಂದಿನ ದಿನಮಾನಗಳಲ್ಲಿ ಯುವಕರು ಅನುಭವಿಸುತ್ತಿರುವ ದುಶ್ಚಟಗಳಿಂದ ಅನೇಕ ಅನಾಹುತಗಾಳಾಗುತ್ತಿವೆ ಇವುಗಳನ್ನು ತಪ್ಪಿಸಲು ಯುವಕರು, ಪಾಲಕರು ಮತ್ತು ಪ್ರಜ್ಞಾವಂತ ನಾಗರಿಕರು ಮುಂದಾಗಬೇಕೆಂದು ಎಂದು ಶಾಲಾ ಸಲಹಾ ಸಮಿತಿಯ ಸದಸ್ಯ ಆನಂದಪ್ಪ ಸುರಪೂರ ಅವರು ಕರೆ ನೀಡಿದರು.

Advertisement

ಕೇಸೂರ ಗ್ರಾಮದ ಶ್ರೀ ವಿಜಯ ಮಹಾಂತೇಶ ಸಂಸ್ಥೆಯ ಘನ ಅಧ್ಯಕ್ಷರಾದ ಡಾ|| ಮಹಾಂತ ಶಿವಯೋಗಿಗಳವರ 92ನೇ ಹುಟ್ಟು ಹಬ್ಬದ ಅಂಗವಾಗಿ ಸೋಮವಾರ ಗ್ರಾಮದ ಎಸ್.ವಿ.ಎಮ್ ಶಾಲಾ ಮಕ್ಕಳು ‘ವ್ಯಸನಮುಕ್ತ ದಿನಾಚರಣೆ ಜಾಥಾ’ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಮನೆಯಲ್ಲಿರುವು ಕುಡುಕರನ್ನು ಮತ್ತು ಧೂಮಪಾನ ಮಾಡುವವರನ್ನು ಮಾಡಬಾರದೆಂದು ತಿಳಿಹೇಳಬೇಕು ಎಂದರು. ನಂತರ ಸುತ್ತಮುತ ಜನರಿಗೆ ದುಶ್ಚಟಗಳಿಂದ ಆಗುವ ಅನಾಹುತಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ಶಾಲಾ ವಿದ್ಯಾರ್ಥಿಗಳು ಡಾ|| ಮಹಾಂತ ಸ್ವಾಮಿಗಳ ವೇಷತೊಟ್ಟ ದೋಟಿಹಾಳ-ಕೇಸೂರ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗ್ರಾಮಸ್ಥರಿಗೆ ದುಶ್ಚಟಗಳಿಂದ ಅನಾಹುತಗಳ ಬಗ್ಗೆ ಮಾಹಿತಿ ನೀಡಿದರು. ನಿಮ್ಮ ದುಶ್ಚಟಗಳನ್ನು ಮಹಾಂತ ಜೋಳಿಗೆಗೆ ಹಾಕಿರಿ ಎಂದು ಮಕ್ಕಳು ಘೋಷಣೆ ಹಾಕಿದರು.

ಈ ಸಂದರ್ಭದಲ್ಲಿ ಶಾಲಾ ಸ್ಥಳಿಯ ಸದಸ್ಯರಾದ ರಾಜಶೇಖರ ವಕ್ರಾಣಿ, ಸಲಹಾ ಸಮಿತಿಯ ಸದಸ್ಯರು, ಊರಿನ ಮುಖಂಡರು, ಹಿರಿಯ ಶಿಕ್ಷಕರಾದ ಆರ್‌ಎಮ್ ಮಾನೆ, ಪಿಎ ಪಠಾಣ, ಎಸ್‌ಟಿ ಬೋಗಾಪೂರ, ವ್ಹಾಯ್‌ಬಿ ಕಟಾಂಬ್ಲಿ, ಪಿಸಿ ಮುದಗಲ್ಲ, ವಿಎಮ್ ಮಸ್ಕಿ, ಶಾಲಾ ಮುಖ್ಯಗುರುಗಳು, ಶಿಕ್ಷಕರು, ಮಕ್ಕಳು ಮತ್ತು ಗ್ರಾಮಸ್ಥರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next