Advertisement

ಸೋಂಕು ಹರಡದಂತೆ ಎಚ್ಚರ ವಹಿಸಿ

06:04 PM Apr 25, 2021 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಕೋವಿಡ್ ಸೋಂಕು ದಿನೇದಿನೇ ಮಾರಕ ಕೋವಿಡ್ ಸೋಂಕು ದಿನೇದಿನೇ ಹೆಚ್ಚುತ್ತಿದ್ದು ಎಲ್ಲರೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಮಾಸ್ಕ್ಧರಿಸಬೇಕು ಎಂದು ತಾಲೂಕು ಬಿಜೆಪಿ ಮುಖಂಡ ಅಲ್ಲಮಪ್ರಭು ಹುಲಿ ಜನರಲ್ಲಿ ಮನವಿ ಮಾಡಿದರು.

Advertisement

ತಾಲೂಕಿನ ಚಿಮ್ಮನಚೂಡ ಗ್ರಾಮದಲ್ಲಿ ಡಾ| ಅವಿನಾಶ ಜಾಧವಅಭಿಮಾನಿಗಳ ಬಳಗದ ವತಿಯಿಂದಸಾರ್ವಜನಿಕರಿಗೆ ಉಚಿತವಾಗಿ 500 ಮಾಸ್ಕ್ ವಿತರಿಸಿ ಅವರು ಮಾತನಾಡಿದರು. ತಾಲೂಕಿನಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಬಹಳಷ್ಟು ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಹಳ್ಳಿಯಲ್ಲಿ ಜೀವನ ಸಾಗಿಸುವ ಪ್ರತಿಯೊಬ್ಬರೂ ಸರ್ಕಾರದ ನಿಯಮ ಪಾಲಿಸಬೇಕು ಎಂದು ಹೇಳಿದರು.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಹೆಲ್ತ್‌ ಕೇರ್‌ ಸೆಂಟರ್‌ ನ್ನು ಶಾಸಕ ಡಾ| ಅವಿನಾಶ ಜಾಧವ ಉದ್ಘಾಟಿಸಿದ್ದಾರೆ. ಇದರಸದುಪಯೋಗ ಪಡೆದುಕೊಳ್ಳಿ. 18 ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಿ ಎಂದರು.

ರಾಮರೆಡ್ಡಿ ಪಾಟೀಲ, ಪ್ರವೀಣ ಪಟರೆಡ್ಡಿ,ಜಗದೀಶ ತೇಲ್ಕಾಪಳ್ಳಿ, ರವಿ ರಾಠೊಡ, ಶಿವಕುಮಾರ ಜಾಡರ,ಮಲ್ಲು ಕೊಡಂಬಲ್‌, ಸಂತೊಷಗೌನಳ್ಳಿ, ರುಕ್ಕು ದುಂಬಳ್ಳಿ, ಶಾಂತುಸೀತಾಳಗೇರಾ, ಶರಣು ಕಂಪ್ಲಿ, ಗುಂಡಪ್ಪಜಾಜಿಪಳ್ಳಿ, ಶರಣಪ್ಪ ಬಾರ್ಲಾ, ನಾಗುಟಪ್ಪ, ಶರಣು ಭಕ್ತಂಪಳ್ಳಿ, ಹಣಮಂತ, ಶಿವಕುಮಾರ, ಚಂದ್ರಕಾಂತ ಅವಿನಾಶ ಹಾಗೂ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next