Advertisement
ಹಳೆಯದಾದ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿರುವುದರಿಂದ 2014 ರಲ್ಲಿ ಎಂಡೋಸಲ್ಫಾನ್ ಯೋಜನೆಗೊಳ ಪಡಿಸಿ ಅಂಗನವಾಡಿಗೆ ನೂತನ ಕಟ್ಟಡ ನಿರ್ಮಿಸಿಲಾಗಿತ್ತು. ಆದರೆ ಅಲ್ಲಿ ಕಾರ್ಯಾ ಚರಿಸುತ್ತಿದ್ದ ಹಳೆಯ ಅಂಗನವಾಡಿ ಕಟ್ಟಡ ಈಗಲೂ ಹಾಗೆಯೇ ಮುರಿದು ಬೀಳುವ ಸ್ಥಿತಿಯಲ್ಲಿದೆ. ಯಾವ ಸಂದರ್ಭದಲ್ಲಿಯೂ ಈ ಹಳೆಯ ಕಟ್ಟಡ ಮುರಿದು ಬೀಳುವ ಸ್ಥಿತಿಯಲ್ಲಿದೆ. ನೂತನ ಕಟ್ಟಡ ನಿರ್ಮಿಸಿ ಐದು ವರ್ಷಗಳಾದರೂ ಹಳೆಯ ಕಟ್ಟಡ ಅಲ್ಲೇ ನೆಲೆ ನಿಂತಿದೆ. ಹಳೆಯ ಕಟ್ಟಡದ ಮರದ ಪಕ್ಕಾಸು, ಹೆಂಚು, ಗೋಡೆ ಮೊದಲಾದ ಭಾಗಗಳೆಲ್ಲ ಮುರಿದು ಬೀಳುತ್ತಿರುವುದರಿಂದ ಮಕ್ಕಳ ರಕ್ಷಕರು ಶಾಲೆಗೆ ಕಳುಹಿಸಲು ಹಿಂಜರಿಯುತ್ತಾರೆ. ಈ ಅಂಗನವಾಡಿಯಲ್ಲಿ 20 ಮಕ್ಕಳು ಕಲಿಯು ತ್ತಿದ್ದು, ಮೂತ್ರಶಂಕೆಗಾಗಿ ಹಳೆಯ ಕಟ್ಟಡದ ಸಮೀಪಕ್ಕೆ ತೆರಳ ಬೇಕಾಗಿದೆ. ಹಳೆಯ ಕಟ್ಟಡದ ಸಮೀಪದಲ್ಲಿಯೇ ಶೌಚಾಲಯ ನಿರ್ಮಿಸಿರುವುದರಿಂದ ಮಕ್ಕಳನ್ನು ಅಲ್ಲಿಗೆ ಬಿಡುವುದೆಂದರೆ ಭೀತಿ ಹುಟ್ಟಿಸುತ್ತದೆ. ಅಲ್ಲದೆ ಈ ಹಳೆಯ ಕಟ್ಟಡದ ಪಕ್ಕದಲ್ಲಿ ಹಾವು ಮೊದಲಾದ ವಿಷ ಜಂತುಗಳು ಕಂಡು ಬರುತ್ತಿರುವುದಾಗಿ ದೂರುಗಳಿವೆ. ಆದುದರಿಂದ ಮಕ್ಕಳನ್ನು ಅಂಗಳದಲ್ಲಿ ಆಟವಾಡಲು ಬಿಡಲು ಶಿಕ್ಷಕಿಯರು ಹಿಂಜರಿಯುತ್ತಾರೆ.
ಈ ಹಳೆ ಕಟ್ಟಡವನ್ನು ಕೆಡವಿದಲ್ಲಿ ಮಕ್ಕಳಿಗೆ ಆಟ ವಾಡಲು ವಿಶಾಲವಾದ ಮೈದಾನ ನಿರ್ಮಿಸ ಬಹುದಾಗಿದೆ. ಹಳೆಯ ಕಟ್ಟಡವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಪಂಚಾಯತ್ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪುಲ್ಲೂರು – ಪೆರಿಯ ಪಂಚಾಯತ್ ಐಸಿಡಿಎಸ್ ಸೂಪರ್‌ವೈಸರ್‌ತಿಳಿಸಿದ್ದಾರೆ. ಆದರೆ ಈ ತನಕ ಕಟ್ಟಡವನ್ನು ಕೆಡವಲು ಪಂಚಾ ಯತ್ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳಲಿಲ್ಲ ಎನ್ನಲಾಗಿದೆ.