ಶನಿವಾರಸಂತೆ:ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ದಿಗೆ ಹಾಗೂ ಮನ ಶಾಂತಿ-ನೆಮ್ಮದಿಗೆ ಯೋಗ ಅಭ್ಯಾಸ ಸಹಕಾರಿಯಾಗುತ್ತದೆ ಎಂದು ಬೆಂಗಳೂರಿನ ಸುರಪಾನೇನಿ ವಿದ್ಯಾಸಾಗರ ಫೌಂಡೇಶನ್ ಸಂಸ್ಥಾಪಕ ಮತ್ತು ಉದ್ದೇಮಿ ವಿದ್ಯಾಸಾಗರ್ ಅಭಿಪ್ರಾಯ ಪಟ್ಟರು.
ಅವರು ಸಮಿಪದ ಕೊಡ್ಲಿಪೇಟೆ ಹಲಸಿನಮರ ಗೌರಮ್ಮ ಶಾಂತಮಲ್ಲಪ್ಪ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಸದರಿ ವಿದ್ಯಾಸಂಸ್ಥೆಯ ಮಾಸಿಕ ಅರಿವು ಘಟಕ ಮತ್ತು ಬೆಂಗಳೂರಿನ ಸುರಪಾನೇನಿ ವಿದ್ಯಾಸಾಗರ ಪೌಂಡೇಶನಿನ ಸಮಾಜ ಸೇವಾ ಕಾರ್ಯಕ್ರಮ ಘಟಕ ಮತ್ತು ಪತಂಜಲಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಹಳ್ಳಿಯೋಗ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರ ಮಾನಸಿಕ ಮತ್ತು ದೈಹಿಕ ಶ್ರಮದಿಂದಾಗುವ ಸಮಸ್ಯೆಗಳಿಗೆ ಯೋಗ ಮತ್ತು ಧ್ಯಾನ ಅಭ್ಯಾಸದಿಂದ ನಿವಾರಣೆಯಾಗುತ್ತದೆ ಎಂದರು.
ಬೆಂಗಳೂರು ಪತಂಜಲಿ ಸಂಸ್ಥೆಯ ಹಿರಿಯ ಯೋಗಪಟು ಕಲಾವತಿ ಯೋಗ ಮತ್ತು ಆದ್ಯಾತ್ಮಿಕ ಕುರಿತು ಮಾಹಿತಿ ನೀಡಿ-ವ್ಯಕ್ತಿಯೊಬ್ಬ ಯೋಗ ಅಭ್ಯಾಸ ಮಾಡುವುದ್ದರಿಂದ ವ್ಯಕ್ತಿಯ ಆತ್ಮದ ಮೂಲಕ ತಮ್ಮತಮ್ಮ ಜಾತಿ, ಧರ್ಮದ ಪರಮಾತ್ಮನನ್ನು ಕಾಣಬಹುದು ಯೋಗ ಎಂಬುವುದು ಮನಸು, ದೇಹ, ಜ್ಞಾನ, ಆತ್ಮದಿಂದ ಕೂಡಿದ ಬಹುದೊಡ್ಡ ಸಾಧನೆಯ ಶಕ್ತಿಯಾಗಿದೆ ಎಂದು ಹೇಳಿದರು.
ಪ್ರತಿಯೊಬ್ಬರ ವೈಯುಕ್ತಿಕ ಜೀವನ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಲು ಯೋಗ ಉಪಯೋಗಕ್ಕೆ ಬರುತ್ತದೆ, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಸಮೂಹ ಸೇರಿದಂತೆ ಪ್ರತಿಯೊಬ್ಬರು ಪ್ರತಿದಿನ ಯೋಗ, ಧ್ಯಾನ, ಆದ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಾಣುವಂತೆ ಸಲಹೆ ನೀಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಎಸ್.ಚಂದ್ರಮೌಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವಿದ್ಯಾಸಂಸ್ಥೆ ಉಪಾಧ್ಯಕ್ಷ ಎಸ್.ಎಸ್.ನಾಗರಾಜ್, ಗೌರವಾಧ್ಯಕ್ಷ ಯತೀಶ್, ಕಾರ್ಯದರ್ಶಿ ಕೆ.ಎಸ್.ಪರಮೇಶ್, ವಿದ್ಯಾಸಂಸ್ಥೆ ಪ್ರಾಂಶುಪಾಲ ಎಂ.ಆರ್.ನಿರಂಜನ್, ಪತಂಜಲಿ ಸಮಿತಿ ಯೋಗಪಟುಗಳಾದ ಕಾಂಚನಗಂಗಾ ಪ್ರಮುಖರಾದ ಸುಲೋಚನ ಗಿರೀಶ್, ಅರುಣ ಚಂದ್ರಮೌಳಿ ಮುಂತಾದವರು ಉಪಸ್ಥಿತರಿದ್ದರು.
ಯೋಗಪಟುಗಳು ವಿದ್ಯಾರ್ಥಿ ಸಮೂಹಕ್ಕೆ ಯೋಗ, ಪ್ರಾಣಾಯಾಮ ಮತ್ತು ಧ್ಯಾನದ ಬಗ್ಗೆ ತರಬೇತಿ ನೀಡಿದರು.