Advertisement

ಚರ್ಚ್‌, ಮಸೀದಿ, ದೇಗುಲ ಮುಖ್ಯಸ್ಥರಿಗೆ ಜಾಗೃತಿ

04:33 PM Apr 27, 2019 | pallavi |

ಕೋಲಾರ: ಕಳೆದ 23ರಂದು ಶ್ರೀಲಂಕಾ ದೇಶದಲ್ಲಿ ಸರಣಿ ಬಾಂಬ್‌ ಸ್ಫೋಟ ಘಟನೆಯ ಸಂಬಂಧ ಜಿಲ್ಲೆಯಲ್ಲಿರುವ ಪ್ರಮುಖ ಚರ್ಚ್‌, ದೇವಸ್ಥಾನಗಳು, ಮಸೀದಿಗಳು, ಮಾಲ್, ಹೋಟೆಲ್ ಮತ್ತು ಇತರೆ ಮುಖ್ಯ ಸ್ಥಳಗಳಲ್ಲಿ ಈ ರೀತಿ ಆಗದಂತೆ ಮುಂಜಾಗ್ರತೆಯಾಗಿ ಕ್ರಮ ಕೈಗೊಳ್ಳಬೇಕು ಎಂದು ಶುಕ್ರವಾರ ಜಿಲ್ಲಾ ಪೊಲೀಸ್‌ ಕಚೇರಿ ಸಭಾಂಗಣ ದಲ್ಲಿ ನಡೆದ ಸಭೆಯಲ್ಲಿ ಸಂಬಂಧಪಟ್ಟವರಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಲಾಯಿತು.

Advertisement

ಸಿಬ್ಬಂದಿಗೆ ಗುರುತಿನ ಚೀಟಿ ಕಡ್ಡಾಯ: ಈ ಸಂದರ್ಭದಲ್ಲಿ ಜಿಲ್ಲಾ ರಕ್ಷಣಾಧಿಕಾರಿ ರೋಹಿಣಿ ಕಟೋಚ್ ಮಾತನಾಡಿ, ಚರ್ಚ್‌ಗಳು, ಮಸೀದಿ ಗಳು ಹಾಗೂ ದೇವಸ್ಥಾನಗಳಲ್ಲಿ ತಪ್ಪದೇ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಬೇಕು. ಅನುಮಾನಾ ಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು. ಚರ್ಚ್‌ಗಳು, ಮಸೀದಿಗಳು, ದೇವಸ್ಥಾನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಡ್ಡಾಯವಾಗಿ ಗುರುತಿನ ಚೀಟಿಯನ್ನು ಸಂಬಂಧಪಟ್ಟವರು ನೀಡಬೇಕು ಎಂದು ಸೂಚಿಸಿದರು.

ಸಭೆ, ಸಮಾರಂಭದ ಮಾಹಿತಿ ನೀಡಿ: ಸಭೆ, ಸಮಾರಂಭಗಳನ್ನು ನಡೆಸುವಾಗ ಸಂಬಂಧ ಪಟ್ಟವರು ತಮ್ಮ ಸರಹದ್ದಿನ ಪೊಲೀಸ್‌ ಠಾಣೆಗೆ ಮಾಹಿತಿಯನ್ನು ತಪ್ಪದೇ ನೀಡಬೇಕು. ಸಭೆ, ಸಮಾರಂಭಗಳಿಗೆ ಆಗಮಿಸುವ ಅಪರಚಿತ ವ್ಯಕ್ತಿಗಳ ಬಗ್ಗೆ ಮತ್ತು ಅವರ ಲಗ್ಗೇಜ್‌ಗಳ ಬಗ್ಗೆ ನಿಗಾವಹಿಸಿ, ಅನುಮಾನ ಬಂದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಎಂದು ತಿಳಿಸಿದರು.

ವಿಳಾಸ, ಪರಿಚಯ ಪತ್ರ ಪಡೆಯಿರಿ: ಲಾಡ್ಜ್ಗಳಿಗೆ ಆಗಮಿಸುವ ವ್ಯಕ್ತಿಗಳ ಹೆಸರು, ವಿಳಾಸ, ಪರಿಚಯ ಪತ್ರ, ಮೊಬೈಲ್ ನಂಬರ್‌ ತಪ್ಪದೇ ಪಡೆಯಬೇಕು. ಲಾಡ್ಜ್ಗಳಲ್ಲಿ ಸಿ.ಸಿ. ಕ್ಯಾಮೆರಾ ಗಳನ್ನು ತಪ್ಪದೇ ಅಳವಡಿಸಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ಗಳು, ಡಾಬಾ, ಲಾಡ್ಜ್ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸುವುದು ಮತ್ತು ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸುವುದು, ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದರು.

ಸಾರ್ವಜನಿಕ ಸ್ಥಳಗಳಾದ ಬಸ್‌ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರ್ಕೆಟ್, ಚಲನ ಚಿತ್ರ ಮಂದಿಗಳು, ಕಲ್ಯಾಣ ಮಂಟಪಗಳು ಹೆಚ್ಚಿನ ಜನ ಸಂದಣಿ ಸೇರುವ ಸ್ಥಳಗಳಲ್ಲಿ ಸಂಶಯಾಸ್ಪದವಾಗಿ ಕಂಡು ಬರುವ ವ್ಯಕ್ತಿಗಳು, ವಾರಸುದಾರರಿಲ್ಲದ ಲಗ್ಗೇಜ್‌ಗಳು ಕಂಡು ಬಂದಲ್ಲಿ ಅದನ್ನು ಯಾರು ಮುಟ್ಟದೇ ಕೂಡಲೇ ಹತ್ತಿರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪೊಲೀಸ್‌ ಇಲಾಖೆಯ ಮುಖ್ಯಸ್ಥರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next