ಚಾಮರಾಜನಗರ: ಮೈಸೂರಿನ ಬಿಡುಗಡೆ ಸಂಘಟನೆ, ನಗರದ ಸಮಾನಾಸಕ್ತರ ಬಳಗ ಹಾಗೂ ಪ್ರಗತಿಪರ ಚಿಂತಕರು ನಗರದಲ್ಲಿ ಅಸ್ಪೃಶ್ಯತಾ ನಿವಾರಣೆಗಾಗಿ ನಗರದಲ್ಲಿ ಜಾಗೃತಿ ಜಾಥಾ ಹಾಗೂ ಧರಣಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸಮಾವೇಶಗೊಂಡ ಸಮಾನಾಸಕ್ತರು,ಅಸ್ಪೃಶ್ಯತೆ ಅಳಿಯಲಿ, ಮಾನವತೆ ಬೆಳಗಲಿ ಎಂಬ ಘೋಷಣೆಯೊಂದಿಗ ಮೆರವಣಿಗೆ ಹೊರಟು, ನಗರದ ಪ್ರಮುಖ ವೃತ್ತಗಳಲ್ಲಿ ತೆರಳಿಜಿಲ್ಲಾಡಳಿತ ಭವನದ ಆವರಣದಲ್ಲಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಶತಮಾನಗಳ ಹಿಂದೆಯೇ ಡಾ. ಅಂಬೇಡ್ಕರ್, ಬುದ್ದ, ಬಸವ, ಗಾಂಧಿ,ಸಮಾನತೆಸಾರಿದ್ದರು. ಅಸ್ಪೃಶ್ಯತೆ ನಿವಾರಿಸಲು ಪ್ರಯತ್ನಿಸಿದ್ದರು. ಹೀಗಿದ್ದರೂ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಇದು ನಿಜಕ್ಕೂ ಪ್ರಜ್ಞಾವಂತರಾದ ನಾವೆಲ್ಲತಗ್ಗಿಸಬೇಕಾದವಿಚಾರಎಂದು ಬೇಸರ ವ್ಯಕ್ತಪಡಿಸಿದರು. ಹೀಗಾಗಿ ಇನ್ನಾದರೂಎಲ್ಲರೂಸೇರಿ ಈ ಸಾಮಾಜಿಕ ಪಿಡುಗಿನ ಬಗ್ಗೆಜಾಗೃತಿ ಮೂಡಿಸಬೇಕಾಗಿದೆ ಎಂದರು.
ಅರಿವಿನ ಮೂಲಕ ಈ ಹೀನಆಚರಣೆಯನ್ನು ಇಲ್ಲವಾಗಿಸಬೇಕಾಗಿದೆ. ಅಸ್ಪೃಶ್ಯತೆ ವಿರೋಧಿಕಾನೂನು ಗಳುಜಾರಿಯಲ್ಲಿವೆ.ಅದರೆ, ಜತೆಯಲ್ಲೇವೈಚಾರಿಕಜಾಗೃತಿಯೂ ಅಗತ್ಯ. ಅಸ್ಪೃಶ್ಯತರ ಎಲ್ಲ ಜಾತಿಗಳಮಠಮಾನ್ಯರು, ಜಾತಿ ಮುಖಂಡರು, ಸಾಮಾಜಿಕಚಿಂತಕರು, ಸಾಮಾಜಿಕ ಕೆಲಸದಲ್ಲಿ ತೊಡಗಿರುವವರು ಮಾನವ ಸಮಾನತೆಯ ಧೃಡ ಸಂಕಲ್ಪದೊಂದಿಗೆ ಮುನ್ನಡೆಯಬೇಕಾಗಿದೆ ಎಂದು ಹೇಳಿದರು.
ಲೇಖಕರಾದ ಆರ್.ಎಂ. ಚಿಂತಾಮಣಿ, ಹೊರೆಯಾಲ ದೊರೆಸ್ವಾಮಿ, ಕೆ. ವೆಂಕಟರಾಜು, ಕಾಳಚನ್ನೇಗೌಡ, ನಾ. ದಿವಾಕರ್, ಪಂಡಿತಾರಾಧ್ಯ,ಸಿ.ಪಿ. ಹುಚ್ಚೇಗೌಡ,ಪರಿಸರವಾದಿ ಪುಣಜನೂರು ದೊರೆಸ್ವಾಮಿ, ಪತ್ರಕರ್ತ ಎ.ಡಿಸಿಲ್ವ, ಎಸ್‌ಡಿಪಿಐನ ಸೈಯದ್ ಆರೀಫ್, ಗಾಳೀಪುರಮಹೇಶ್, ರೈತಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್, ಶ್ರೀನಿವಾಸ್ ರಂಗನ್, ರಂಗಸ್ವಾಮನಾಯಕ,ಸಿ.ಎಂ. ನರಸಿಂಹಮೂರ್ತಿ,ರೋಟರಿ ಅಧ್ಯಕ್ಷ ಕೆ.ಎಂ. ಮಹದೇವಸ್ವಾಮಿ, ವೀರಶೈವ ನೌಕರರಸಂಘದ ಅಧ್ಯಕ್ಷ ಸಿದ್ದಮಲ್ಲಪ್ಪ, ಶಿವಲಿಂಗಮೂರ್ತಿ, ಜಡೇಗೌಡ, ಗಗನ್, ಪ್ರೀತಿ, ಆದರ್ಶ್, ಮಹೇಶ್ ಇದ್ದರು.