Advertisement

‘ಪ್ರಗತಿಗೆ ಪೂರಕವಾಗಿ ವಿಜ್ಞಾನದ ಅಭಿವೃದ್ಧಿ ಅಗತ್ಯ’

02:05 AM Jul 15, 2017 | Team Udayavani |

ಪುತ್ತೂರು: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಯ ಕಡೆಗೆ ಹೊರಳಬೇಕು. ಸುಜ್ಞಾನದಿಂದ ವಿಜ್ಞಾನವಾಗುತ್ತದೆ. ದೇಶದ ಪ್ರಗತಿಗೆ ಪೂರಕವಾದ ವಿಜ್ಞಾನದ ಅಭಿವೃದ್ಧಿ ನಿರಂತರ ಆಗಬೇಕು ಎಂದು ಶಾಸಕಿ ಶಕುಂತಳಾ ಟಿ. ಶೆಟ್ಟಿ ಹೇಳಿದರು. ಕೊಂಬೆಟ್ಟು ಸ.ಪ.ಪೂ. ಕಾಲೇಜಿನಲ್ಲಿ ರೋಟರಿ ಕ್ಲಬ್‌ ಪುತ್ತೂರು ಯುವ ಹಾಗೂ ರಾಜ್ಯ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಘಟಕದ ಸಹಯೋಗದಲ್ಲಿ ಶುಕ್ರವಾರ ನಡೆದ ‘ಹಳ್ಳಿ -ಹಳ್ಳಿಗೂ ವಿಜ್ಞಾನ, ಮನೆ -ಮನೆಯಲ್ಲೂ ವಿಜ್ಞಾನಿ’ ಜನಜಾಗೃತಿ ಅಭಿಯಾನವನ್ನು ಉದ್ಘಾಟಿಸಿದರು.

Advertisement

ನಮ್ಮ ಮೂಲನಂಬಿಕೆಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿವೆ. ಆದರೆ ಮೂಢನಂಬಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡಹುತ್ತವೆ. ವಿಜ್ಞಾನವು ಮೂಲ ನಂಬಿಕೆಯಂತೆ ಕೆಲಸ ಮಾಡಬೇಕು ಮತ್ತು ಸಮಾಜದ ಪ್ರಗತಿ ಸಾಧ್ಯವಾಗಬೇಕು ಎಂದು ಹೇಳಿದರು. ರೋಟರಿ ಕ್ಲಬ್‌ ಪುತ್ತೂರು ಯುವ ಹಾಗೂ ವಿಜ್ಞಾನ ಪ. ಗ್ರಾಮೀಣ ಮಕ್ಕಳನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ತಯಾರಿಸುವ ನಿಟ್ಟಿನಲ್ಲಿ ಬಹಳ ಉತ್ತಮ ಕಾರ್ಯ ಮಾಡುತ್ತಿವೆ. ಇಂತಹ ಅಭಿಯಾನಗಳು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯ. ವಿದ್ಯಾರ್ಥಿಗಳು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.

ಮಾರ್ಗದರ್ಶನದಿಂದ ಯಶಸ್ಸು
ಮುಖ್ಯ ಅತಿಥಿ ರಾಜ್ಯ ವಿಜ್ಞಾನ ಪರಿಷತ್‌ ಕಾರ್ಯದರ್ಶಿ ಕರುಣಾಕರ ರೈ ಮಾತನಾಡಿ, ರಾಜ್ಯದಲ್ಲೇ ಪುತ್ತೂರು ತಾಲೂಕಿನ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳು ವಿಜ್ಞಾನ ಪರಿಷತ್‌ನ ಅವಕಾಶ ಗಳನ್ನು ಹೆಚ್ಚಾಗಿ ಬಳಸಿಕೊಂಡಿವೆ. ಇದರ ಪರಿಣಾಮ ತಾಲೂಕಿನ ಹಲವಾರು ವಿದ್ಯಾರ್ಥಿಗಳು ರಾಷ್ಟ್ರಮಟ್ಟದ ವಿಜ್ಞಾನ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಮಕ್ಕಳ ಕಲಿಕೆಗೆ ಬಡತನ, ಸಿರಿವಂತಿಕೆ ಎಂಬುದಿಲ್ಲ. ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಯಶಸ್ಸು ಸಿಗಲು ಸಾಧ್ಯವಿದೆ ಎಂದರು.

ವಿಜ್ಞಾನ ಕ್ಷೇತ್ರದಲ್ಲಿ ನಿರೀಕ್ಷೆ
ಅತಿಥಿ ರೋಟರಿ ಕ್ಲಬ್‌ ವಲಯ ಸೇನಾನಿ ರತ್ನಾಕರ್‌ ರೈ ಮಾತನಾಡಿ, ಇಂದು ವಿಜ್ಞಾನ ದಲ್ಲಿ ಭಾರತ ಸಾಕಷ್ಟು ಪ್ರಗತಿ ಹೊಂದಿದೆ. ಭವಿಷ್ಯದ ದೃಷ್ಟಿಯಿಂದ ವಿಜ್ಞಾನ ಕ್ಷೇತ್ರದ ಮೂಲಕ ಸಾಕಷ್ಟು ನಿರೀಕ್ಷೆಯೂ ಇದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ, ಮಾರ್ಗದರ್ಶನ, ಅವಕಾಶ ಸಿಕ್ಕಿದರೆ ದೇಶದಲ್ಲಿ ಉತ್ತಮ ವಿಜ್ಞಾನಿಗಳಾಗಿ ರೂಪುಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು. ಕೊಂಬೆಟ್ಟು ಸರಕಾರಿ ಪ. ಪೂ. ಕಾಲೇಜಿನ ಉಪನ್ಯಾಸಕ ಚಂದು ನಾಯ್ಕ, ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ಶಿವರಾಮ ಹೆಬ್ಟಾರ್‌, ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಜೋಕಿಂ ಡಿ’ಸೋಜಾ ಅವರು ಶುಭ ಹಾರೈಸಿದರು. 

ರೋಟರಿ ಕ್ಲಬ್‌ ಪುತ್ತೂರು ಯುವದ ಕಾರ್ಯದರ್ಶಿ ಸುದರ್ಶನ್‌ ರೈ, ನಿವೃತ್ತ ಉಪನ್ಯಾಸಕ ಅನಂತರಾಮ ಉಪಸ್ಥಿತರಿದ್ದರು. ತರಬೇತುದಾರ ಅಜಿತ್‌ ಹೆಬ್ಟಾರ್‌ ಪ್ರಸ್ತಾವನೆಗೈದರು. ರೋಟರಿ ನಿರ್ದೇಶಕ ಪಶುಪತಿ ಶರ್ಮ ಸ್ವಾಗತಿಸಿ, ರೋಟರಿ ಕ್ಲಬ್‌ ಪುತ್ತೂರು ಯುವದ ಅಧ್ಯಕ್ಷ ಉಮೇಶ್‌ ನಾಯಕ್‌ ವಂದಿಸಿದರು. ವಿದ್ಯಾರ್ಥಿನಿ ರಂಜಿನಿ ಕಾರ್ಯಕ್ರಮ ನಿರ್ವಹಿಸಿದರು.

Advertisement

ಸಾಧನೆಗಾಗಿ ತರಬೇತಿ
ಅಧ್ಯಕ್ಷತೆ ವಹಿಸಿದ್ದ ರಾಜ್ಯ ವಿಜ್ಞಾನ ಪರಿಷತ್‌ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಅಬೂಬಕ್ಕರ್‌ ಆರ್ಲಪದವು ಮಾತನಾಡಿ, ಹಳ್ಳಿಗಾಡಿನ ಮಕ್ಕಳಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸಿ ಅವರನ್ನು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಿಗಳನ್ನಾಗಿ ಮಾಡಲು ತರಬೇತಿ ನೀಡುವುದು ಪ್ರಮುಖ ಉದ್ದೇಶವಾಗಿದೆ. ಅಜಿತ್‌ ಹೆಬ್ಟಾರ್‌ರಂತಹ ನುರಿತ ತರಬೇತಿದಾರರಿಂದ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿ ರುವುದು ಈ ಅಭಿಯಾನದ ಯಶಸ್ಸಿಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next