Advertisement

ಕಸ ನಿರ್ವಹಣೆ ಕುರಿತ ಜಾಗೃತಿ

03:32 PM Dec 25, 2019 | Suhan S |

ಮಾಲೂರು: ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಲಯನ್ಸ್‌ ಕ್ಲಬ್‌ ಮತ್ತು ಪುರಸಭೆಯಿಂದ ಪೌರಕಾರ್ಮಿಕರು ಮತ್ತು ಸಿಬ್ಬಂದಿಗೆ ಘನ ತಾಜ್ಯ ವಿಲೇವಾರಿ ಬಗ್ಗೆ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

Advertisement

ಸಂಪನ್ಮೂಲ ವ್ಯಕ್ತಿ ಇಎನ್‌ಟಿ ತಜ್ಞೆ ಡಾ.ಸಿಂಧೂರ ಮಾತನಾಡಿ, ಪ್ರಸ್ತುತ ಕಸ ನಿರ್ವಹಣೆ ಸ್ಥಳೀಯ ಸಂಸ್ಥೆಗಳಿಗೆ ಮಹತ್ವದ ವಿಷಯವಾಗಿದೆ. ಅದೇ ಪ್ರಮಾಣದ ಹೊಣೆಗಾರಿಕೆ ಸಾರ್ವಜನಿಕರಾದ ನಮ್ಮ ಮೇಲೆಯೂ ಇದೆ. ಪ್ರತಿ ಮನೆಯಿಂದಲೂ ನಿತ್ಯ ಉತ್ಪಾದನೆಯಾಗುವ ಕಸವನ್ನು ಆರಂಭದಲ್ಲಿಯೇ ಒಣ, ಹಸಿ ಕಸ, ಪ್ಲಾಸ್ಟಿಕ್‌, ಗಾಜಿನ ವಸ್ತುಗಳನ್ನು ವಿಂಗಡಿಸಿದ್ರೆ ಶೇ.75 ಕಸ ಸುಲಭವಾಗಿ ನಿರ್ವಹಿಸಬಹುದು ಎಂದು ಹೇಳಿದರು.

ಪ್ರತಿ ಮನೆಯಿಂದಲೂ ಕಸ ವಿಂಗಡಣೆ ನಿರೀಕ್ಷೆ ಮಾಡಲಾಗಿದ್ದು, ಇಂತಹ ಪ್ರಯತ್ನಗಳು ನಡೆದಲ್ಲಿ ಶೂನ್ಯ ಕಸ ನಿರ್ವಹಣೆಗೆ ಹೆಚ್ಚಿನ ಅದ್ಯತೆ ಸಿಗಲಿದೆ. ಶೇ.90 ಕಸವನ್ನು ಮನೆಯಲ್ಲಿಯೇ ಉತ್ತಮ ಗೊಬ್ಬರವನ್ನಾಗಿಸಿ ಗಿಡಗಳಿಗೆ ಬಳಕೆ ಮಾಡಿ ಕೊಳ್ಳುವ ಸಾಧ್ಯತೆಗಳ ಬಗ್ಗೆ ಜನರು ತಿಳಿಯಬೇಕಾಗಿದೆ ಎಂದು ತಿಳಿಸಿದರು. ಮಾಲೂರು ಲಯನ್ಸ್‌ಕ್ಲಬ್‌ನ ಅಧ್ಯಕ್ಷ ಡಾ.ವಿನಾಯಕ ಪ್ರಭು ಮಾತನಾಡಿ, ಕಸವನ್ನು ತೆಗೆಯುವುದು ಪುರಸಭೆಯ ಕೆಲಸ ಎನ್ನುವುದು ಬಹುಜನರ ಅನಿಸಿಕೆಯಾಗಿದೆ. ಪೌರಕಾರ್ಮಿಕರೂ ಮನುಷ್ಯರು ಎನ್ನುವುದನ್ನು ನಾಗರಿಕ ಸಮಾಜ ಅರ್ಥಮಾಡಿಕೊಳ್ಳಬೇಕಾಗಿದೆ. ಪ್ರತಿ ಮನೆ, ಅಂಗಡಿಗಳಿಂದ ಕಸವನ್ನು ಸಂಸ್ಕರಿಸಿ ಪುರಸಭೆಯ ವಾಹನಗಳಿಗೆ ನೀಡಿದಲ್ಲಿ ಕಸದ ನಿರ್ವಹಣೆ ತಲೆ ಬಿಸಿ ಕಡಿಮೆ ಮಾಡಬಹುದಾಗಿದೆ ಎಂದರು.

ಪುರಸಭೆಯ ಮುಖ್ಯಾಧಿಕಾರಿ ಪ್ರಸಾದ್‌ ಮಾತನಾಡಿದರು. ಡಾ. ಸುನೀತಾ ವಿ.ಪ್ರಭು, ಭಾನುತೇಜ್‌, ರಾಘವೇಂದ್ರ, ಉಷಾ, ಮಮತಾ, ರಾಘವೇಂದ್ರ ವೈದ್ಯ, ಪುರಸಭೆಯ ಮಂಜುನಾಥ್‌, ಮನೋಜ್‌, ರವಿ, ವಿನೋದ್‌, ವೆಂಕಟೇಶ್‌ ಜ್ಯೋತಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next