ಕಲಬುರಗಿ: ಸಾರ್ವಜನಿಕರು ಭೃಷ್ಟ ಅಧಿಕಾರಿಗಳ ವಿರುದ್ಧ ನೀಡುವ ಮಾಹಿತಿ ಸೋರಿಕೆ ತಡೆಗಟ್ಟುವ ಹಾಗೂ ಭ್ರಷ್ಟಾಚಾರ ನಿಗ್ರಹ ದಳ ಬಲಪಡಿಸಲು ದಳದಲ್ಲಿನಬಹುತೇಕ ಪೊಲೀಸ್ ಸಿಬ್ಬಂದಿ ಬದಲಾವಣೆಗೆ ತುರ್ತಾಗಿ ಕ್ರಮ ಕೈಗೊಳ್ಳುವುದಾಗಿ ಭ್ರಷ್ಟಾಚಾರ ನಿಗ್ರಹದಳ ಪೊಲೀಸ್ ಠಾಣೆಯ ಪೊಲೀಸ್ ವರಿಷ್ಠಾಧಿ ಕಾರಿಮಹೇಶ್ ಮೇಘಣ್ಣನವರ್ ತಿಳಿಸಿದರು.
ನಗರದ ಐವಾನ್-ಇ-ಶಾಹಿ ಅತಿಥಿ ಗೃಹದಲ್ಲಿ ಮಂಗಳವಾರ ಪ್ರತಿಜ್ಞಾ ವಿ ಧಿ ಸ್ವೀಕರಿಸಿ ನಂತರ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು ಅ.27ರಿಂದ ನವೆಂಬರ್ 5ವರೆಗೆ ಹಮ್ಮಿಕೊಳ್ಳಲಾದ ಅರಿವು ಸಪ್ತಾಹ-2020 ಕಾರ್ಯಕ್ರಮ ಕುರಿತು ವಿವರಿಸಲು ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಸಾರ್ವಜನಿಕರು ಭೃಷ್ಟಾಚಾರ ಅಧಿಕಾರಿಗಳಿಂದ ಬೇಸತ್ತು ಕೊನೆಗೆ ತಮ್ಮ (ಎಸಿಬಿ) ಬಳಿ ಬರುತ್ತಾರೆ. ಆದರೆ ಕೆಲ ಸಿಬ್ಬಂದಿಯಿಂದ ದಳಕ್ಕೆ ಬಂದಿರುವ ದೂರುಗಳ ಹಾಗೂ ಇತರೆ ಮಾಹಿತಿ ಸೋರಿಕೆ ಎಂಬುದು ಮಾಧ್ಯಮಗಳಿಂದ ಗೊತ್ತಾಗುತ್ತಿದೆ. ಹೀಗಾಗಿ ಶೀಘ್ರವೇ ಸಿಬ್ಬಂದಿ ಬದಲಾವಣೆಗೆ ಮುಂದಾಗಲಾಗುವುದು. ಪ್ರಮುಖವಾಗಿ ನಿಗ್ರಹ ದಳ ಬಲಪಡಿಸಲಾಗುವುದು ಎಂದು ಎಸ್‌ಪಿ ಪ್ರಕಟಿಸಿದರು.
2020ರಲ್ಲಿ 09 ಭ್ರಷ್ಟಾಚಾರ ಕೇಸ್‌ಗಳನ್ನು ಟ್ರ್ಯಾಪ್ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದ ಅವರು, ಅಧಿಕಾರಿಗಳು ಲಂಚ ಪಡೆಯುತ್ತಿರುವುದಕ್ಕೆ ಪೂರಕ ದಾಖಲಾತಿ ಸಂಗ್ರಹಿಸಿ ಮಾಹಿತಿ ನೀಡಿದರೆ, ದಾಳಿಯಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಇಂದಿನಿಂದ ಸಪ್ತಾಹ: ನ.28ರಂದು ಕಲಬುರಗಿ ತಾಲೂಕು ತಹಶೀಲ್ದಾರ್ ಕಚೇರಿ ಮತ್ತು ಜಿಲ್ಲಾ ಧಿಕಾರಿಗಳ ಕಚೇರಿ, ನ.29ರಂದು ಕಮಲಾಪುರ ತಾಪಂ ಕಚೇರಿ ಮತ್ತು ಜೇವರ್ಗಿ ತಾಪಂ ಕಚೇರಿ, ನ.2ರಂದು ಚಿತ್ತಾಪುರ ತಾಪಂ ಕಚೇರಿ ಮತ್ತು ಆಳಂದ ತಾಪಂ ಕಚೇರಿಯಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ನ.3ರಂದು ಕಲಬುರಗಿ ಎಸಿಬಿ ಪೊಲೀಸ್ ಠಾಣೆ ಸಿಬ್ಬಂದಿಗಾಗಿ ತಿಳಿವಳಿಕೆ ರಸಪ್ರಶ್ನೆ ಸ್ಪರ್ಧೆ, ನ.4ರಂದು ಕಮಲಾಪುರ ಪಂಚಾಯತ್ ಕಚೇರಿಯಲ್ಲಿ ಸಾರ್ವಜನಿಕರಿಗೆ ತಿಳಿವಳಿಕೆ ಕಾರ್ಯಕ್ರಮ ಹಾಗೂ ನ.5ರಂದು ಕಲಬುರಗಿ ರೈಲ್ವೆ ಸ್ಟೇಷನ್ ಕೇಂದ್ರ ಬಸ್ ನಿಲ್ದಾಣ, ಶರಣಬಸವೇಶ್ವರ ಗುಡಿ, ಖಾಜಾ ಬಂದೇನವಾಜ್ ದರ್ಗಾ, ಮಹಾನಗರ ಪಾಲಿಕೆ ಕಚೇರಿಗಳಲ್ಲಿ ಕರಪತ್ರ ಹಂಚಿಕೆ ಮತ್ತು ಅಂಟಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಡಿಎಸ್‌ಪಿ ವಿರೇಶ್ ಕರಡಿಗುಡ್ಡ ಮಾತನಾಡಿ, ಭ್ರಷ್ಟಾಚಾರದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜಾಥಾ ಮತ್ತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುತ್ತಿದ್ದು, ಈ ವರ್ಷ ಕೋವಿಡ್-19ಹಿನ್ನೆಲೆಯಲ್ಲಿ ಯಾವುದೇ ಜಾಥಾ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಿರುವುದಿಲ್ಲ. ಬದಲಾಗಿ ಆಯಾ ತಾಲೂಕಿನಲ್ಲಿನ ಜನನಿಬಿಡ ಪ್ರದೇಶದಲ್ಲಿ ಅ ಧಿಕಾರಿಗಳು ಭೇಟಿ ನೀಡಿ ಭ್ರಷ್ಟಾಚಾರದ ನಿರ್ಮೂಲನೆ ಕುರಿತು ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದರು.
ಭ್ರಷ್ಟಾಚಾರ ನಿರ್ಮೂಲನೆ ನಿಟ್ಟಿನಲ್ಲಿ ನಾಗರಿಕರು ಮತ್ತು ಖಾಸಗಿ ವಲಯದ ಎಲ್ಲಾ ಪಾಲುದಾರರು ಸೇರಿ ಕೆಲಸ ಮಾಡಿದಾಗ ಮಾತ್ರ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಬಹುದು. ಭ್ರಷ್ಟಾಚಾರಕ್ಕೆ ಸಹಕಾರ ನೀಡುವುದು ಸಹ ಅಪರಾಧ. ಇದನ್ನೆಲ್ಲ ಸಾರ್ವಜನಿಕರು ಅರಿತುಕೊಳ್ಳುವುದು ಮುಖ್ಯವಾಗಿದೆ.
–ಮಹೇಶ್ ಮೇಘಣ್ಣನವರ್, ಎಸ್ಪಿ , ಭ್ರಷ್ಟಾಚಾರ ನಿಗ್ರಹ ದಳ.