Advertisement

ಮಲೇರಿಯಾ ತಡೆಗೆ ಅರಿವು ಜಾಥಾ

11:03 AM Jul 27, 2019 | Suhan S |

ಸಂತೆಮರಹಳ್ಳಿ: ರೋಗ ಬರದಂತೆ ಜಾಗೃತಿ ವಹಿಸುವುದೇ ರೋಗದ ವಿರುದ್ಧ ಹೋರಾಡುವ ಪ್ರಥಮ ಮದ್ದಾಗಿದ್ದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಜರೂರತ್ತು ಇದೆ ಎಂದು ತಹಶೀಲ್ದಾರ್‌ ವರ್ಷಾ ಕರೆ ನೀಡಿದರು.

Advertisement

ಅವರು ಯಳಂದೂರು ಪಪಂ ವತಿಯಿಂದ ಶುಕ್ರವಾರ ಡೆಂಘೀ, ಚಿಕೂನ್‌ ಗುನ್ಯಾ ಮತ್ತು ಮಲೇರಿಯಾದಂಥ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮುನ್ನಚ್ಚರಿಕಾ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಈಗ ಎಲ್ಲೆಲ್ಲೂ ಜ್ವರಗಳು ಕಾಣಿಸಿಕೊಳ್ಳುತ್ತಿದೆ. ಇದಕ್ಕಾಗಿ ಈಗಾಗಲೇ ನಾವು ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪಟ್ಟಣ ಹಾಗೂ ಗ್ರಾಮ ಮಟ್ಟದಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲು ಸಭೆಗಳನ್ನು ಮಾಡಿದ್ದೇವೆ. ಆರೋಗ್ಯ ಇಲಾಖೆಯ ದಾದಿಯರು, ಆಶಾ ಕಾರ್ಯಕರ್ತೆಯರ ನೆರವಿನೊಂದಿಗೆ ಇಂತಹ ರೋಗಗಳ ವಿರುದ್ಧ ಹೋರಾಡಲು ಅವರಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಲಾಗುತ್ತಿದೆ. ಗ್ರಾಪಂ ಹಾಗೂ ಪಪಂ ಇದರಲ್ಲಿ ಭಾಗಿಯಾಗಿದ್ದಾರೆ. ಆಶಾ ಕಾರ್ಯಕರ್ತೆಯರು ಮನೆಮನೆಗಳಿಗೆ ತೆರಳಿ ಇದರ ಬಗ್ಗೆ ಅರಿವು ಮೂಡಿಸಿದರೆ ಕೆಲವರು ಚರಂಡಿ ಸ್ವಚ್ಛ ಮಾಡಿ ಎಂದು ಹೇಳುತ್ತಾರೆ ಎಂದು ಆಶಾ ಕಾರ್ಯಕರ್ತೆಯರು ದೂರುತ್ತಾರೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳು ಎಚ್ಚೆತ್ತುಕೊಂಡು ಕೆಲಸವನ್ನು ಮಾಡಬೇಕು ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ವಿಶೇಷ ಪಾತ್ರ ವಹಿಸಬೇಕು. ಮುಂದಿನ ದಿನಗಳಲ್ಲಿ ಅಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲೂ ಇದರ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.

ಜಾಥಾದ ಮೂಲಕ ಮನೆಗಳಲ್ಲಿ ಜಾಗೃತಿ: ಪಪಂ ಮುಖ್ಯಾಧಿಕಾರಿ ನಾಗರತ್ನ ನೇತೃತ್ವದಲ್ಲಿ ಆಶಾ ಕಾರ್ಯಕರ್ತೆಯರು, ಪೌರ ಕಾರ್ಮಿಕರು, ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮನೆಮನೆಗಳಿಗೆ ತೆರಳಿ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಬಗ್ಗೆ ಅರಿವು ಮೂಡಿಸಿದರು.

ಮನೆ, ಮುಂಭಾಗ, ಹಿತ್ತಲಿನಲ್ಲಿ ಅನಗತ್ಯವಾಗಿ ನೀರಿನ ಶೇಖರಣೆ, ತೆಂಗಿನಚಿಪ್ಪು, ಟೈರ್‌ಗಳಲ್ಲಿ ಶೇಖರಣೆ ಗೊಂಡಿರುವ ನೀರನ್ನು ತೆರವುಗೊಳಿಸಲಾಯಿತು. ತೆರೆದ ನೀರಿನ ತೊಟ್ಟಿಗಳನ್ನು ಮುಚ್ಚಲು, ಎರಡು ಮೂರು ದಿನಕ್ಕೊಮ್ಮೆ ಇದನ್ನು ಶುಚಿಗೊಳಿಸಲು, ಹೋಟೆಲ್ಗಳಲ್ಲಿನ ಸ್ವಚ್ಛತೆಯನ್ನು ಪರಿಶೀಲಿಸಲಾಯಿತು. ಹೋಟೆಲ್ ಸುತ್ತಮುತ್ತಲಿನ ಪ್ರದೇಶವನ್ನು ಶುಚಿಯಾಗಿ ಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಚರಂಡಿಯಲ್ಲಿ ಪ್ಲಾಸ್ಟಿಕ್‌ ಸೇರಿದಂತೆ ಅನಗತ್ಯ ತ್ಯಾಜ್ಯಗಳನ್ನು ಬೀಸಾಡಬಾರದು ಎಂದು ಎಚ್ಚರಿಕೆ ನೀಡಲಾಯಿತು.ಉಪ ತಹಶೀಲ್ದಾರ್‌ ನಂಜಯ್ಯ ತಾಲೂಕು ಆರೋಗ್ಯಾ ಧಿಕಾರಿ ಡಾ. ಮಂಜುನಾಥ್‌, ಆರೋಗ್ಯ ಅಧಿಕಾರಿ ಮಹೇಶ್‌ಕುಮಾರ್‌, ನಂಜುಂಡಶೆಟ್ಟಿ ಇತರರಿದ್ದರು.

ಮಕ್ಕಳ ಜಾಥಾಕ್ಕೆ ಆರೋಗ್ಯಾಧಿಕಾರಿ ಗೋಪಾಲ್ ಹಸಿರು ನಿಶಾನೆ:

Advertisement

ಕಲಾ ತಂಡ ನಾಟಕ ಮಾಡುವ ಮೂಲಕ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿಯನ್ನು ಮೂಡಿಸ ಲಾಗುತ್ತಿದೆ. ಮನೆಯ ಸುತ್ತಮುತ್ತ ಸೊಳ್ಳೆಗಳು ಬರದಂತೆ ತಡಗಟ್ಟಬೇಕು. ಸುತ್ತಮುತ್ತಲಿನ ಪರಿಸರ ವನ್ನು ಸ್ವಚ್ಛವಾಗಿಟ್ಟುಕೊಂಡು ಡೆಂಘೀ, ಮಲೇರಿಯಾ ಇಂತಹ ಅನೇಕ ರೋಗಗಳನ್ನು ಬರದಂತೆ ಜಾಗೃತ ರಾಗಿರಬೇಕು ಎಂದು ಪಪಂ ಮುಖ್ಯಾಧಿಕಾರಿ ಮೂರ್ತಿ ಮಾತನಾಡಿದರು.

ಪಟ್ಟಣದ ಖಾಸಗಿ ಬಸ್‌ ನಿಲ್ದಾಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಾಮರಾಜ ನಗರ ಇವರ ಸಂಯುಕ್ತ ಆಶ್ರಯದಲ್ಲಿ ರಂಗಮಂದಿರ ಕಲಾ ವೇದಿಕೆ (ರಿ) ಯಳಂದೂರು ವತಿಯಿಂದ ಆರೋಗ್ಯ ಜಾಗೃತಿ ಅರಿವು ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಗರ್ಭಿಣಿಯರಿಗೆ ಆರೋಗ್ಯವಂತರಾಗಿರಲು ಪೌಷ್ಟಿಕ ಆಹಾರವನ್ನು ಸೇವಿಸಬೇಕು, ಸರ್ಕಾರದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಹಲವು ಸೌಲಭ್ಯವನ್ನು ನೀಡುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಂಡು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ವಿಶೇಷವಾಗಿ ಜಾನಪದ ಕಲಾ ಪದರ್ಶನ ತಂಡದವರು ಡೆಂಘೀ, ಮಲೇರಿಯಾ ಇಂತಹ ಅನೇಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಕಲಾ ತಂಡ ನಾಟಕ ಮಾಡುವ ಮೂಲಕ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ ಆದ್ದರಿಂದ ಮುಂಜಾಗೃತ ಕ್ರಮವಾಗಿ ಸಾರ್ವಜನಿಕರು ಕ್ರಮ ವಹಿಸಬೇಕು ಎಂದು ತಿಳಿಸಿದರು.

ಪಪಂ ಸದಸ್ಯ ಸಂಪತ್‌ ಕುಮಾರ್‌, ಕಲಾ ತಂಡದವರಾದ ಶಾಂತರಾಜು, ಸಿದ್ದರಾಜು, ಶಿವಣ್ಣ, ರವಿ, ರೂಪೇಶ್‌, ಗೀತಾ, ಸುಶೀಲ, ಕುಮಾರ ಹಾಗೂ ಅಂಗನವಾಡಿ ಆಶಾ ಕಾರ್ಯಕರ್ತರು ಇದ್ದರು.

ನಾಟಕದ ಮೂಲಕ ಆರೋಗ್ಯ ಜಾಗೃತಿ:

ಎಲ್ಲೆಡೆ ಮಲೇರಿಯಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆಯ ವತಿಯಿಂದ ಏರ್ಪಡಿಸಿದ್ದ ಶಾಲಾ ಮಕ್ಕಳ ಜಾಥಕ್ಕೆ ತಾಲೂಕು ಆರೋಗ್ಯಾಧಿಕಾರಿ ಡಾ. ಗೋಪಾಲ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಆಸ್ಪತ್ರೆಯ ಆವರಣದಲ್ಲಿ ಏರ್ಪಡಿಸಿದ್ದ ಜಾಥಾಕ್ಕೆ ಚಾಲನೆ ನೀಡಿದ ಬಳಿಕ ವೈದ್ಯಾಧಿಕಾರಿ ಡಾ. ಗೋಪಾಲ್ ಮಾತನಾಡಿ ಎಲ್ಲೆಡೆ ಮಲೇರಿಯಾ ಹರಡಿದ್ದು, ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಬೇಕೆಂದು ಸರ್ಕಾರ ಸೂಚನೆ ಮೇರೆಗೆ ಜಾಥವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಅನಾಪಿಲೀಸ್‌ ಸೊಳ್ಳೆ ಮಲೇರಿಯಾಕ್ಕೆ ಕಾರಣ. ಸೊಳ್ಳೆ ರೋಗಿಗೆ ಕಚ್ಚಿ ಬಳಿಕ ಇತರರನ್ನು ಕಚ್ಚಿದಾಗ ಕಾಯಿಲೆ ಮತ್ತಷ್ಟು ಹರಡುತ್ತದೆ. ಇದನ್ನು ನಿಯಂತ್ರಣ ಮಾಡಲು ಸಾರ್ವಜನಿಕರು ಸೂಕ್ತ ಕ್ರಮಗಳನ್ನು ಕೈಗೊಂಡು ಮಲೇರಿಯಾದಂತಹ ರೋಗದಿಂದ ತಪ್ಪಿಸಿಕೊಳ್ಳಬೇಕು ಎಂದರು.

ಆಸ್ಪತ್ರೆಯಲ್ಲಿ ಒಂದೇ ಕಾಯಿಲೆ ದಾಖಲಾಗಿದ್ದು, ಅದು ಸಹ ತಮಿಳುನಾಡಿನಿಂದ ಬಂದ ರೋಗಿಯಿಂದ ಹರಡಿರುವ ಕಾಯಿಲೆ ಎಂದು ಕಂಡುಬಂದಿದೆ. ಅವರು ಮುಂಜಾಗ್ರತಾ ಕ್ರಮವನ್ನು ನಿರಂತರವಾಗಿ ಕೈಗೊಂಡಿದ್ದು, ಸೂಕ್ತ ಚಿಕಿತ್ಸೆಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು, ಸಾರ್ವಜನಿಕರು ಇದರ ಉಪಯೋಗ ಪಡೆದುಕೊಂಡು ಮಲೇರಿಯಾದಿಂದ ಪಾರಾಬೇಕೆಂದು ಹೇಳಿದರು.

ಶಾಲಾ ಮಕ್ಕಳ ಮತ್ತು ಆಶಾ ಕಾರ್ಯಕರ್ತೆಯರ ಜಾಥವು ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಘೋಷಣೆಗಳನ್ನು ಕೂಗುತ್ತಾ ಸಾರ್ವಜನಿಕರ ಗಮನ ಸೆಳೆಯಿತು.

ಜಾಥಾದಲ್ಲಿ ವೈದ್ಯರಾದ ಡಾ. ಮರಿಯಪ್ಪ ಕೊಟ್ಟೆ, ಡಾ. ನವೀನ್‌, ಡಾ.ಲೋಹಿತ್‌, ಮಹಿಳಾ ತಜ್ಞರಾದ ಚಂದ್ರಮ್ಮ, ಪುರುಷರ ತಜ್ಞರಾದ ಮಂಜಯ್ಯ, ಶಿಕ್ಷಕರಾದ ಅಶ್ವಿ‌ನಿ, ಸುನೀತ, ರೋಹಿಣಿ ಮತ್ತು ವಿದ್ಯಾರ್ಥಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next