ಬೀದರ: ರೊವರ್ ಹಾಗೂ ರೇಂಜರ್ ಘಟಕದಿಂದ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿಕೊಡುತ್ತದೆ ಎಂದು ಡಿಡಿಪಿಯು ಎಂ.ಆಂಜನೇಯ ಹೇಳಿದರು.
ತಾಲೂಕಿನ ಮನ್ನಳ್ಳಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಂಡ ರೊವರ್ ಹಾಗೂ ರೇಂಜರ್ ಘಟಕವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಭವ್ಯ ಭಾರತದ ಉತ್ತಮ ನಾಗರಿಕರಾಗಿ ಬಾಳಬೇಕು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಚಂದ್ರಕಾಂತ ಶಾಹಾಬಾದಕರ, ದೇಶ ಪ್ರೇಮದ ಜೊತೆಗೆ ಭಾತೃತ್ವದ ಭಾವನೆ ಮೂಡಿಸುವ ಕೆಲಸ ನಮ್ಮೆಲ್ಲರ ಜವಾಬ್ದಾರಿ. ನೈತಿಕತೆ ಮತ್ತು ಮಾನವೀಯ ಮೌಲ್ಯಗಳ ಅರಿವು ಮೂಡಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಘಟಕದ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಚಳಕಾಪುರೆ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನದಲ್ಲಿ ಬದುಕುವ ಕಲೆ, ಉತ್ತಮ ಸಂಸ್ಕಾರ ನೀಡುವಲ್ಲಿ ರೊವರ್ ಹಾಗೂ ರೇಂಜರ್ ಘಟಕದ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಪಾಂಶುಪಾಲ ಚಂದ್ರಕಾಂತ ಗಂಗಶೆಟ್ಟಿ ಮಾತನಾಡಿದರು. ಇದೇ ವೇಳೆ ಡಿಡಿಪಿಯು ಎಂ. ಆಂಜನೇಯ, ರೊವರ್ ಹಾಗೂ ರೇಂಜರ್ ಅ ಧಿಕಾರಿ ಬಾಲಾಜಿ ದಿಂಡಿಗಿರೆ, ಉಪನ್ಯಾಸಕಿ ರುಕ್ಮಿಣಿ ಅವರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಉಪನ್ಯಾಸಕರಾದ ಸುಭಾಷ ರಾಠೊಡ, ಶ್ರೀನಿವಾಸ ಜಿವಣಗಿ, ಮದನಲಾಲ ರಾಠೊಡ, ರಜನಿಕಾಂತ, ಜೇಸ್ಸಿಕಾ, ಶಿವಶಂಕರ ಬಾಮಂದಿ, ವಿಜಯಕುಮಾರ ದೇವಾ, ಶಿವಶಂಕರ ಸ್ವಾಮಿ ಇದ್ದರು.