Advertisement

ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಜಾಗೃತಿ

01:42 PM Nov 25, 2019 | Suhan S |

ಹಾವೇರಿ: ಭಾರತೀಯ ಪುರಾತತ್ವ ಸರ್ವೇಕ್ಷಣ ಧಾರವಾಡ ವಲಯದ ವತಿಯಿಂದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಹಾಗೂ ಐತಿಹಾಸಿಕ ಮಹತ್ವದ ಜಾಗೃತಿ ಮೂಡಿಸುವ ವಿಶ್ವ ಪಾರಂಪರಿಕ ಸಪ್ತಾಹ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

Advertisement

ನಗರದ ಪುರಸಿದ್ಧೇಶ್ವರ ದೇವಾಲಯ ದಿಂದ ಪಾರಂಪರಿಕ ನಡಿಗೆ ಮುಖಾಂತರ ಪ್ರಾರಂಭವಾಗಿ ಮಹಾತ್ಮ ಗಾಂಧಿ ರಸ್ತೆ, ಯಾಲಕ್ಕಿ ಓಣಿ, ಅಕ್ಕಿಪೇಟೆ ಮುಖಾಂತರ ಸಾಗಿ ಬಂದು ಮರಳಿ ಸಿದ್ಧೇಶ್ವರ ದೇವಾಲಯಕ್ಕೆ ತಲುಪಿತು. ಬಳಿಕ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಕುರಿತಂತೆ ಘೋಷಣೆಗಳನ್ನು ಕೂಗಲಾಯಿತು. ಪ್ರಾಚೀನ ಇತಿಹಾಸದ ಕುರಿತು ರಸಪ್ರಶ್ನೆ ಕಾರ್ಯಕ್ರಮ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು.

ಕಾರ್ಯಕ್ರಮದಲ್ಲಿ ಧಾರವಾಡ ವಲಯದ ಅಭಿಯಂತರರು, ಧಾರವಾಡ ಭಾರತೀಯ ಪುರಾತತ್ವ ಸರ್ವೇಕ್ಷಣಾ ಅಧಿ ಕಾರಿಗಳು, ಭಾರತೀಯ ಉಪ ಅಧೀ ಕ್ಷಕರಾದ ಜಿ.ಕಾಮರಾಜ, ಸಹಾಯಕ ಪುರಾತತ್ವ ಅಧಿಕಾರಿ ದೇವರಾಜ ಎಸ್‌.ಎಂ., ಸಂರಕ್ಷಣಾಧಿ ಕಾರಿಗಳಾದ ಎಚ್‌. ರವೀಂದ್ರ, ಸಂರಕ್ಷಣಾಧಿ ಕಾರಿಗಳಾದ ದೀಪಕ ಕುಮಾರ್‌, ಪ್ರಾಚಾರ್ಯ ಎಸ್‌ .ವಿ. ಹಿರೇಮಠ, ಎಸ್‌.ಬಿ. ಅಣ್ಣೀಗೇರಿ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next