Advertisement

ಅರಿವು ಮೂಡಿಸಲು ಜಾಗೃತಿ ಜಾಥಾ

03:46 PM Oct 07, 2019 | Team Udayavani |

ಕನಕಪುರ: ಮೋಟರ್‌ ವಾಹನ ಕಾಯ್ದೆ ತಿದ್ದುಪಡಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಕಾನೂನು ಇಲಾಖೆ, ಪೊಲೀಸ್‌ ಇಲಾಖೆ, ವಕೀಲರ ಸಂಘ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಭಾನುವಾರ ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. ನಗರದ ನಗರಸಭೆ ಮುಂಭಾಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ನಿಂಬಣ್ಣ ಕಲ್ಕಣಿ, ಪ್ರಧಾನ ಸಿವಿಲ್‌ ನ್ಯಾಯಾಧೀಶ ಜಿ.ಎಚ್‌ ಹನುಮಂತು, ಒಂದನೇ ಸಿವಿಲ್‌ ನ್ಯಾಯಾಧೀಶ ಪಿ.ಎ. ಸಂತೋಷ್‌ ಕುಮಾರ್‌ ನೇತೃತ್ವದಲ್ಲಿ ಜಾಗೃತಿ ಜಾಥಾಗೆ ಚಾಲನೆ ನೀಡಲಾಯಿತು.

Advertisement

ಸಂಚಾರ ನಿಯಮ ಪಾಲನೆ ಕಡ್ಡಾಯ: ತಾಲೂಕಿನ ಸಾತನೂರು, ಕೋಡಿಹಳ್ಳಿ, ಹಾರೋಹಳ್ಳಿ ಮತ್ತು ಗ್ರಾಮಾಂತರ ಠಾಣೆಯ ಆರಕ್ಷಕರು ದ್ವಿಚಕ್ರ ವಾಹನದಲ್ಲಿ ನಗರದ ಮುಖ್ಯ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಸಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿರಬೇಕು. ಆಟೋ ಚಾಲಕರು, ಸರಕು ಸಾಗಾಣೆ ವಾಹನ ಚಾಲಕರು, ಕಾರು ಚಾಲಕರು, ಬಸ್‌ ಚಾಲಕರು ಕಡ್ಡಾಯವಾಗಿ ಪರವಾನಗಿ ಹೊಂದಿರಬೇಕು. ಕಾರು ಚಾಲಕರು ಸೀಟ್‌ ಬೆಲ್ಟ್ ಹಾಕಿರಬೇಕು ಎಂಬ ನಾಮಫ‌ಲಕವನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಎಲ್ಲಾ ನಿಯಮಗಳನ್ನು ಪಾಲಿಸದಿದ್ದರೆ ದಂಡ ವಿಧಿಸುವುದು ಮತ್ತು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು. ಈ ವೇಳೆ ನಗರ ಠಾಣೆ ವೃತ್ತ ನಿರೀಕ್ಷಕ ಮಲ್ಲೇಶ್ಶ್‌, ಉಪನಿರೀಕ್ಷಕ ಭಗವಾನ್‌, ಗ್ರಾಮಾಂತರ ಠಾಣೆ ಎಸ್‌ಐ ಭಾಸ್ಕರ್‌, ಹಿರಿಯ ವಕೀಲ ರಾಮಚಂದ್ರು ಕಾಮೇಶ್‌, ಸರ್ಕಾರಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next