Advertisement

ಸಿಲಿಂಡರ್‌ ಗ್ಯಾಸ್‌ ಬಳಕೆಯಲಿ ಜಾಗೃತಿ ಅಗತ್ಯ

05:15 PM Mar 31, 2022 | Team Udayavani |

ಬ್ಯಾಡಗಿ: ಸಿಲಿಂಡರ್‌ ಗ್ಯಾಸ್‌ ಪ್ರಕೃತಿಯಲ್ಲಿ ಹೆಚ್ಚು ದಹನಕಾರಿ ವಸ್ತುವಾಗಿದೆ. ಸಿಲಿಂಡರ್‌ನಲ್ಲಿರುವ ಗ್ಯಾಸ್‌ ಸೋರಿಕೆಯಿಂದ ಯಾವುದೇ ಸಂದರ್ಭದಲ್ಲಿ ಅಪಘಾತ ಸಂಭವಿಸಬಹುದು. ಸೀರೆ, ದುಪ್ಪಟ್ಟಾ ಇನ್ನಿತರ ವಸ್ತುಗಳನ್ನು ಧರಿಸಿಕೊಂಡು ಕೆಲಸ ನಿರ್ವಹಿಸುವ ಮಹಿಳೆಯರು ಕೆಳಗೆ ಬೀಳದಂತೆ ಜಾಗರೂಕತೆಯಿಂದ ಅಡುಗೆ ಮಾಡಬೇಕೆಂದು ಎಚ್‌ಪಿಸಿಎಲ್‌ ತಾಂತ್ರಿಕ ವರ್ಗದ ರಾಘವೇಂದ್ರರಾವ್‌ ಸಲಹೆ ನೀಡಿದರು.

Advertisement

ತಾಪಂ ಕಾರ್ಯಾಲಯ, ಅಕ್ಷರ ದಾಸೋಹ, ಕ್ಷೇತ್ರ ಶಿಕ್ಷಣಾ ಧಿಕಾರಿಗಳ ಕಾರ್ಯಾಲಯ ಹಾಗೂ ಅರವಿಂದ ಗ್ಯಾಸ್‌ ಏಜೆನ್ಸಿ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಬಿಇಎಸ್‌ ಪ್ರಾಥಮಿಕ ಶಾಲೆ ಆವರಣದಲ್ಲಿ ಬಿಸಿಯೂಟ ತಯಾರಕ ಮಹಿಳೆಯರಿಗಾಗಿ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಿಲಿಂಡರ್‌ ಗ್ಯಾಸ್‌ ಭಯಬೀಳುವಂತಹ ವಸ್ತುವಾಗಿದೆ. ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣವಾಗಲಿದೆ ಎಂದರು.

ಸಿಲಿಂಡರ್‌ ನೇರವಾಗಿರಲಿ: ಸಿಲಿಂಡರ್‌ನ್ನು ಯಾವುದೇ ಕಾರಣಕ್ಕೂ ಅಡ್ಡ ಮಲಗಿಸಿಡಬಾರದು. ನೇರವಾಗಿ, ಸಮತಟ್ಟಾದ ಮೇಲ್ಮೈಯಲ್ಲಿ ಸರಾಗವಾಗಿ ಗಾಳಿ, ಬೆಳಕು ಹರಿದಾಡುವ ಪ್ರದೇಶದಲ್ಲಿರಿಸಬೇಕು. ಸಿಲಿಂಡರ್‌ ಸುತ್ತಮುತ್ತಲ ಪ್ರದೇಶದಲ್ಲಿ ಸೀಮೆ ಎಣ್ಣೆ, ಪೆಟ್ರೋಲ್‌, ಮೊಬೈಲ್‌ ಸೇರಿದಂತೆ ಯಾವುದೇ ದಹಿಸುವ ವಸ್ತು ಅಥವಾ ಇಂಧನಗಳಿಂದ ನಿಯಮಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಇದು ಸ್ಪೋಟಕ್ಕೆ ಕಾರಣವಾಗಲೂಬಹುದು ಎಂದರು.

ಕಡ್ಡಾಯ ನಾಬ್‌ ಸ್ಥಗಿತಗೊಳಿಸಿ: ದೇಶವ್ಯಾಪಿ ಮನೆಗಳಲ್ಲಿ ಅಡುಗೆ ತಯಾರಿಸಲು ಗ್ಯಾಸ್‌ ಸಿಲಿಂಡರ್‌ ಬಳಸುವುದು ಸಾಮಾನ್ಯವಾಗಿದೆ. ಆದರೆ, ಅನಾಹುತಕ್ಕೆ ಮೊದಲ ಕಾರಣವೇ ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆ ಎಂಬುದು ವಾಸ್ತವ ಸತ್ಯ. ಹೀಗಾಗಿ, ಇದನ್ನು ತಪ್ಪಿಸಲು ಎಲ್ಲರೂ ಸಿಲಿಂಡರ್‌ ಬಳಕೆ ಮಾಡಿದ ಬಳಿಕ ಸ್ಟೌವ್‌ ಸೇರಿದಂತೆ ರೆಗ್ಯೂಲೇಟರ್‌ನಲ್ಲಿರುವ ನಾಬ್‌ಗಳನ್ನು ಕಡ್ಡಾಯವಾಗಿ ಬಂದ್‌ ಮಾಡುವಂತೆ ಸಲಹೆ ನೀಡಿದರು.

Advertisement

ವಾಸನೆ ಗ್ರಹಿಕೆ ಅಗತ್ಯ: ಅಡುಗೆ ಮನೆ ಪ್ರವೇಶದ ಬಳಿಕ ಸ್ಟೌವ್‌ ಆರಂಭಿಸುವ ಮೊದಲು ಗ್ಯಾಸ್‌ನಿಂದ ಹೊರಬರುವ ವಾಸನೆ ಗ್ರಹಿಸಬೇಕು. ಅನುಮಾನವಿದ್ದಲ್ಲಿ ಯಾವುದೇ ಕಾರಣಕ್ಕೂ ಒಲೆ ಆರಂಭಿಸಬಾರದು. ಕಿಟಕಿ, ಬಾಗಿಲುಗಳನ್ನು ಸಂಪೂರ್ಣವಾಗಿ ಕೆಲ ಗಂಟೆಗಳ ಕಾಲ ತೆರೆದಿಡಬೇಕು. ಸಿಲಿಂಡರ್‌ ಸ್ವೀಕರಿಸುವಾಗ, ಸುರಕ್ಷತಾ ಕ್ಯಾಪ್‌ ಮುಚ್ಚಲಾಗಿದೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಬೇಕು. ಇಲ್ಲದಿದ್ದರೆ ಸೋರಿಕೆಗೆ ಕಾರಣವಾಗುವ ಸಾಧ್ಯತೆ ಹೆಚ್ಚಾಗಲಿದೆ ಎಂದರು.

ಈ ವೇಳೆ ಟಿಇಒ ಎನ್‌. ತಿಮ್ಮಾರೆಡ್ಡಿ, ಶಿಕ್ಷಣ ಇಲಾಖೆಯ ಎಂ.ಎನ್‌.ಯಾದವಾಡ, ಮಂಜುಳಾ ಹೊಟ್ಟಿಗೌಡ್ರ, ಅರವಿಂದ ಗ್ಯಾಸ್‌ ಏಜೆನ್ಸಿಯ ಸುಧಿಧೀರ ಹವಳದ, ದಿವಾಕರ್‌ ಜಾಧವ್‌, ಸಂದೀಪ್‌ ಗುದಗಿ, ನಾಗರಾಜ ಆಡಿನವರ, ಮಲ್ಲೇಶ ಬೆಳವಡಿ, ಬಸವರಾಜ ಬೆಟಗೇರಿ, ಸಂಗಪ್ಪ ಹಡಗಲಿ, ಕಲ್ಲಪ್ಪ ಹೊಸ್ಮನಿ, ರವಿ ಹಾದರಗೇರಿ, ಕುಮಾರ ಕಡೇಮನಿ, ಶಂಕ್ರಪ್ಪ, ಉಮೇಶ್‌, ಮಹೇಂದ್ರ, ನಿಂಗರಾಜ್‌, ಶಾಂತಪ್ಪ, ಸುಭಾಸ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next