Advertisement

ಅನಿಷ್ಠ ಪದ್ದತಿ ನಿವಾರಣೆಗೆ ಜಾಗೃತಿ ಅಗತ್ಯ

04:19 PM Aug 20, 2022 | Shwetha M |

ವಿಜಯಪುರ: ಸಂವಿಧಾನದಲ್ಲಿ ಮದುವೆ ವಯಸ್ಸಿಗೆ ಮಿತಿ ಇದ್ದರೂ ಸಮಾಜದಲ್ಲಿ ಅವ್ಯಾ ಹತವಾಗಿ ಬಾಲ್ಯವಿವಾಹಗಳು ನಡೆಯುತ್ತಿವೆ. ಆದರೆ ಜನರಲ್ಲಿ ಇದರ ದುಷ್ಪರಿಣಾಮಗಳ ಅರಿವು ಇಲ್ಲದಿರುವುದರಿಂದ ಇಂತಹ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವ ಬಿ.ಎಸ್‌.ನಾವಿ ಹೇಳಿದರು.

Advertisement

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಅಹಲ್ಯಾ ಬಾಯಿ ಸ್ನಾತಕೋತ್ತರ ಮಹಿಳಾ ಅಧ್ಯಯನ, ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ ಹಾಗೂ ಎನ್ನೆಸ್ಸೆಸ್‌ ಕೋಶದಿಂದ ಹಮ್ಮಿಕೊಂಡಿದ್ದ ವರದಕ್ಷಿಣೆ, ಬಾಲ್ಯವಿವಾಹ ಮತ್ತು ಚುಡಾಯಿಸುವಿಕೆ ಕುರಿತ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಆಧುನಿಕ ಸಮಾಜದಲ್ಲೂ ಬಾಲ್ಯವಿವಾಹಗಳು ನಡೆಯುತ್ತಿರುವುದು ನೋವಿನ ಸಂಗತಿ ಎಂದರು.

ಸಮಾಜದಲ್ಲಿ ಇನ್ನೂ ವರದಕ್ಷಿಣೆ, ಬಾಲ್ಯವಿವಾಹ ಮತ್ತು ಮಹಿಳೆಯರನ್ನು ಚುಡಾಯಿಸುವಂಥ ಅನಿಷ್ಠ ಪದ್ದತಿಗಳು ಇವತ್ತಿಗೂ ಜಾರಿಯಲ್ಲಿವೆ. ಇಂಥ ಕೃತ್ಯಗಳಿಗೆ ಕಡಿವಾಣ ಹಾಕಲು ವಿದ್ಯಾವಂತರು ಸಮಾಜದಲ್ಲಿ ಅರಿವು ಮೂಡಿಸುವ ಜವಾ ಬ್ದಾರಿ ನಿಭಾಯಿಸಬೇಕು. ಇಂತಹ ಕಾರ್ಯಕ್ರಮಗಳಿಂದ ಜನರು ಸದೃಢರಾಗಲು ಸಾಧ್ಯ ಎಂದರು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಅಂಜುಮನ್‌ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಉಜ್ವಲಾ ಸರನಾಡಗೌಡ ಮಾತನಾಡಿ, ವರದಕ್ಷಿಣೆ, ಬಾಲ್ಯವಿವಾಹ ಮತ್ತು ಚುಡಾಯಿಸುವಿಕೆ ಸಾಮಾಜಿಕ ರೋಗದ ಲಕ್ಷಣಗಳು. ಕಾನೂನು ಮೂಲ ಕವೇ ಇಂಥ ರೋಗಗಳಿಗೆ ಚಿಕಿತ್ಸೆ ಸಾಧ್ಯ ಎಂದರು.

ಆದರೆ ಇವುಗಳಿಗೆ ಮೂಲಕಾರಣ ಬೇರೆಯೇ ಇದೆ. ಮಹಿಳೆ ಭೋಗದ ವಸ್ತು ಎಂದು ತಿಳಿದಿರುವ ಸಮಾಜದಲ್ಲಿನ ಅನೇಕರ ಧೋರಣೆ, ಸಮಾಜದಲ್ಲಿರುವ ಮೌಲ್ಯ ವ್ಯವಸ್ಥೆ, ಪಿತೃ ಪ್ರಧಾನ ಧೋರಣೆಯಿಂದಾಗಿ ಇಂತಹ ಪೀಡುಗು ಹಾಗೂ ಕೃತ್ಯಗಳು ನಡೆಯುತ್ತಿವೆ. ಇಂಥ ಮನಸ್ಥಿತಿ ಜನಮನದಲ್ಲಿ ಬದಲಾದಾಗ ಮಾತ್ರ ಮಹಿಳೆಯರ ಮೇಲಿನ ಶೋಷಣೆ ನಿಗ್ರಹ ಸಾಧ್ಯ. ಅಲ್ಲದೇ ಮಹಿಳೆಯರಿಗೆ ಕಾನೂನಿನಲ್ಲಿ ಹಲವು ಅವಕಾಶಗಳಿದ್ದು, ಅವುಗಳ ಸದ್ಬಳಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.

Advertisement

ಮಹಿಳಾ ಅಧ್ಯಯನ ಕೇಂದ್ರದ ಮುಖ್ಯಸ್ಥೆ ವೈ.ಲಕ್ಷ್ಮೀದೇವಿ ಪ್ರಾಸ್ತಾವಿಕ ಮಾತನಾಡಿದರು. ಎನ್ನೆಸ್ಸೆಸ್‌ ಕೋಶದ ಸಂಯೋಜಕಿ ಟಿ.ಶಾಂತಾದೇವಿ ಸ್ವಾಗತಿಸಿದರು. ಡಾ| ಶೈಲಾ ಬಳಗಾನೂರ ನಿರೂಪಿಸಿದರು. ಜಕ್ಕವ್ವ ವಠಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next