Advertisement

ಗ್ರಾಮಗಳಲ್ಲಿ ಜಲಶಕ್ತಿ ವೃದ್ಧಿಗೆ ಅರಿವು ಅಗತ್ಯ

03:36 PM Jul 19, 2019 | Suhan S |

ರಾಣಿಬೆನ್ನೂರ: ಮಾನವನು ತನ್ನ ಸ್ವಾರ್ಥ ಸಾಧನೆಗಾಗಿ ಗಿಡ-ಮರಗಳನ್ನು ನಾಶ ಮಾಡುವ ಮೂಲಕ ಪರಿಸರ ವಿನಾಶ ಮಾಡುತ್ತಿದ್ದಾನೆ. ಇದು ಹೀಗೆಯೇ ಮುಂದುವರಿದರೆ ಇಡೀ ಜೀವಕುಲಕ್ಕೆ ಸಂಕಷ್ಟವಾಗಲಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಆತಂಕ ವ್ಯಕ್ತಪಡಿಸಿದರು.

Advertisement

ಗುರುವಾರ ತಾಪಂ ಸಭಾಂಗಣದಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಯೋಗದಲ್ಲಿ ಏರ್ಪಡಿದ್ದ ಜಲಶಕ್ತಿ ಅಭಿಯಾನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದಶಕದಿಂದ ಇತ್ತೀಚೆಗೆ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಪರಿಣಾಮದಿಂದ ಪರಿಸರ ಹಾನಿಯಾಗಿ, ಮನುಷ್ಯ ಕುಲಕ್ಕೆ ಧಕ್ಕೆಯುಂಟಾಗಿ ಹೆಚ್ಚಿನ ಗಂಡಾಂತರಕ್ಕೆ ಪ್ರಮುಖ ಕಾರಣವಾಗುತ್ತಿದೆ ಎಂದರು.

ಜಲಶಕ್ತಿ ಕುರಿತು ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯ ನಿರಂತರವಾಗಿ ಆಗಬೇಕಾಗಿದೆ. ನೀರು ಹಿತಮಿತವಾಗಿ ಬಳಸುವುದರ ಮೂಲಕ ಜನಜಾಗೃತಿ ಉಂಟು ಮಾಡುವ ಪ್ರಕ್ರಿಯೆಯಲ್ಲಿ ಎಲ್ಲ ಗ್ರಾಮಸ್ಥರು ಸಕ್ರೀಯವಾಗಿ ಭಾಗವಹಿಸಬೇಕಾಗಿದೆ. ಈ ದಿಶೆಯಲ್ಲಿ ಜಲ ಶಕ್ತಿ ಅಭಿಯಾನ ಕಾರ್ಯಕ್ರಮವು ಗ್ರಾಮೀಣ ಮಟ್ಟದಲ್ಲಿ ನಿರಂತರವಾಗಿ ನಡೆಯಲಿದ್ದು, ಡಿಸೆಂಬರ್‌ ಅಂತ್ಯದ ವರೆಗೆ ಕೊನೆಗೊಳ್ಳಲಿದೆ ಎಂದರು.

ಜಲಶಕ್ತಿ ಅಭಿಯಾನ ಕುರಿತಂತೆ ಜಲನಿರ್ವಹಣೆಯ ಕೇಂದ್ರ ಸರಕಾರದ ಅಧ್ಯಾಯನ ತಂಡ ತಾಲೂಕಿನ ಆಯ್ದ ಗ್ರಾಮಗಳಿಗೆ ಭೇಟಿ ನೀಡಲಿದ್ದು, ಮಾಹಿತಿ ಸಂಗ್ರಹಿಸಿ ಸರಕಾರಕ್ಕೆ ವರದಿ ಮಂಡಿಸಲಿದೆ. ಗ್ರಾಮಸ್ಥರು ಅಂತರ್ಜಲ ವೃದ್ಧಿಗೆ ಕೈಜೋಡಿಸಬೇಕೆಂದರು.

ತಹಶೀಲ್ದಾರ ಸಿ.ಎಸ್‌.ಕುಲಕರ್ಣಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎಂ.ಎಚ್.ಪಾಟೀಲ, ಕೃಷಿ ಜಂಟಿ ಉಪನಿರ್ದೇಶಕಿ ಸ್ಫೂರ್ತಿ, ತಾಪಂ ಸಹಾಯಕ ನಿರ್ದೇಶಕ ಅಶೋಕ ನಾರಜ್ಜಿ, ಬಿಇಒ ಎನ್‌.ಶ್ರೀಧರ, ತಾಪಂ ವ್ಯವಸ್ಥಾಪಕ ಬಸವರಾಜ ಶಿಡೇನೂರ ಸೇರಿದಂತೆ ಮತ್ತಿತರ ಸರ್ಕಾರಿ ಇಲಾಖೆಯ ಅಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next