Advertisement

ಜಲಮೂಲ ಸಂರಕ್ಷಿಸಲು ಜಾಗೃತಿ ಅವಶ್ಯ

11:05 AM Mar 28, 2022 | Team Udayavani |

ಹುಬ್ಬಳ್ಳಿ: ನಮ್ಮ ಭೂಮಿಯಲ್ಲಿ ಶೇ.3 ಮಾತ್ರ ಕುಡಿಯುವ ನೀರು ಇದೆ. ನೀರು ವ್ಯರ್ಥ ಮಾಡಬಾರದು. ಮುಂದಿನ ಜನಾಂಗಕ್ಕೆ ನಾವು ನೀರು ಉಳಿಸಿಕೊಡಬೇಕು. ಪ್ರತಿಯೊಬ್ಬರೂ ನೀರಿನ ಬಗ್ಗೆ ಜಾಗೃತಿ ವಹಿಸುವ ಅಗತ್ಯವಿದೆ ಎಂದು ಸಂಕೇಶ್ವರ ವೆಂಚರ್ಸ್‌ (ಇಂಡಿಯಾ) ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಸಂಕೇಶ್ವರ ಹೇಳಿದರು.

Advertisement

ನೀರು ಉಳಿಸಿ, ಭೂಮಿ ಸಂರಕ್ಷಿಸಿ ಅಭಿಯಾನದಡಿ ಸಂಕೇಶ್ವರ ವೆಂಚರ್ಸ್‌ ಕಂಪನಿ, ರೋಟರಿ ಕ್ಲಬ್‌ ಆಫ್‌ ಹುಬ್ಬಳ್ಳಿ ಪರಿವಾರ, ಯಂಗ್‌ ಇಂಡಿಯಾ, ಹುಬ್ಬಳ್ಳಿ ಬೈಸಿಕಲ್‌ ಕ್ಲಬ್‌, ಇನ್ನರ್‌ವೀಲ್‌ ಮಹಿಳಾ ಕ್ಲಬ್‌, 99 ಕೆನ್ನಾಸ್‌ ಮೋಟರ್‌ ಸೈಕಲ್‌ ಕ್ಲಬ್‌, 98.3 ಎಫ್‌ಎಂ (ರೇಡಿಯೋ ಮಿರ್ಚಿ) ಸಹಭಾಗಿತ್ವದಲ್ಲಿ ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ಜಲಸಂರಕ್ಷಣೆಗಾಗಿ ಜಾಗೃತಿ ರ್ಯಾಲಿಯಲ್ಲಿ ಅವರು ಮಾತನಾಡಿದರು.

ಭಾರತದಲ್ಲಿ 7 ಮಿನರಲ್‌ ವಾಟರ್‌ ಪೂರೈಕೆ ಮಾಡುವ ಏಕೈಕ ಸಂಸ್ಥೆ “ಓಂಕಾರ’. ಒಂದು ಲೀಟರ್‌ ನೀರು ಹೊರಬರಲು 2 ಲೀಟರ್‌ ನೀರು ರಿಚಾರ್ಜ್‌ ಮಾಡಲಾಗುತ್ತಿದೆ. ನೀರಿನ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದರು.

ಹು-ಧಾ ಮಹಾನಗರ ಪಾಲಿಕೆ ಉಪ ಆಯುಕ್ತ ಮಾಧವರಾವ್‌ ಗಿತ್ತೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ನೀರನ್ನು ಹಿತಮಿತವಾಗಿ ಬಳಸಬೇಕು. ನೀರು ನಮ್ಮ ಬದುಕಿನ ಅವಿಭಾಜ್ಯ ಅಂಗ. ನಾವು ಭೂಮಿಯ ಮೇಲೆ ಜೀವಂತವಿರಲು ನೀರು ಅಗತ್ಯ. ಜನರಿಗೆ ಈಗಾಗಲೇ ಇದರ ಮಹತ್ವ ಅರಿವಾಗುತ್ತಿದೆ. ಜಲಮೂಲಗಳನ್ನು ಸಂರಕ್ಷಿಸಲು ಇನ್ನಷ್ಟು ಜಾಗೃತಿ ವಹಿಸುವ ಅವಶ್ಯವಿದೆ ಎಂದರು.

ರೋಟರಿ ಪರಿವಾರದ ಇವೆಂಟ್‌ ಚೇರ್ಮನ್‌ ವಿಜಯ ಹಟ್ಟಿಹೊಳಿ, ಅನೀಸ ಖೋಜೆ, ಕೌಸ್ತುಭ ಸಂಶೀಕರ, ಶಂಕರ ಹಿರೇಮಠ, ರಾಜೇಶ ತೋಳನವರ, ಗುರು ಕಲ್ಮಠ, ಸಂಜೀವ ಭಾಟಿಯಾ, ಇಮಾಮ ಕೋಳೂರು, ಗುರುಮೂರ್ತಿ, ಡಾ. ನಾಗೇಶ ನಾಯಕ, ಆರ್‌ಜೆ ಶಾರೂಖ್‌ ಮೊದಲಾದವರಿದ್ದರು.

Advertisement

ನೀರಿನ ಸದ್ಬಳಕೆಗೆ ಜಾಗೃತಿ ರ್ಯಾಲಿ: ತೋಳನಕೆರೆಯಿಂದ ರಂಭಾಪುರಿ ಕಲ್ಯಾಣ ಮಂಟಪ, ಬಿವಿಬಿ ಕಾಲೇಜು, ಹೊಸೂರು ವೃತ್ತ, ಚನ್ನಮ್ಮ ವೃತ್ತ ಮಾರ್ಗವಾಗಿ ಗೋಕುಲ ರಸ್ತೆ, ತತ್ವದರ್ಶ ಆಸ್ಪತ್ರೆ ಮುಖಾಂತರ ಮರಳಿ ತೋಳನಕೆರೆ ವರೆಗೆ ಸೈಕಲ್‌ ರ್ಯಾಲಿ ನಡೆಯಿತು. 55 ಜನರು ಬೈಕ್‌ ಮೂಲಕ ತೋಳನಕೆರೆಯಿಂದ ಪ್ರಸಿಡೆಂಟ್‌ ಹೋಟೆಲ್‌, ಸಾಯಿನಗರ ರಸ್ತೆ, ಜೆ.ಕೆ. ಸ್ಕೂಲ್‌, ರಮೇಶ ಭವನ, ಮಧುರಾ ಎಸ್ಟೇಟ್‌, ಸವೊìàದಯ ವೃತ್ತ, ರೈಲ್ವೆ ಸ್ಟೇಷನ್‌, ಚನ್ನಮ್ಮ ವೃತ್ತ, ಹಳೇ ಹುಬ್ಬಳ್ಳಿ, ಸಿದ್ದಾರೂಢ ಮಠ, ಅಕ್ಷಯ ಪಾರ್ಕ್‌, ವಿಮಾನ ನಿಲ್ದಾಣ ಮೂಲಕ ಮರಳಿ ತೋಳನಕೆರೆ ತಲುಪಿದರು. ತೋಳನಕೆರೆಯಿಂದ ಕಾಡಸಿದ್ದೇಶ್ವರ ಕಾಲೇಜುವರೆಗೆ ವಾಕಥಾನ್‌ ನಡೆಯಿತು. ಜೊತೆಗೆ ಆಟೋ ರಿಕ್ಷಾಗಳ ಮೂಲಕವು ನೀರಿನ ಸದ್ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಪ್ರತಿ ಪಾಯಿಂಟ್‌ನಲ್ಲಿ ನೀರು, ಹಣ್ಣು-ಹಂಪಲು ವಿತರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next