Advertisement

ಮಿಡತೆಗಳ ನಿಯಂತ್ರಣಕ್ಕೆ ಜಾಗೃತಿ ಅಗತ್ಯ

04:39 AM May 31, 2020 | Lakshmi GovindaRaj |

ಮಂಡ್ಯ: ಮಿಡತೆಗಳಿಂದ ಕೃಷಿ ಬೆಳೆಗಳಿಗೆ ಉಂಟಾಗಬಹುದಾದ ಹಾನಿ ತಪ್ಪಿಸಲು ಅಗತ್ಯ ಮುನ್ನೆಚ್ಚರಿಕೆ ಹಾಗೂ ಹತೋಟಿ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೃಷಿ ಅಧಿಕಾರಿ ಗಳ ಸಭೆಯಲ್ಲಿ “ಮರುಭೂಮಿ ಮಿಡತೆ-ಸಣ್ಣ ಕೊಂಬಿನ ಮಿಡತೆ’ಯಿಂದ ಕೃಷಿ ಬೆಳೆಗಳಿಗೆ ಉಂಟಾ ಗುವ ಹಾನಿ ತಪ್ಪಿಸುವ ಸಂಬಂಧ ಹತೋಟಿ ಕ್ರಮಗಳ ಕುರಿತು ಮಾತನಾಡಿ, ಕೀಟದ  ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು. ಯಾವುದೇ ರೀತಿಯಲ್ಲಿಯೂ ಆತಂಕಗೊಳ್ಳದಂತೆ ಅರಿವು ಮೂಡಿಸುವುದರ ಜೊತೆಗೆ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಹತೋಟಿಗೆ ಮುಂದಾ ಗಬೇಕು ಎಂದು ಸಲಹೆ ನೀಡಿದರು.

ಹೊಗೆ ಹಾಕಿ: ಈ ಮಿಡತೆಗಳು ಗಾಳಿಯ ಧಿಕ್ಕು ಆಧರಿಸಿ ಚಲಿಸುವುದರಿಂದ ಇವುಗಳ ಚಲನ ವಲನಗಳ ಮೇಲೆ ನಿಗಾ ವಹಿಸುವುದು. ಕೀಟ ಬಾಧಿತ ಪ್ರದೇಶ ದಲ್ಲಿ ಹೊಗೆ ಮತ್ತು ಬೆಂಕಿ ಹಾಕುವುದರಿಂದ ಕೀಟ ಗಳನ್ನು ಬೇರೆಡೆಗೆ ಓಡಿಸಬಹುದು. ಬೇವಿನ ಮೂಲದ ಕೀಟನಾಶಕಗಳನ್ನು ಬೆಳೆಗಳಲ್ಲಿ ಸಿಂಪಡಿಸುವುದರಿಂದ ಕೀಟ ಬೆಳೆಹಾನಿ ಮಾಡುವುದು ಕಡಿಮೆ ಆಗುತ್ತದೆ. ಕೃಷಿ ವಿಜ್ಞಾನಿಗಳ ಸಲಹೆ ಪಡೆದು ಸೂಕ್ತ ರಸಾಯನಿಕಗಳನ್ನು ಬಳಸಿ ಕೀಟಗಳ ಹತೋಟಿ  ಮಾಡಬಹುದು.

ಈ ಕುರಿತು ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ  ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರಗಳಿಗೆ ಭೇಟಿ ನೀಡಿ  ಮಾಹಿತಿ ಪಡೆದುಕೊಳ್ಳಬೇಕು ಕಿವಿ ಮಾತು ಹೇಳಿದರು. ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಚಂದ್ರಶೇಖರ್‌,  ತೋಟಗಾರಿಕೆ ಉಪನಿರ್ದೇಶಕ ರಾಜು, ಉಪ ಕೃಷಿ ನಿರ್ದೇಶಕರು ಮತ್ತು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next