Advertisement

ವೈಜ್ಞಾನಿಕ ಕಸ ವಿಲೇವಾರಿಗೆ ಜಾಗೃತಿ

01:36 PM Aug 28, 2019 | Team Udayavani |

ತುಮಕೂರು: ಹಸಿ ಕಸ-ಒಣ ಕಸ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬಗ್ಗೆ ನಗರ ವ್ಯಾಪ್ತಿಯಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ಟಿ. ಭೂಬಾಲನ್‌ ತಿಳಿಸಿದರು.

Advertisement

ನಗರದ ಸ್ಮಾರ್ಟ್‌ ಸಿಟಿ ಕಚೇರಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಸ್ವಚ್ಛ, ಸುಂದರ ಹಸಿರು ತುಮಕೂರು ನಗರವನ್ನಾಗಿಸಲು ಸ್ಮಾರ್ಟ್‌ ಸಿಟಿ ಲಿಮಿಟೆಡ್‌, ಮಹಾನಗರ ಪಾಲಿಕೆ ಹಾಗೂ ಭಗೀರಥ ಸಂಸ್ಥೆ ಸಹಕಾರದಡಿ ಶಾಲಾ-ಕಾಲೇಜುಗಳಲ್ಲಿ ಚರ್ಚೆ, ಪ್ರಬಂಧ ಸ್ಪರ್ಧೆ, ಜಾಗೃತಿ ಜಾಥಾ, ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮ, ಪ್ರತಿ ವಾರ್ಡ್‌ನಲ್ಲಿ ಬೀದಿ ನಾಟಕ, ಸ್ಥಳೀಯ ಮಖಂಡರು ಹಾಗೂ ಸ್ವಸಹಾಯ ಗುಂಪಿನ ಸದಸ್ಯರೊಂದಿಗೆ ಗುಂಪು ಚರ್ಚೆ ಕಾರ್ಯಕ್ರಮ ಹಮ್ಮಿಕೊಂಡು ಅರಿವು ಮೂಡಿಸಲಾಗುತ್ತಿದೆ ಎಂದು ಹೇಳಿದರು.

ತರಬೇತಿ: ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ನಗರದ ಎಲ್ಲ ಮನೆ-ಮನೆಗೆ ಭೇಟಿ ನೀಡಿ ಕರಪತ್ರ, ಫ್ಲೆ ೖಯರ್‌, ಬ್ಯಾನರ್‌, ಸ್ಟಿಕರ್‌, ಪೋಸ್ಟರ್‌ ವಿತರಿಸುವ ಮೂಲ ಜಾಗೃತಿ ಮೂಡಿಸಲಾಗುತ್ತಿದೆ. ಸ್ಮಾರ್ಟ್‌ ಸಿಟಿ ವತಿ ಯಿಂದ ಘನ ತ್ಯಾಜ್ಯ ನಿರ್ವಹಣೆ ಕುರಿತು ಪಾಲಿಕೆ ಸದಸ್ಯರು, ಆರೋಗ್ಯ ನಿರೀಕ್ಷಕರು, ಪೌರ ಕಾರ್ಮಿ ಕರಿಗೆ ಜವಾಬ್ದಾರಿಗಳ ಬಗ್ಗೆ ತರಬೇತಿ ನೀಡಲಾಗಿದೆ ಎಂದ‌ು ಹೇಳಿದರು.

ಪರಿವರ್ತನಾ ಘಟಕ ನಿರ್ಮಾಣ: ಪಾಲಿಕೆ ವತಿ ಯಿಂದ ಮನೆಯಲ್ಲಿಯೇ ಉತ್ಪತ್ತಿಯಾಗುವ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ವಿಧಾನದ ತರಬೇತಿ ನೀಡಿ 500 ಮನೆಗಳಲ್ಲಿ ಪರಿವರ್ತನಾ ಘಟಕ ನಿರ್ಮಿಸಿಕೊಡಲಾಗಿದೆ. ಈ ಘಟಕಕ್ಕೆ ಪೂರಕ ಸಾಮಗ್ರಿ ಒದಗಿಸಿದ್ದು, ಈಗಾಗಲೇ ನಾಗರಿಕರು ಘಟಕದಲ್ಲಿ ಹಸಿ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳ ಮನೆಗಳಲ್ಲಿ ಕಡ್ಡಾಯವಾಗಿ ಆಗಸ್ಟ್‌ ತಿಂಗಳೊಳಗೆ ಈ ಗೊಬ್ಬರ ಪರಿವರ್ತನಾ ಘಟಕ ಅಳವಡಿಸಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಸಮರ್ಪಕ ತಾಜ್ಯ ನಿರ್ವಹಣೆಗೆ ಸೂಚನೆ: ನಗರದಲ್ಲಿರುವ ಮದ್ಯದಂಗಡಿ, ಮಾಂಸದಂಗಡಿ, ಕಲ್ಯಾಣ ಮಂಟಪ, ಶಾಲಾ-ಕಾಲೇಜುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅವರ ಹಂತದಲ್ಲಿಯೇ ವಿಲೇವಾರಿ ಮಾಡಲು ತರಬೇತಿ ನೀಡಿ ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ಸೂಚಿಸ ಲಾಗಿದೆ. ಮಾಂಸ ದಂಗಡಿಗಳು ಎಲ್ಲೆಂದರಲ್ಲಿ ಬಿಸಾಡುವ ತ್ಯಾಜ್ಯದಿಂದ ನಗರದ ನೈರ್ಮಲ್ಯ ಹಾಳಾಗು ವುದಲ್ಲದೇ, ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗು ತ್ತಿರುವುದರಿಂದ ಎಲ್ಲ ಮಾಂಸ ದಂಗಡಿಗಳಿಗೂ ಸಮರ್ಪಕವಾಗಿ ತಾಜ್ಯ ನಿರ್ವಹಣೆ ಮಾಡಲು ಸೂಚನೆ ನೀಡಲಾಗಿದೆ ಎಂದು ಭೂಬಾಲನ್‌ ಹೇಳಿದರು.

ಸ್ವಚ್ಛ ತುಮಕೂರು ಹಾಗೂ ಹಸಿರು ನಗರವನ್ನಾಗಿ ನಿರ್ಮಿಸಲು ಸಾರ್ವಜನಿಕರಿಗೆ ಉತ್ತೇಜನ ನೀಡುವ ಸಲುವಾಗಿ ಸೈಕ್ಲೋಥಾನ್‌, ವಾಕಥಾನ್‌, ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ನಗರದ ನಾಗರಿಕರೆಲ್ಲರೂ ಸ್ಮಾರ್ಟ್‌ ಸಿಟಿ ಹಾಗೂ ಪಾಲಿಕೆಯೊಂದಿಗೆ ಕೈಜೋಡಿಸಿ ಸಹಕರಿಸ ಬೇಕು ಎಂದು ಮನವಿ ಮಾಡಿದರು. ಸ್ಮಾರ್ಟ್‌ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next