Advertisement

ನಂದಿನಿ ಹಾಲು ಬಳಕೆಗೆ ಜನಜಾಗೃತಿ

12:37 PM Dec 20, 2019 | Suhan S |

ಕಲಬುರಗಿ: ಹಾಲು ಉತ್ಪಾದನಾ ಹೆಚ್ಚಳ ಹಾಗೂ ನಂದಿನಿ ಹಾಲು ಬಳಕೆ ಕುರಿತು ಜನ ಜಾಗೃತಿ ಮೂಡಿಸಲು ಕಲಬುರಗಿ, ಬೀದರ, ಯಾದಗಿರಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಕಲ್ಯಾಣರಾವ್‌ (ಆರ್‌.ಕೆ. ಪಾಟೀಲ) ಪಾಟೀಲ ತಿಳಿಸಿದರು.

Advertisement

ಒಕ್ಕೂಟದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ 62 ಸಾವಿರ ಲೀಟರ್‌ ಹಾಲು ಉತ್ಪಾದನೆ ಆಗುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸುವುದರ ಜತೆಗೆ ಕೆಮಿಕಲ್‌ ಮಿಶ್ರಿತ ಅದರಲ್ಲೂ ಕ್ಯಾನ್ಸರ್‌ಗೆ ಆಹ್ವಾನ ನೀಡುವ ಹಾಲುಗಳನ್ನು ತ್ಯಜಿಸುವಂತೆ ಹಾಗೂ ಒಕ್ಕೂಟದ ನಂದಿನಿ ಹಾಲು ಉಪಯೋಗಿಸುವಂತೆ ಹಳ್ಳಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಲಾಗಿದೆ ಎಂದು ವಿವರಿಸಿದರು.

ದೇಶದಲ್ಲಿ ಕಲಬೆರೆಕೆ ಆಹಾರ ಪದಾರ್ಥಗಳ ಸೇವನೆಯಿಂದ ಕ್ಯಾನ್ಸರ್‌ದಂತ ಮಾರಕ ರೋಗಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹಾಲಿನಲ್ಲಿ ಕನಿಷ್ಠ 3.5 ಪ್ಯಾಟ್‌ ಮತ್ತು ಕನಿಷ್ಠ 8.5 ಎಸ್‌ಎನ್‌ ಎಫ್ ಇರಬೇಕು. ಆದರೆ ಖಾಸಗಿ ಹಾಲಿನಲ್ಲಿ ಈ ಅಂಶಗಳನ್ನು ಉಲ್ಲಂ ಸಲಾಗುತ್ತಿದೆ. ಮಹಾರಾಷ್ಟ್ರದಿಂದ ಜಿಲ್ಲೆಗೆ ಪೂರೈಕೆಯಾಗುವ ಕಳಪೆ ಮಟ್ಟದ ಹಾಲು ತಡೆಗಟ್ಟುವಂತೆ ಪಾಲಿಕೆ ಆಯುಕ್ತರು, ಜಿಲ್ಲಾಡಳಿತ ಹಾಗೂ ಸಂಬಂಧಿಸಿದವರಿಗೆ ಪತ್ರ ಬರೆದರೂ ಪ್ರಯೋಜನ ಆಗಿಲ್ಲ ಎಂದು ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಒಕ್ಕೂಟ ವ್ಯಾಪ್ತಿಯಲ್ಲಿ ರೈತರಿಗೆ ಗುಣಮಟ್ಟದ ಹಾಲಿನ ಉತ್ಪಾದನೆ ಹಾಗೂ ಉತ್ಪಾದನೆಗೆ ಬೇಕಾಗುವ ತರಬೇತಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿದೆ. ಮುಖ್ಯವಾಗಿ ಹುಲ್ಲು ಬೆಳೆಯಲು ಬೀಜವನ್ನು ಶೇ. 50ರಷ್ಟು ದರದಲ್ಲಿ ವಿತರಿಸಲು, ಹುಲ್ಲು ಕಟ್‌ ಮಾಡುವ ಯಂತ್ರ ವಿತರಿಸಲಾಗಿದೆ. ಇದು ಹಾಲು ಹೆಚ್ಚಳವಾಗಲು ಪೂರಕವಾಗಿದೆ. ಕಡಿಮೆ ಗುಣಮಟ್ಟದ ಹಾಲಿನ ಸರಬರಾಜು ನಿಯಂತ್ರಿಸಲು ಒಕ್ಕೂಟದ ಸಿಬ್ಬಂದಿ ಸಂಘದ ಮಟ್ಟದಲ್ಲಿ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದರು. ಗುಣಮಟ್ಟದ ಹಾಲನ್ನು ಗ್ರಾಹಕರಿಗೆ ಸರಬರಾಜು ಮಾಡಲೇಬೇಕಾಗಿದೆ. ಹೀಗಾಗಿ ಕೆಲವೊಂದು ಸಂದರ್ಭದಲ್ಲಿ ರೈತರಿಂದ ಕಲಬೆರಕೆ ಹಾಲು ಸರಬರಾಜು ಆದಾಗ ಗ್ರಾಹಕರ ಹಿತದೃಷ್ಟಿಯಿಂದ ತಿರಸ್ಕರಿಸಲಾಗುತ್ತಿದೆ. ಆದರೂ ಕಳೆದ ವರ್ಷದಿಂದ ಇದು ಕಡಿಮೆಯಾಗಿದೆ ಎಂದು ತಿಳಿಸಿದರು.

ಒಕ್ಕೂಟ ವ್ಯಾಪ್ತಿಯಲ್ಲಿ ಒಟ್ಟು 4.70 ಲಕ್ಷ ರೈತರು ಭೂಮಿಯನ್ನು ಹೊಂದಿದ ಕುಟುಂಬಗಳಿವೆ. ಈ ಪೈಕಿ 11200 ರೈತ ಕುಟುಂಬಗಳು (ಶೇ. 2.5) ಮಾತ್ರ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲನ್ನು ಪೂರೈಸುತ್ತಿವೆ. ಇದನ್ನು ವಿಸ್ತರಿಸಬೇಕಿದೆ. ಈಗಿರುವ 450 ಹಾಲು ಉತ್ಪಾದಕರ ಸಂಘಗಳಲ್ಲಿ ಇದರಲ್ಲಿ ಅರ್ಧ ಬಂದ್‌ ಆಗಿವೆ. 100ನ್ನು ಪುನಶ್ಚೇತನಗೊಳಿಸಲು ಮುಂದಾಗಲಾಗಿದೆ. 20 ಹೊಸದಾಗಿ ಸಂಘ ರಚಿಸಲು ಮುಂದಾಗಲಾಗಿದೆ ಎಂದರು.

Advertisement

ಬ್ಯಾಂಕ್‌ನ ನಿರ್ದೇಶಕರಾದ ಚಂದ್ರಕಾಂತ ಭೂಸನೂರು, ರೇವಣಸಿದ್ದಪ್ಪ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಈರಣ್ಣ ಝಳಕಿ, ವಿಠಲರೆಡ್ಡಿ, ಶ್ರೀಕಾಂತ ದಾನಿ, ವ್ಯವಸ್ಥಾಪಕ ನಿರ್ದೇಶಕ ಚಂದ್ರಶೇಖರ ಕಮಕೇರಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next