Advertisement

ಕ್ಯಾನ್ಸರ್‌ಗೆ ಜಾಗೃತಿ, ಆತ್ಮವಿಶ್ವಾಸವೇ ಔಷಧ

01:58 AM Feb 04, 2021 | Team Udayavani |

ಕ್ಯಾನ್ಸರ್‌ ಇಂದು ಜಾಗತಿಕವಾಗಿ ಮಾನವನ ಭವಿಷ್ಯವನ್ನು ಕಸಿದುಕೊಳ್ಳುತ್ತಿದೆ. ವಯಸ್ಸು, ಲಿಂಗ, ಜಾತಿ-ಮತ ಭೇದವಿಲ್ಲದೆ ಎಲ್ಲ ಸ್ತರಗಳ‌ ಜನರನ್ನೂ
ಕಾಡು ತ್ತಿದೆ. ದೇಹದಲ್ಲಿ ಅಸಹಜವಾಗಿ ಉತ್ಪತ್ತಿಯಾಗುವ (ಬೇಡವಾದ) ಜೀವಕೋಶಗಳಿಂದಾಗಿ ಕ್ಯಾನ್ಸರ್‌ ಕಾಣಿಸಿಕೊಳ್ಳುತ್ತದೆ. ಕ್ಯಾನ್ಸರ್‌ ಸಂಪೂರ್ಣವಾಗಿ ಗುಣವಾಗಬಹುದು ಇಲ್ಲವೇ ಜೀವವನ್ನೇ ಬಲಿ ತೆಗೆದುಕೊಳ್ಳಬಹುದು. ಹೀಗಾಗಿ ಮರಣಾಂತಿಕ ಕಾಯಿಲೆಯ ವಿರುದ್ಧ ಹೋರಾಡುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಫೆಬ್ರವರಿ 4 ಅನ್ನು ವಿಶ್ವ ಕ್ಯಾನ್ಸರ್‌ ದಿನವಾಗಿ ಆಚರಿಸುತ್ತಿದೆ.

Advertisement

ಕ್ಯಾನ್ಸರ್‌ ದೇಹದ ಯಾವುದೇ ಭಾಗಕ್ಕೆ ಆವರಿಸಿ ಕೊಳ್ಳಬಹುದಾದ ಕಾಯಿಲೆಯಾಗಿದೆ. ಅದರಲ್ಲಿ ಮುಖ್ಯವಾಗಿ ಬಾಯಿಯ ಕ್ಯಾನ್ಸರ್‌, ರಕ್ತ ಕ್ಯಾನ್ಸರ್‌ ಮತ್ತು ಸ್ತನ ಕ್ಯಾನ್ಸರ್‌ ಹೆಚ್ಚಾಗಿ ಮಾನವರನ್ನು ಕಾಡು ತ್ತದೆ. ಪ್ರತೀ ವರ್ಷ ಸ್ತನ ಕ್ಯಾನ್ಸರ್‌ನಿಂದಾಗಿ ಹೆಚ್ಚು ಸಾವುಗಳು ದಾಖಲಾಗುತ್ತಿವೆ. ದೇಹದ ಯಾವುದೇ ಭಾಗದಲ್ಲಿ ಗಂಟು, ಹೊಸ ನರಹುಲಿ ಅಥವಾ ಮಚ್ಚೆ ಕಂಡುಬರುವುದು. ಕಡಿಮೆಯಾಗದ ಕೆಮ್ಮು ಅಥವಾ ಗೊಗ್ಗರು ಧ್ವನಿ, ಮಲ ಅಥವಾ ಮೂತ್ರ ವಿಸರ್ಜನೆಯಲ್ಲಿ ಬದಲಾವಣೆ, ಸತತ ಅಜೀರ್ಣ ಮತ್ತು ನಗುವಾಗ ನೋವು, ತೂಕದಲ್ಲಿ ವ್ಯತ್ಯಾಸ, ಅಸಾಧಾರಣ ರಕ್ತಸ್ರಾವ ಮೊದಲಾದವುಗಳನ್ನು ಕ್ಯಾನ್ಸರ್‌ನ ಲಕ್ಷಣ ಅಥವಾ ಚಿಹ್ನೆಗಳೆಂದು ಪರಿಗಣಿಸಲಾಗುತ್ತದೆಯಾದರೂ ಎಲ್ಲ ತರಹದ ಕ್ಯಾನ್ಸರ್‌ ಪ್ರಕರಣಗಳಲ್ಲಿ ಈ ಲಕ್ಷಣಗಳು ಕಾಣಿಸಿಕೊಳ್ಳಲಾರವು. ಹಾಗಿದ್ದರೂ ಇಂತಹ ಲಕ್ಷಣ ಗಳು ಕಂಡುಬಂದಲ್ಲಿ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ಪಡೆದುಕೊಳ್ಳುವುದು ಆವಶ್ಯಕ.

ಉದರದ ಕರುಳಿನ ಕ್ಯಾನ್ಸರ್‌, ಗರ್ಭಕೋಶದ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌, ಯಕೃತ್ತಿನ ಕ್ಯಾನ್ಸರ್‌, ಬಾಯಿಯ ಕ್ಯಾನ್ಸರ್‌ಗಳ ಇರುವಿಕೆಯನ್ನು ರಕ್ತದ ಪರೀಕ್ಷೆ ಮಾಡಿ ಆರಂಭಿಕ ಹಂತದಲ್ಲಿಯೇ ಕಂಡುಹಿಡಿಯಬಹುದು. ವೃಷಣದ ಕ್ಯಾನ್ಸರ್‌, ಸ್ತನದ ಕ್ಯಾನ್ಸರ್‌ಗಳನ್ನು ಟ್ಯೂಮರ್‌ ಮಾರ್ಕರ್‌ ಎಂಬ ಕ್ಯಾನ್ಸರ್‌ ಮಾಹಿತಿ ಇರುವ ಜೀನ್‌ ಮುಖಾಂತರ ಪತ್ತೆ ಹಚ್ಚಬಹುದು. ಹೆತ್ತವರಲ್ಲಿ ಈ ರೀತಿ ಕ್ಯಾನ್ಸರ್‌ ಬಂದಿದ್ದಲ್ಲಿ ಮಕ್ಕಳು ನಡು ವಯಸ್ಸಿನಿಂದ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳುವುದು ಉತ್ತಮ.

ಹೆಚ್ಚಿನ ಎಲ್ಲ ಕ್ಯಾನ್ಸರ್‌ಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸಿದಲ್ಲಿ ಚಿಕಿತ್ಸೆಯಿಂದ ಗುಣಪಡಿಸಬಹುದು. ಮೆದುಳಿನ ಒಂದೆರಡು ತೀವ್ರತರವಾದ ಕ್ಯಾನ್ಸರ್‌ಗಳು ಮಾತ್ರ ಅಪಾಯಕಾರಿಯಾಗಿವೆ. ಕ್ಯಾನ್ಸರ್‌ ಎಂಬುದು ಜೀವಕೋಶಗಳಲ್ಲಿ ಉಂಟಾಗುವ ಅನಿ ಯಂತ್ರಿತ ವಿಭಜನೆ. ಹಾಗಾಗಿ ಕ್ಯಾನ್ಸರ್‌ ರೋಗಿಯನ್ನು ಧಾರಾಳವಾಗಿ ಮುಟ್ಟಬಹುದು. ರೋಗಿ ಜತೆಗಿನ ಸಂಪರ್ಕದಿಂದ ಇದು ಹರಡುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಕಲುಷಿತ ವಾತಾವರಣದಿಂದಾಗಿ ಸಣ್ಣ ಮಕ್ಕಳಿಂದ ಹಿರಿಯ ನಾಗರಿಕರವರೆಗೆ ಯಾರಿಗೆ ಬೇಕಾ ದರೂ ಬರಬಹುದು. ಕೆಲವು ವಿರಳ ಕ್ಯಾನ್ಸರ್‌ಗಳು ಸಣ್ಣ ಮಕ್ಕಳಲ್ಲಿ ಮಾತ್ರ ಕಂಡು ಬರುತ್ತವೆ. ಉದಾಹರಣೆಗೆ ಲಿಂಪೋಮಾ, ಲ್ಯುಕೇಮಿಯಾ ಇತ್ಯಾದಿ.

ಎಲ್ಲ ಕ್ಯಾನ್ಸರ್‌ಗಳಿಗೆ ಶಸ್ತ್ರ ಚಿಕಿತ್ಸೆ ಬೇಕಿಲ್ಲ. ಕೆಲವುಗಳಿಗೆ ಬರೀ ಕಿಮೋಥೆರಪಿ ಅಥವಾ ರೇಡಿಯೋಥೆರಪಿ ಮಾತ್ರ ನೀಡಲಾಗುತ್ತದೆ. ಯಾವ ಕ್ಯಾನ್ಸರ್‌ಗೆ ಯಾವ ಚಿಕಿತ್ಸೆ ಎಂಬುದನ್ನು ವೈದ್ಯರೇ ನಿರ್ಧರಿಸುತ್ತಾರೆ. ಅಂಗಾಂಶಗಳ ಕ್ಯಾನ್ಸರ್‌, ಅದರ ಗಾತ್ರ, ಅದರ ಚರಿತ್ರೆ ಮತ್ತು ಹರಡುವ ವೇಗ ಇವುಗಳ ಮೇಲೆ ಅವಲಂಬಿತವಾಗಿ ಚಿಕಿತ್ಸೆಯನ್ನು ನಿರ್ಧರಿಸಲಾಗುತ್ತದೆ. ಈ ವರೆಗೆ ಕ್ಯಾನ್ಸರ್‌ಗೆ ಲಸಿಕೆಯನ್ನು ಸಂಶೋಧಿಸಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಸಂಶೋಧನೆ ನಡೆಯತ್ತಿದೆ.

Advertisement

ಬಾಯಿಯ ಕ್ಯಾನ್ಸರ್‌ ಮತ್ತು ಶ್ವಾಸಕೋಶದ ಕ್ಯಾನ್ಸರ್‌ ಪುರುಷರಲ್ಲಿ ಶೇ. 25ಕ್ಕಿಂತ ಹೆಚ್ಚು ಕಂಡು ಬಂದಿದ್ದು ಸಾವು, ನೋವಿಗೆ ಇದು ಕಾರಣವಾಗಿದೆ. ಮಹಿಳೆಯರಲ್ಲಿ ಶೇ. 25ರಷ್ಟು ಸ್ತನ ಕ್ಯಾನ್ಸರ್‌ ಮತ್ತು ಬಾಯಿಯ ಕ್ಯಾನ್ಸರ್‌ ಕಂಡುಬರುತ್ತಿದೆ. ಪುರುಷರಲ್ಲಿ ಕಂಡುಬರುವ ಸಾಮಾನ್ಯ ಕ್ಯಾನ್ಸರ್‌ಗಳೆಂದರೆ ಬಾಯಿ ಯ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌, ಹೊಟ್ಟೆಯ ಕ್ಯಾನ್ಸರ್‌, ಪ್ರಾಸ್ಟೇಟ್‌ ಕ್ಯಾನ್ಸರ್‌, ಕೊಲೊ ರೆಕ್ಟಲ್‌ ಕ್ಯಾನ್ಸರ್‌ ಮತ್ತು ಅನ್ನನಾಳದ ಕ್ಯಾನ್ಸರ್‌. ಹಾಗೇ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌, ಗರ್ಭಕೋಶದ ಕ್ಯಾನ್ಸರ್‌, ಬಾಯಿಯ ಕ್ಯಾನ್ಸರ್‌, ಶ್ವಾಸಕೋಶದ ಕ್ಯಾನ್ಸರ್‌ ಮತ್ತು ಹೊಟ್ಟೆಯ ಕ್ಯಾನ್ಸರ್‌. ಪುರುಷರು ಮತ್ತು ಮಹಿಳೆಯರಲ್ಲಿ ಮೊದಲ ಐದು ಕ್ಯಾನ್ಸರ್‌ ಎಲ್ಲ ರೀತಿಯ ಕ್ಯಾನ್ಸರ್‌ಗಳಿಗೆ ಹೋಲಿಸಿದರೆ ಶೇ. 47.2ರಷ್ಟಿದೆ. ಸಾಮಾನ್ಯ ಜನರಿಗೆ ಹೋಲಿಸಿದರೆ ಕ್ಯಾನ್ಸರ್‌ ರೋಗಿಗಳು ಕೋವಿಡ್‌ಗೆ ಒಳಗಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಕ್ಯಾನ್ಸರ್‌ಪೀಡಿತರ ಬಗ್ಗೆ ಈಗ ಒಂದಿಷ್ಟು ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದೆ.
ನೋವು ಇರಲೇ ಬೇಕೆಂದಿಲ್ಲ

ಕ್ಯಾನ್ಸರ್‌ ಇದೆ ಎಂದ ಮಾತ್ರಕ್ಕೆ ನೋವು ಇರಲೇಬೇ ಕೆಂದೇನೂ ಇಲ್ಲ. ರೋಗಿಗೆ ಯಾವ ಬಗೆಯ ಕ್ಯಾನ್ಸರ್‌ ಇದೆ ಎಂಬುದರ ಮೇಲೆ ನೋವು ಇದೆಯೇ ಇಲ್ಲವೇ, ರೋಗದ ತೀವ್ರತೆ ಮತ್ತು ರೋಗಿಯ ನೋವು ತಾಳಿ ಕೊಳ್ಳುವ ಗುಣದ ಮೇಲೆ ನಿರ್ಧರಿತವಾಗುತ್ತದೆ. ಕ್ಯಾನ್ಸರ್‌ ಬೆಳೆದು, ಮೂಳೆ, ಅಂಗ ಮತ್ತು ನರಗಳ ಮೇ ಲೆ ಒತ್ತಡ ಹೇರುವುದರಿಂದ ನೋವು ಉಂಟಾಗುತ್ತದೆ. ನೋವು ಅವಿಭಾಜ್ಯ ಭಾಗವಲ್ಲ ಎನ್ನುತ್ತಾರೆ ತಜ್ಞರು.

ದ್ವಿ ಗುಣಗೊಳ್ಳುವ ಅಪಾಯ

2040ರ ವೇಳೆಗೆ ಭಾರತದಲ್ಲಿನ ಕ್ಯಾನ್ಸರ್‌ ಪ್ರಮಾಣ ದ್ವಿಗುಣಗೊಳ್ಳುವ ಸಾಧ್ಯತೆ ಇದೆ. ನೋಯ್ಡಾದ ರಾಷ್ಟ್ರೀಯ ಕ್ಯಾನ್ಸರ್‌ ತಡೆ ಮತ್ತು ಸಂಶೋಧನ ಸಂಸ್ಥೆಯ ಅಧ್ಯಯನದ ಪ್ರಕಾರ ಭಾರತದಲ್ಲಿ 2.25 ದಶಲಕ್ಷ ಮಂದಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು 2040ರ ವೇಳೆಗೆ ಇದು ದ್ವಿಗುಣಗೊಳ್ಳಲಿದೆ ಎಂದಿದೆ. ಪ್ರತೀ ವರ್ಷಕ್ಕೆ 1 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆೆ ಎಂದು ಕ್ಯಾನ್ಸರ್‌ಇಂಡಿಯಾ.ಆರ್ಗ್‌ ವರದಿ ತಿಳಿಸಿದೆ.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಶೇ. 30-50ರಷ್ಟು ಕ್ಯಾನ್ಸರ್‌ ರೋಗಗಳನ್ನು ತಡೆಯಬಹುದಾಗಿದೆ. ಇದ ಕ್ಕಾಗಿ ತಂಬಾಕು ಮತ್ತು ಯುವಿ ಕಿರಣಗಳಿಂದ ಅಂತರ ಕಾಯ್ದುಕೊಳ್ಳುವುದು ಅಗತ್ಯ. ಒಂದು ಸಿಗರೇಟ್‌ನಲ್ಲಿ ಸುಮಾರು 7,000 ರಾಸಾಯನಿಕಗಳಿವೆ ಎನ್ನಲಾ ಗುತ್ತಿದ್ದು, ಅವುಗಳಲ್ಲಿ 50 ರಾಸಾಯನಿಕಗಳು ಕ್ಯಾನ್ಸರ್‌ಗೆ ಕಾರಣವಾಗುತ್ತವೆ ಎಂದೂ ಅದು ಹೇಳಿದೆ.

ತಡೆಗಟ್ಟುವುದು ಹೇಗೆ?
ಈ ಮಹಾಮಾರಿಯನ್ನು ತಡೆಯಲು ಸಾಕಷ್ಟು ಕ್ರಮಗಳಿವೆ. ತರಕಾರಿ ಮತ್ತು ಹಣ್ಣನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ದಿನನಿತ್ಯ ಪೌಷ್ಟಿಕಾಂಶ ಮತ್ತು ವಿಟಮಿನ್‌ಗಳುಳ್ಳ ಆಹಾರ ಸೇವನೆ ಹೆಚ್ಚು ಪರಿಣಾಮಕಾರಿ. ಜಂಕ್‌ಫ‌ುಡ್‌ ಸೇವನೆ, ತಂಬಾಕು ಸೇವನೆ, ಧೂಮಪಾನ, ಮದ್ಯಪಾನದಂತಹ ಚಟಗಳಿಗೆ ಶಾಶ್ವತವಾಗಿ ಗುಡ್‌ಬೈ ಹೇಳಬೇಕು. ನಿಯಮಿತವಾಗಿ ನಿದ್ದೆ, ಪ್ರತಿದಿನ ವ್ಯಾಯಾಮ ಹಾಗೂ ವಾಕಿಂಗ್‌ ಮಾಡಬೇಕು. ಇನ್ನು ಮಹಿಳೆಯರು ನಿಗದಿತ ಸಮ ಯಕ್ಕೂ ಮುನ್ನವೇ ಮಕ್ಕಳಿಗೆ ಹಾಲೂಡಿಸುವುದನ್ನು ನಿಲ್ಲಿಸದಿರುವುದು ಸೂಕ್ತ.

Advertisement

Udayavani is now on Telegram. Click here to join our channel and stay updated with the latest news.

Next