Advertisement

ಡ್ರೋನ್ ಗೆ ಧ್ವನಿವರ್ಧಕ ಕಟ್ಟಿ ಪ್ರಚಾರ: ಚಿಕ್ಕಬಳ್ಳಾಪುರ ಪೊಲೀಸರ ವಿನೂತನ ಪ್ರಯತ್ನ

05:49 PM Apr 19, 2020 | keerthan |

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ 4 ಕೋವಿಡ್-19 ಸೋಂಕಿತರು ಕಂಡು ಬಂದಿರುವ ಹಿನ್ನಲೆಯಲ್ಲಿ ನಗರದ 31 ವಾರ್ಡ್ ಗಳನ್ನು ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು‌ ಪೊಲೀಸರು ಪ್ರಚಾರ ಕಾರ್ಯಕ್ಕೆ ಡ್ರೋನ್ ಬಳಸುತ್ತಿದ್ದಾರೆ.

Advertisement

ಸಾಮಾನ್ಯವಾಗಿ ಡ್ರೋನ್ ಮೂಲಕ ನಗರದ ಪ್ರದೇಶಗಳನ್ನು ಆಗಮಿಸಿ‌ ಸಾರ್ವಜನಿಕರು ಕಂಡು‌ ಬರುವ ಕಡೆ ಪೊಲೀಸ್ ರನ್ನು ಕಳುಹಿಸಿ ಜನರನ್ನು ನಿಯಂತ್ರಣ ಮಾಡುವುದು ಸಹಜ. ಆದರೆ ಜಿಲ್ಲೆಯ ಪೊಲೀಸರು ಒಂದು ಹೆಜ್ಜೆ ಮುಂದೆ ಹೋಗಿ ಡ್ರೋನ್ ಗೆ ಧ್ವನಿವರ್ಧಕವನ್ನು ಅಳವಡಿಸಿ‌ ಜನ ಯಾರು‌ ಹೊರಗೆ ಬಾರದಂತೆ ಕಟ್ಟುನಿಟ್ಟಾದ ಸೂಚನೆ‌ ನೀಡಲಾಗುತ್ತಿದೆ

ಅಲ್ಲದೇ ಸಾರ್ವಜನಿಕರು ಸೋಂಕು ಹರಡದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ‌ ಅರಿವು ಮೂಡಿಸಿ‌‌ ಸೀಲ್ ಡೌನ್‌ ಗೆ ಸಹಕರಿಸುವಂತೆ ಕೋರುತ್ತಿದ್ದಾರೆ. ಈ ವಿನೂತನ ಕಾರ್ಯಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next