ದಾವಣಗೆರೆ: ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ವತಿಯಿಂದ ಶನಿವಾರ ಆಯೋಜಿಸಿದ್ದ ಕ್ಯಾನ್ಸರ್‌ನಡೆ-ಕೋವಿಡ್ ತಡೆ ಜಾಗೃತಿಅಭಿಯಾನ ಗಮನ ಸೆಳೆಯಿತು.
ಬೆಳಗ್ಗೆಯಿಂದಲೇ ಕುಂದುವಾಡ ಕೆರೆಯ ಏರಿ ಮೇಲೆ ವಾಕ್ ಮಾಡುವವರಿಗೆ ಜಾಗೃತಿ ಮೂಡಿಸಲು ಕಲಾವಿದ ರವೀಂದ್ರ ಅರಳಿಗುಪ್ಪಿ ರಚಿಸಿದ ಚಿತ್ರಗಳನ್ನು ಮತ್ತು ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ| ಅಂದನೂರು ರುದ್ರಮುನಿ ಕ್ಯಾನ್ಸರ್-ಕೋವಿಡ್ ಎದುರಿಸುವ ಜಾಗೃತಿ ಹಾಡಿನ ವಿಡಿಯೋ ಬಿಡುಗಡೆ ಮಾಡಿದರು.
ಹೆದರಬೇಡಿ ಬೆದರಬೇಡಿ…ಎಂಬ ಸಾಲಿನೊಂದಿಗೆ ಆರಂಭವಾಗುವ ಸಮಾಜಕ್ಕೆ ಧೈರ್ಯ ತುಂಬುವ ಗೀತೆಯ ಕುರಿತು ಮಾತನಾಡಿದ ಕಲಾವಿದ ಅರುಣ್ ಕುಮಾರ್,ಈ ಗೀತೆಯನ್ನು ಡಾ| ಶಿವಕುಮಾರ್ ಸೂಚನೆಯ ಮೇರೆಗೆ ರಚಿಸಿದ್ದೇನೆ. ದಾವಣಗೆರೆಯಪ್ರತಿಭೆಗಳಾದ ಗಂಗಾಧರಸ್ವಾಮಿ, ಚೇತನ್‌ಕುಮಾರ್ ಜೆ., ಸರ್ವಮಂಗಳ, ನಿಶಾ ಹಾಡಿದ್ದಾರೆ. ಗಂಗಾ-ಶಂಕರ್ ಜೋಡಿ ಸಂಗೀತ ನಿರ್ದೇಶನ ಮಾಡಿದರೆ, ಉಮಾಶಂಕರ್ ಕುರುಡಿ ಸಂಕಲನ ಮಾಡಿದ್ದಾರೆ. ವಿಡಿಯೋಪರಿಣಾಮಕಾರಿಯಾಗಿ ಮೂಡಿ ಬಂದಿದ್ದು ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ, ಸ್ಥಳೀಯ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಲಿದೆ ಎಂದು ತಿಳಿಸಿದರು.
ಇಂಡಿಯನ್ ರೆಡ್‌ಕ್ರಾಸ್, ಲೈಫ್ ಲೈನ್ ಅಧ್ಯಕ್ಷ, ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ನಿರ್ದೇಶಕ ಡಾ| ಎ.ಎಂ. ಶಿವಕುಮಾರ್, ಡಾ| ಸುನೀಲ್ ಬ್ಯಾಡಗಿ, ಲೈಫ್‌ಲೈ ನ್ ಕಾರ್ಯದರ್ಶಿ ಅನಿಲ್ ಬಾರಂಗಳ್, ಶೇಷಾಚಲ, ಡಾ| ಶಿಲ್ಪಾ, ಮಾಧವ ಪದಕಿ, ಎಂ.ಜಿ. ಶ್ರೀಕಾಂತ್, ಇನಾಯತ್, ಗೋಪಾಲ್‌ಕೃಷ್ಣ, ಪೃಥ್ವಿ ಬಾದಾಮಿ, ವಿಜಯ್ ಕುಮಾರ್, ಆರ್.ಟಿ. ಮೃತ್ಯುಂಜಯ,ಆನಂದ್, ಕೆ.ಬಿ. ದಯಾನಂದ, ನಟರಾಜ್, ಡಾ| ಹೆಗಡೆ, ಡಾ| ಆರತಿ ಸುಂದರೇಶ್, ಜಯರುದ್ರೇಶ್, ತಿಪ್ಪೇಸ್ವಾಮಿ, ಪ್ರಾಂಶುಪಾಲ ಸುನೀಲ್,ರವೀಂದ್ರನಾಥ್ ಅರಳಿಗುಪ್ಪಿ, ಇಂಪನಾ ಮತ್ತು ಇತರೆ ಕಲಾವಿದರು ಭಾಗವಹಿಸಿದ್ದರು.