Advertisement
ಅನೇಕ ಮಂದಿ ಅಂಧರು ಕತ್ತಲಲ್ಲಿ ದಿನ ದೂಡುತ್ತಿದ್ದಾರೆ. ಕಣ್ಣು ದಾನ ಮಾಡಿದರೆ ಅಂಥವರ ಪಾಲಿಗೆ ಬೆಳಕು ನೀಡಿದಂತಾಗುತ್ತದೆ. ವಿದ್ಯಾರ್ಥಿಗಳು, ಯುವಕರಲ್ಲಿ ಈ ಬಗ್ಗೆ ಹೆಚ್ಚು ಜಾಗೃತಿ ಮೂಡಬೇಕಾಗಿದೆ ಎಂದರು. ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಕೆ. ಪ್ರಸ್ತಾವನೆಗೈದು, ದೇಶಾದ್ಯಂತ ಕನಿಷ್ಠ 30,000 ಮಂದಿಗೆ ಕಣ್ಣಿನ ಕರಿಗುಡ್ಡೆ ಆವಶ್ಯಕತೆ ಇದೆ. ಮಿಲಿಯಗಟ್ಟಲೆ ಜನ ದೃಷ್ಟಿ ಹೊಂದಿಲ್ಲ. ಆದರೆ ದೇಶದಲ್ಲಿ ವರ್ಷದಲ್ಲಿ ಕೇವಲ 69,000 ಮಂದಿ ಮಾತ್ರ ಕಣ್ಣುದಾನ ಮಾಡುತ್ತಿದ್ದಾರೆ ಎನ್ನಲು ಬೇಸರವಾಗುತ್ತದೆ. ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಗರಿಷ್ಠ ನಾಲ್ವರಿಗೆ ಕನಿಷ್ಠ ಇಬ್ಬರಿಗೆ ದೃಷ್ಟಿ ಲಭಿಸುತ್ತದೆ. ಮರಣದ ಬಳಿಕ ಇತರರ ಬಾಳಲ್ಲಿ ಬೆಳಕು ನೀಡುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ ಎಂದು ಹೇಳಿದರು.
Advertisement
ನೇತ್ರದಾನದ ಜಾಗೃತಿ ಅಗತ್ಯ: ಆಸ್ಕರ್ ಫೆರ್ನಾಂಡಿಸ್
12:34 PM Sep 13, 2018 | |
Advertisement
Udayavani is now on Telegram. Click here to join our channel and stay updated with the latest news.