Advertisement

ಆತ್ಮಸಾಕ್ಷಿಗನುಗುಣವಾಗಿ ಕಾರ್ಯ ನಿರ್ವಹಿಸಿ

03:54 PM Oct 31, 2021 | Team Udayavani |

ಶಿವಮೊಗ್ಗ: ಸರ್ಕಾರಿ ಅಧಿ ಕಾರಿ-ನೌಕರರು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿಸಾರ್ವಜನಿಕ ಸೇವೆಯನ್ನು ನೀಡಿದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವೇ ಇರುವುದಿಲ್ಲ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸರಸ್ವತಿ ಕೆ.ಎನ್‌. ಹೇಳಿದರು.

Advertisement

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಪಂ, ಭ್ರಷ್ಟಾಚಾರ ನಿಗ್ರಹ ದಳ ಹಾಗೂ ಲೋಕಾಯುಕ್ತ ಪೊಲೀಸ್‌ ಠಾಣೆ, ಜಿಲ್ಲಾ ನ್ಯಾಯವಾದಿಗಳ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಜಿಪಂನ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ “ಭ್ರಷ್ಟಾಚಾರ ವಿರುದ್ಧ ಜಾಗೃತಿ’ ಮೂಡಿಸುವ ಅರಿವು ಸಪ್ತಾಹದ ಅಂಗವಾಗಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭ್ರಷ್ಟಾಚಾರ ಒಂದು ಸಾಮಾಜಿಕ ಪಿಡುಗು. ಇದರಿಂದ ಜನಸಾಮಾನ್ಯರು ಸರ್ಕಾರಿ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಎಲ್ಲ ಸಾರ್ವಜನಿಕ ನೌಕರರು ತಮ್ಮ ಜವಾಬ್ದಾರಿಗಳನ್ನು ಅರಿತು ಆತ್ಮಸಾಕ್ಷಿಯಿಂದ ಕರ್ತವ್ಯ ನಿರ್ವಹಿಸುವ ಮೂಲಕ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರಿ ಸೌಲಭ್ಯ, ಯೋಜನೆಗಳನ್ನು ತಲುಪಿಸಬೇಕು ಎಂದರು.

ಜಿಪಂ ಸಿಇಒ ಎಂ.ಎಲ್‌. ವೈಶಾಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಎಲ್ಲ ನೌಕರರು “ತಬರನ ಕಥೆ’ ಚಲನಚಿತ್ರ ಒಮ್ಮೆ ನೋಡಬೇಕು.ತಬರನಿಗೆ ಹೇಗೆ ಸೌಲಭ್ಯ ನೀಡಲುಅಲೆದಾಡಿಸುತ್ತಾರೆ. ಅದರ ಪರಿಣಾಮವೇನು ಎಂದು ತಿಳಿಯುತ್ತದೆ. ಅವಶ್ಯಕತೆ ಇರುವವರೇ ಸೇವೆ ಪಡೆಯಲು ಬಂದಿರುತ್ತಾರೆ. ಅವರಿಂದ ಏನೂ ಅಪೇಕ್ಷಿಸದೇ ಕೆಲಸ ಮಾಡಿಕೊಡಬೇಕು. ಸರ್ಕಾರಿ ನೌಕರಿ ಯಾವುದೋ ಒಂದುಪುಣ್ಯದಿಂದ ಲಭಿಸಿರುತ್ತದೆ. ಸೇವೆ ಮಾಡಲು ಒಂದು ಉತ್ತಮ ಅವಕಾಶ ಇದಾಗಿದ್ದು ಈ ಕೆಲಸಕ್ಕೆ ನ್ಯಾಯ ಒದಗಿಸಬೇಕು ಎಂದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ್‌, ಸಿಪಿಒ ಉಮಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಕಾರಿಗಳು ಇದ್ದರು.

Advertisement

ಎಲ್ಲ ಸರ್ಕಾರಿ ನೌಕರರು ತಮ್ಮ ನಿಯಮಗಳು ಮತ್ತು ಕಾಯ್ದೆಗಳಿಗೆ ಬದ್ಧರಾಗಿ ಕರ್ತವ್ಯ ನಿರ್ವಹಿಸಬೇಕು. ವೈಯಕ್ತಿಕ ನಡವಳಿಕೆ ಅತ್ಯಂತ ಪ್ರಮುಖವಾಗಿದ್ದು ವ್ಯವಸ್ಥೆಯನ್ನು ದೂಷಣೆ ಮಾಡದೆ ತಾನು ವೈಯಕ್ತಿಕವಾಗಿ ಮನಃಸಂತೋಷದಿಂದ ಕೆಲಸ ಮಾಡಬೇಕು. -ಎನ್‌. ಮೃತ್ಯುಂಜಯ್‌, ಲೋಕಾಯಕ್ತ ಪೊಲೀಸ್‌ ಉಪಾಧಿಧೀಕ್ಷಕರು

ಯಾವುದೇ ಒಬ್ಬ ಸರ್ಕಾರಿ ಅಧಿಕಾರಿ ತನ್ನ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಲ್ಲಿ ಅಂತಹವರ ಮೇಲೆ ನಿಗಾ ಇಟ್ಟು ಗೌಪ್ಯ ವರದಿ ಸಿದ್ಧಪಡಿಸಿ ನಂತರ ಎಫ್‌ಐಆರ್‌ ಮಾಡಲಾಗುತ್ತದೆ. ಅಕ್ರಮ ಆಸ್ತಿ ವರದಿ ಸಿದ್ಧಪಡಿಸಿ ಕ್ರಮ ವಹಿಸಲಾಗುತ್ತದೆ. ಕಚೇರಿಗಳಲ್ಲಿ ಇಲಾಖಾ ಮುಖ್ಯಸ್ಥರು ತಮ್ಮ ಅಧಿಧೀನ ಸಿಬ್ಬಂದಿಗಳ ಮೇಲೆ ನಿಗಾ ವಹಿಸಬೇಕು. -ಲೋಕೇಶ್‌, ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್‌ ಉಪಾಧಿಧೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next