Advertisement

ಮತದಾನ ಹೆಚ್ಚಳಕ್ಕೆ ಜಿಲ್ಲೆಯಾದ್ಯಂತ ಜಾಗೃತಿ

06:50 AM Mar 15, 2019 | |

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ವತಿಯಿಂದ ಸ್ವೀಪ್‌ ಚಟುವಟಿಕೆಯಡಿ
ಗುರುವಾರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ಬೈಕ್‌ ರ್ಯಾಲಿ ಮೂಲಕ ಮತದಾನ ಜಾಗೃತಿ ಆಂದೋಲನ ನಡೆಯಿತು.

Advertisement

ಜಿಲ್ಲಾ ಪಂಚಾಯತ್‌ ಸಿಇಓ ಬಸವರಾಜೇಂದ್ರ ಬೈಕ್‌ ರ್ಯಾಲಿಗೆ ತಾಲೂಕು ಪಂಚಾಯಿತಿ ಕಾರ್ಯಾಲಯದ ಬಳಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ರ್ಯಾಲಿಯಲ್ಲಿ ನನ್ನ ಮತ ಮಾರಾಟಕ್ಕಿಲ್ಲ. ನಾನು ತಪ್ಪದೆ ಮತ ಚಲಾಯಿಸುತ್ತೇನೆ . ನೀವು?, ಕಡ್ಡಾಯ ಮತದಾನ ಸದೃಢ ಪ್ರಜಾಪ್ರಭುತ್ವಕ್ಕೆ ವರದಾನ, ಬನ್ನಿ ಬನ್ನಿ ಮತ ಚಲಾಯಿಸಿ, ನಿಮ್ಮ ಹಕ್ಕು ಉಪಯೋಗಿಸಿ ಎಂಬ ಮತದಾನ ಜಾಗೃತಿ ಮೂಡಿಸುವ ಘೋಷಣಾ ವಾಕ್ಯಗಳನ್ನು ಕೂಗಲಾಯಿತು. 

ಎಲೆಬೇತೂರು, ರಾಂಪುರ, ನಾಗರಕಟ್ಟೆ, ಕಾಡಜ್ಜಿ, ಆಲೂರು, ಶ್ರೀರಾಮನಗರ, ಮೆಳ್ಳಕಟ್ಟೆ, ಅಣಜಿ, ಹುಲಿಕಟ್ಟೆ, ಗುಡಾಳು,
ಕಂದನಕೋವಿ, ಪವಾಡರಂಗವ್ವನಹಳ್ಳಿ, ಶಿವಪುರ, ಆನಗೋಡು, ಹೊನ್ನೂರು ಮಾರ್ಗದಲ್ಲಿ ಸಾಗಿ ರ್ಯಾಲಿ ಮೂಲಕ ಜಾಗೃತಿ ಮೂಡಿಸಲಾಯಿತು ಎಂದು ತಾಲೂಕು ಪಂಚಾಯತ್‌ ಕಾರ್ಯನಿರ್ವಾಹಕ ಅಧಿಕಾರಿ ಎಲ್‌.ಎಸ್‌.ಪ್ರಭುದೇವ್‌ ತಿಳಿಸಿದ್ದಾರೆ.

ಮೊರಾರ್ಜಿ ಶಾಲೆ: ವಡೇರಹಳ್ಳಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನಿತಾ, ಪ್ರಾಂಶುಪಾಲ ಪ್ರಶಾಂತರಾಜ್‌ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು.

Advertisement

ಶಾಲೆಯ ವಿದ್ಯಾರ್ಥಿಗಳಿಂದ ಪೋಷಕರು ಹಾಗೂ ಸಂಬಂಧಿಕರಿಗೆ ಕಡ್ಡಾಯವಾಗಿ ಮತದಾನ ಮಾಡುವಂತೆ ಪ್ರೇರೇಪಿಸಿ ಪತ್ರ ಬರೆಯಿಸಲಾಯಿತು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶಿವಾನಂದ ಕುಂಬಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಅರಣ್ಯ ವಿಭಾಗ: ಹರಿಹರ ಸಾಮಾಜಿಕ ಅರಣ್ಯ ವಲಯ ಮತ್ತು ಅದರ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯತ್‌ ಗಳಲ್ಲಿ ಮತದಾನ ಜಾಗೃತಿ (ಸ್ವೀಪ್‌) ಕಾರ್ಯಕ್ರಮವನ್ನು ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಬಿ.ಟಿ.ಶ್ರೀನಿವಾಸ್‌ ನೇತೃತ್ವದಲ್ಲಿ ನಡೆಸಲಾಯಿತು.

ಚನ್ನಗಿರಿಯಲ್ಲಿ: ಚನ್ನಗಿರಿ ಸಾಮಾಜಿಕ ಅರಣ್ಯ ವಲಯ ಮತ್ತು ಅದರ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯತ್‌ಗಳಲ್ಲಿ ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಬಿ.ಆನಂದ್‌ ನೇತೃತ್ವದಲ್ಲಿ ಮತ ಜಾಗೃತಿ ಮೂಡಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ಜಗಳೂರಲ್ಲಿ: ಜಗಳೂರು ಸಾಮಾಜಿಕ ಅರಣ್ಯ ವಲಯ ಮತ್ತು ಅದರ ವ್ಯಾಪ್ತಿಗೊಳಪಡುವ ಗ್ರಾಮ ಪಂಚಾಯತ್‌ಗಳಲ್ಲಿ ಸಾಮಾಜಿಕ ಅರಣ್ಯ ವಲಯದ ಅರಣ್ಯಾಧಿಕಾರಿ ಎನ್‌.ಎಂ.ಲಿಂಗಪ್ಪರ ನೇತೃತ್ವದಲ್ಲಿ ಸ್ವೀಪ್‌ ಕಾರ್ಯಕ್ರಮದಡಿ ಮತದಾನ ಜಾಗೃತಿ ಮೂಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next