Advertisement

ಎಚ್‌ಐವಿ ಕುರಿತು ಜಾಗೃತಿ ಅಗತ್ಯ: ಜಗದೀಶ್‌

03:02 PM Feb 26, 2022 | Team Udayavani |

ಕೋಲಾರ: ಎಚ್‌ಐವಿ ಸೋಂಕಿಂದ ಮುಕ್ತಿ ಪಡೆಯಲು ಸಾಧ್ಯವಿಲ್ಲ. ಪ್ರಾಥಮಿಕ ಹಂತದಿಂದಲೇಜಾಗೃತಿವಹಿಸಿದಾಗ ಸೋಂಕಿನಿಂದ ಮುಕ್ತರಾಗಲುಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್‌ ತಿಳಿಸಿದರು.

Advertisement

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಇಲ್ಲಿನ ನಗರಸಭೆಯ ಆವರಣದಲ್ಲಿನಗರಸಭೆ ಸದಸ್ಯರು ಹಾಗೂ ಅಧಿಕಾರಿಗಳಿಗೆಆಯೋಜಿಸಿದ್ದ ಎಚ್‌ಐವಿ ಹಾಗೂ ಏಡ್ಸ್‌ ಕುರಿತುತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿ,ಮುಖ್ಯವಾಗಿ 4 ಮಾರ್ಗದಲ್ಲಿ ಎಚ್‌ಐವಿ ಸೋಂಕು ಹರಡುತ್ತದೆ. ಅಸುರಕ್ಷಿತ ಲೈಂಗಿಕ ಸಂಪರ್ಕ,ಸೋಂಕಿತ ವ್ಯಕ್ತಿಯ ರಕ್ತ ಪರೀಕ್ಷೆ ಮಾಡದೆ ಪಡೆಯುವುದರಿಂದ, ಸೋಂಕಿತ ತಾಯಿಯಿಂದ ಮಗುವಿನ ಗರ್ಭಾವಸ್ಥೆಯಲ್ಲಿ, ಹೆರಿಗೆ ಸಮಯದಲ್ಲಿ,ಎದೆ ಹಾಲಿನ ಮೂಲಕ ಹಾಗೂ ಸಂರಕ್ಷಣೆ ಮಾಡದಸೂಜಿ ಸಿರಂಜ್‌ ಬಳಸುವುದರಿಂದ ಸೋಂಕು ಹರಡುತ್ತಿದೆ ಎಂದರು.

ಎಚ್‌ಐವಿ ಸೋಂಕು, ಏಡ್ಸ್‌ ಎಂಬುದು ಒಂದು ಕಾಯಿಲೆ, ಈ ಎರಡಕ್ಕೂ ವ್ಯಾತ್ಯಸಗಳಿವೆ. ಈಗಾಗಲೇಇದಕ್ಕಿಂತ ಗಂಭೀರವಾದ ಕೋವಿಡ್‌ ಸೋಂಕಿನಹಾವಳಿಯನ್ನು ಜನ ಎದುರಿಸಿದ್ದಾರೆ. ಯಾವುದೇ ಒಂದು ಕಾಯಿಲೆ ಅಥವಾ ಸೋಂಕಿನ ಬಗ್ಗೆ ಮಾಹಿತಿಪಡೆದುಕೊಂಡಾಗ ಅದರಿಂದ ಮುಕ್ತಿಪಡೆಯಲುಸಾಧ್ಯ ಎಂದು ಎಚ್ಚರಿಸಿದರು.

ಸ್ವಯಂ ಚಿಕಿತ್ಸೆ ಅಪಾಯಕಾರಿ: ಪೌರಾಯುಕ್ತಪ್ರಸಾದ್‌ ರೆಡ್ಡಿ ಮಾತನಾಡಿ, ಭಾರತದಲ್ಲಿ ಪ್ರಥಮವಾಗಿ ಪೋಲಿಯೋ ನಂತರದಲ್ಲಿ ಏಡ್ಸ್‌ ಮತ್ತುಎಚ್‌.ಐ.ವಿ. ಮುಂಜಾಗೃತಿ ಬಗ್ಗೆ ಸರ್ಕಾರ ಹೆಚ್ಚುಪ್ರಚಾರ ಮಾಡಿತು. ಇಂದಿನ ಅಧುನಿಕ ತಂತ್ರಜ್ಞಾನ ಬಳಿಸಿ ಹಲವಾರು ಔಷಧಿ ಕಂಡು ಹಿಡಿಯಲಾಗಿದೆ.ಅದರೆ, ಕೆಲವರು ಇಂದಿಗೂ ವೈದ್ಯರ ಬಳಿ ಹೋಗದೆತಾವೇ ಔಷಧಿ ಅಂಗಡಿಗಳಲ್ಲಿ ಔಷಧಿ ಪಡೆದುಸ್ವಯಂ ಚಿಕಿತ್ಸೆ ಪಡೆಯುವುದು ಅಪಾಯಕಾರಿಯಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳಿರುವುದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ನಗರಸಭೆ ಅಧ್ಯಕ್ಷೆ ಶ್ವೇತ, ಉಪಾಧ್ಯಕ್ಷಪ್ರವೀಣ್‌ ಗೌಡ, ಸದಸ್ಯರಾದ ಸುರೇಶ್‌, ಮಂಜುನಾಥ್‌, ರಾಕೇಶ್‌, ಏಡ್ಸ್‌ ನಿಯಂತ್ರಣಾಧಿಕಾರಿ ಡಾ.ಕಮಲಮ್ಮ ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next