Advertisement

ಬರಾಕ್ ಒಬಾಮ ಸೇರಿದಂತೆ ಹಲವರ ಟ್ವಿಟ್ಟರ್ ಅಕೌಂಟ್ ಹ್ಯಾಕ್: ಹ್ಯಾಕರ್ ಬೇಡಿಕೆಯೇನು ಗೊತ್ತಾ ?

03:23 PM Jul 16, 2020 | Mithun PG |

ಸನ್ ಫ್ರಾನ್ಸಿಸ್ಕೋ: ಹಣಕ್ಕಾಗಿ ಜುಲೈ 15ರ ಬುಧವಾರದಂದು ಪ್ರತಿಷ್ಟಿತ ವ್ಯಕ್ತಿಗಳ ಟ್ವಿಟ್ಟರ್ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗಿದ್ದು ಭದ್ರತಾ ವೈಫಲ್ಯವನ್ನು ಸರಿಪಡಿಸಲಾಗುತ್ತಿದೆ ಎಂದು ಟ್ವಿಟ್ಟರ್ ಇಂಕ್ ತಿಳಿಸಿದೆ.

Advertisement

ಹಲವರ ಟ್ವಿಟ್ಟರ್ ಖಾತೆಗಳು ಹ್ಯಾಕ್ ಆಗಿರುವುದು ನಮ್ಮ ಗಮನಕ್ಕೆ ಬಂದಿದ್ದು ಈ ಕುರಿತು ತನಿಖೆ ನಡೆಸುತ್ತಿದ್ದೇವೆ. ಮಾತ್ರವಲ್ಲದೆ ಲೋಪ ಸರಿಪಡಿಸಸಲು ಕ್ರಮಕೈಗೊಳ್ಳಲಾಗುತ್ತಿದೆ. ಹ್ಯಾಕ್ ಆದ ಹಲವರ ಅಕೌಂಟ್ ಗಳನ್ನು ಲಾಕ್ ಮಾಡಲಾಗಿದ್ದು, ಅವರ ಖಾತೆ ಮೂಲಕ ಮಾಡಲಾದ ಟ್ವಿಟ್ ಗಳನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿಸಿದೆ.

ಅಮೆರಿಕಾದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಜೋ ಬಿಡೆನ್, ಟೆಸ್ಲಾ ಕಂಪೆನಿಯ ಸಿಇಓ ಎಲೋನ್ ಮಾಸ್ಕ್, ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಓಬಾಮ, ಬಿಲ್ ಗೇಟ್ಸ್, ಉಬರ್, ಆ್ಯಪಲ್ ಸೇರಿದಂತೆ ಹಲವು ಪ್ರತಿಷ್ಟಿತ ಕಂಪೆನಿಗಳು ಮತ್ತು ವ್ಯಕ್ತಿಗಳ ಟ್ವಿಟ್ಟರ್ ಖಾತೆಗಳು ಬುಧವಾರ ರಾತ್ರಿ ಹ್ಯಾಕ್ ಆಗಿದ್ದವು.

ಹ್ಯಾಕ್ ಆದ ಎಲ್ಲರ ಟ್ಟಿಟ್ಟರ್ ಗಳಲ್ಲೂ ‘ಈ ವಿಳಾಸಕ್ಕೆ ನೀವು ಇನ್ನು 30 ನಿಮಿಷಗಳಲ್ಲಿ 1000 ಬಿಟ್ ಕಾಯಿನ್ ಕಳುಹಿಸಿದರೆ ನಾನು  ನಿಮಗೆ ಅದರ ಎರಡು ಪಟ್ಟನ್ನು ಹಿಂದಿರುಗಿಸುತ್ತೇನೆ’ ಎಂಬ ಒಕ್ಕಣೆಯಿದ್ದವು.

Advertisement

ಘಟನೆ ಹಿನ್ನಲೆ ಟ್ಟಿಟ್ಟರ್ ಕೆಲಕಾಲ ವೆರಿಫೈಡ್ ಅಕೌಂಟ್ ಗಳಿಂದ ಟ್ವೀಟ್ ಮಾಡುವುದಕ್ಕೆ ನಿಷೇಧ ಹೇರಿತ್ತು. ಅಲ್ಲದೆ ಪಾಸ್ ವರ್ಡ್ ಬದಲಾಯಿಸುವುದಕ್ಕೂ ಅವಕಾಶ ನೀಡಿರಲಿಲ್ಲ. ಇದೀಗ ಸಮಸ್ಯೆಗಳನ್ನು ಸರಿಪಡಿಸಲಾಗಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next