Advertisement

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

02:52 PM Apr 18, 2021 | Team Udayavani |

ಹಾಸನ: ಪತ್ರಿಕಾರಂಗದಲ್ಲಿ ಸಾಕಷ್ಟುಪ್ರತಿಭಾವಂತರಿದ್ದು, ಅಂಥವರನ್ನುಗುರುತಿಸಿ ವಾರ್ಷಿಕ ಪ್ರಶಸ್ತಿ ನೀಡುವಕಾರ್ಯಕ್ರಮ ನಿರಂತರವಾಗಿಮುಂದುವರಿಯಲಿ ಎಂದು ಜಿಲ್ಲಾಉಸ್ತುವಾರಿ ಸಚಿವ ಕೆ.ಗೋಪಾಲಯ್ಯಆಶಿಸಿದರು.ಹಾಸನ ಜಿಲ್ಲಾ ಪತ್ರಕರ್ತರ ಸಂಘದವತಿಯಿಂದ ನಗರದ ಅಶೋಕಹೋಟೆಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 10 ಮಂದಿ ಪತ್ರಕರ್ತರಿಗೆ ವಾರ್ಷಿಕ ಪ್ರಶಸ್ತಿಪ್ರದಾನ ಮಾಡಿ ಹಾಗೂ ಪತ್ರಕರ್ತರಕ್ಷೇಮನಿಧಿಗೆ ಚಾಲನೆ ನೀಡಿ ಮಾತನಾಡಿದರು.

Advertisement

ನಾನು ಹಾಸನ ಜಿಲ್ಲಾಉಸ್ತುವಾರಿ ಸಚಿವನಾದ ನಂತರ ಜಿಲ್ಲೆಯಅನೇಕ ರೀತಿಯ ನೈಜ ಸಮಸ್ಯೆಗಳ ಬಗ್ಗೆಬೆಳಕು ಚೆಲ್ಲುವ ಕೆಲಸವನ್ನು ಪತ್ರಕರ್ತರುಮಾಡುತ್ತಿದ್ದಾರೆ ಎಂದರು.

ಕೊರೊನಾ ಸಂದರ್ಭದಲ್ಲಿಪತ್ರಕರ್ತರ ಜೀವನವೂ ಕಷ್ಟಕರವಾಗಿತ್ತು.ಪ್ರತಿಯೊಬ್ಬರಿಗೂ ದೊಡ್ಡ ಸವಾಲುಎದುರಾಗಿತ್ತು. ಇಂದು ಚಾಲನೆನೀಡಿರುವ ಕ್ಷೇಮನಿಧಿಗೆ ದಾನಿಗಳನೆರವಿನ ಜೊತೆಗೆ ಪತ್ರಕರ್ತರಿಂದಲೂಇಂತಿಷ್ಟು ಎಂದು ನಿಧಿ ಕ್ರೂಢೀಕರಿಸುವಕೆಲಸಕ್ಕೆ ಮುಂದಾಗಬೇಕು ಎಂದು ಸಲಹೆನೀಡಿದರು.

ಮುಖ್ಯ ಅತಿಥಿ, ಅರಕಲಗೂಡುಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ,ಪ್ರಥಮ ಬಾರಿಗೆ ಪ್ರಶಸ್ತಿ ನೀಡುತ್ತಿರುವುದುಬೇರೆಯವರಿಗೆ ಉತ್ತೇಜನ ನೀಡುವಅತ್ಯುತ್ತಮ ಸಂಪ್ರದಾಯ ಎಂದು ಸಂತಸವ್ಯಕ್ತಪಡಿಸಿದರು.

ಆಲೂರು-ಸಕಲೇಶಪುರ ಶಾಸಕಮತ್ತು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಕಷ್ಟಕರ ಸಂದರ್ಭದಲ್ಲೂ ಪತ್ರಕರ್ತರು ಮುನ್ನುಗ್ಗಿ ಕೆಲಸಮಾಡುತ್ತಾರೆ. ಯಾವುದೇ ಸುದ್ದಿ ಪ್ರಕಟಹಾಗೂ ಪ್ರಸಾರ ಮಾಡುವ ಮೊದಲುನೈಜತೆ ಖಚಿತಪಡಿಸಿಕೊಳ್ಳಬೇಕು ಎಂದರು.ಪತ್ರಕರ್ತರಾದ ವೆಂಕಟೇಶ್‌ ಬ್ಯಾಕರವಳ್ಳಿ, ಜಿ.ಎಸ್‌.ಮಹೇಶ್‌, ಎ.ಎಲ್‌.ನಾಗೇಶ್‌, ಯೋಗೇಶ್‌, ಕೆ.ಬಿ.ಮಂಜುನಾಥ್‌, ಪ್ರತಾಪ್‌, ನಟರಾಜ್‌, ಜಾನಕೆರೆಪರಮೇಶ್‌, ಮಲ್ಲಿಕಾರ್ಜುನ ಕೊಚ್ಚರಗಿ,ಉದಯವಾಣಿಯ ಶ್ಯಾಂ ಕೆ.ಅಣ್ಣೇನಹಳ್ಳಿಅವರಿಗೆ ಪ್ರಶಸ್ತಿ ಪ್ರದಾನ ಮಾಡಿಸನ್ಮಾನಿಸಲಾಯಿತು. ಜಿಲ್ಲಾ ಪತ್ರಕರ್ತರಸಂಘದ ಪದಾಧಿಕಾರಿಗಳು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next