Advertisement

ಸಾಧನೆ ಮಾಡಿದ ವಿಶೇಷಚೇತನರಿಗೆ ಪ್ರಶಸ್ತಿ ಪ್ರಕಟ

08:05 AM Dec 02, 2017 | |

ಬೆಂಗಳೂರು: ವಿಶ್ವ ವಿಕಲಚೇತರ ದಿನಾಚರಣೆ ಅಂಗವಾಗಿ ವಿಶೇಷ ಸಾಧನೆ ಮಾಡಿದ ವಿಕಲಚೇತನರಿಗೆ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಿಸಿದೆ. 2017ನೇ ಸಾಲಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 15 ಜನ ವಿಶೇಷ ಚೇತನರಿಗೆ ಹಾಗೂ 10 ಸಂಸ್ಥೆಗಳಿಗೆ ಮತ್ತು5 ಶಿಕ್ಷಕರಿಗೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ  ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಹೇಳಿದ್ದಾರೆ. ಡಿ.3ರಂದು ಬೆಂಗಳೂರಿನ ಫ್ರಿಡಂ ಪಾರ್ಕ್‌ನಲ್ಲಿ ನಡೆಯುವ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ 
ಸಿಎಂ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisement

ವೈಯಕ್ತಿಕ ವಿಭಾಗದ ಪ್ರಶಸ್ತಿಗಳು: ಮಾನಸಿಕ ಅಸ್ವಸ್ಥತೆ ವಿಭಾಗದಲ್ಲಿ ಕೆ.ಆರ್‌. ವೆಂಕಟೇಶ್‌ (ಬೆಂಗಳೂರು). ಕ್ರೀಡಾ ಕ್ಷೇತ್ರದಲ್ಲಿ ಎಂ.ಮಂಜುನಾಥ್‌ (ಬೆಂಗಳೂರು), ಸಿ.ವಿ.ರಾಜಣ್ಣ (ಕೋಲಾರ), ಆರ್‌.ಮಂಜುನಾಥ್‌ (ಮೈಸೂರು), ತಿಮ್ಮಣ್ಣ (ಬಳ್ಳಾರಿ). ಅಂಗವಿಕಲರ ಕ್ಷೇತ್ರದಲ್ಲಿ ಸಮಾಜಸೇವೆ ವಿಭಾಗದಲ್ಲಿ ವಿಜಯ ಕುಮಾರಿ ಮುರಾರಪ್ಪ (ಬೆಂಗಳೂರು), ಕುಪ್ಪಣ್ಣ (ರಾಯಚೂರು), ಮಲ್ಲಿ ಕಾರ್ಜುನ ಬಸಪ್ಪ ಉಮರಾಣಿ (ವಿಜಯಪುರ), ಹನುಮಂತ (ಬಾಗಲಕೋಟೆ) ಮತ್ತು ಎಸ್‌.ಚಂದ್ರಾಮ (ಗದಗ). ಸಂಗೀತ ಕ್ಷೇತ್ರದಲ್ಲಿ ಗಣೇಶ್‌ ಈಶ್ವರ ಭಟ್ಟ (ಮೈಸೂರು), ಕಲಾಕ್ಷೇತ್ರದಲ್ಲಿ ಲಿಯಾಕತ್‌ ಅಲಿ (ಉಡುಪಿ), ಅಂಧರಿಗೆ ಚಲನವಲನ ತರಬೇತಿಗಾಗಿ ವರದರಾಜ್‌ (ಮಂಗಳೂರು). ಗ್ರಾಮೀಣ ಪುನರ್ವಸತಿ ಕಾರ್ಯ ಕರ್ತ ಜಬ್ಟಾರ ಅಲಿ ಬಿ. ಮನಿಯಾರ (ಕಲಬುರಗಿ). ವಿವಿಧೋದ್ದೇಶ ಪುನರ್ವ ಸತಿ ಕಾರ್ಯಕರ್ತೆ ಜಯಶ್ರೀ (ಕೊಪ್ಪಳ)

ವಿಶಿಷ್ಟ ಸಾಧನೆ ಪ್ರಶಸ್ತಿ:
ಮನೋವೈದ್ಯ ಕೀಯ ಪುನರ್ವಸತಿ ವಿಭಾಗದಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ
(ನಿಮ್ಹಾನ್ಸ್‌) ಬೆಂಗಳೂರು. ಸಾಧನ ಸಲಕರಣೆ, ಚಲನವಲನ ತರಬೇತಿ ವಿಭಾಗದಲ್ಲಿ ಮೊಬಿಲಿಟಿ ಇಂಡಿಯಾ (ಬೆಂಗಳೂರು).

ಸಂಸ್ಥೆಗಳ ವಿಭಾಗದ ಪ್ರಶಸ್ತಿ: ಅಂಧ ಹೆಣ್ಣು ಮಕ್ಕಳಿಗೆ ಶಿಕ್ಷಣ ಕ್ಷೇತ್ರದಲ್ಲಿ ದೀಪಾ ಅಂಧ ಮಕ್ಕಳ ಉಚಿತ ವಸತಿಯುಳ್ಳ ಹೆಣ್ಣು
ಮಕ್ಕಳ ಪ್ರೌಢಶಾಲೆ (ಬೆಂಗಳೂರು). ಆಟಿಸಂ ಕ್ಷೇತ್ರದಲ್ಲಿ ನವೋದಯ ಎಜುಕೇಷನ್‌ ಟ್ರಸ್ಟ್‌ (ಬೆಂಗಳೂರು), ಅಂಧರ
ತರಬೇತಿ ಕೇಂದ್ರದ ಸೇವೆ ಗುರುತಿಸಿ ನ್ಯಾಷನಲ್‌ ಅಸೋಸಿ ಯೇಷನ್‌ ಫಾರ್‌ ದಿ ಬ್ಲೆ„ಂಡ್‌ ಸಂಸ್ಥೆ (ಮೈಸೂರು).

Advertisement

Udayavani is now on Telegram. Click here to join our channel and stay updated with the latest news.

Next