Advertisement

ಕೈರಂಗಳ ನಾರಾಯಣ ಹೊಳ್ಳರಿಗೆ ಸಮ್ಮಾನ

03:36 PM Jul 16, 2019 | Team Udayavani |

ರಾಮಚಂದ್ರ ಹೆಗ್ಡೆ ಬೆಜ್ಜ ಕಲಾ ವೇದಿಕೆಯು ಎ.7ರಂದು ಬೆಜ್ಜದ ಹಳ್ಳಿ ಯಂಗಳದಲ್ಲಿ ಜಾತ್ರೋತ್ಸವದ ಸಂದರ್ಭ ಸಾಲಿಗ್ರಾಮ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಹಿರಿಯ ಕಲಾವಿದ ಕೈರಂಗಳ ನಾರಾಯಣ ಹೊಳ್ಳರಿಗೆ ವಾರ್ಷಿಕ ಸಮ್ಮಾನವನ್ನು ಅರ್ಪಿಸಲಿದೆ.

Advertisement

ಹೊಳ್ಳರದ್ದು ಸುಮಾರು ಏಳು ದಶಕಗಳ ಯಕ್ಷಗಾನದ ಒಡನಾಟ. ಸಂಘಟನೆ, ತರಬೇತಿ, ಸಂಯೋಜನೆ, ಪ್ರಸಾದನ ಹಾಗೂ ನೇಪಥ್ಯ ಚಟುವಟಿಕೆ ತಾಳಮದ್ದಳೆ ಅರ್ಥಗಾರಿಕೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಕೈಯಾಡಿಸಿದವರು. ಅಧ್ಯಾಪಕ,ಅಂಚೆ ಇಲಾಖೆಯಲ್ಲಿ ಪೋಸ್ಟ್‌ ಮಾಸ್ಟರ್‌ ಆಗಿದ್ದರೂ ಪ್ರವೃತ್ತಿಯಿಂದ ಯಕ್ಷಗಾನ ತಾಳಮದ್ದಳೆ ಕಲಾವಿದನಾಗಿ, ಕಲಾ ಸಂಘಟಕನಾಗಿ, ವೇಷ ಭೂಷಣಗಳನ್ನು ಒದಗಿಸುವ ಹಾಗೂ ಮುಖವರ್ಣಿಕೆಗಳನ್ನು ಬರೆಯುವ ನೇಪಥ್ಯ ಕಲಾವಿದನಾಗಿ, ಧ್ವನಿವರ್ಧಕ ಯಕ್ಷಗಾನ ಪ್ರವೇಶಿಸಿದ ಕಾಲಕ್ಕೆ ಧ್ವನಿವರ್ಧಕ ಸೆಟ್ಟನ್ನು ಪೂರೈಸುವ ಹಾಗೇ ಅದರ ತಾಂತ್ರಿಕ ಪರಿಣತಿಯನ್ನು ಪಡೆದ ತಂತ್ರಜ್ಞನಾಗಿ ಮೆರೆದವರು.

ಕೈರಂಗಳ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘವನ್ನು ಸ್ಥಾಪಿಸಿ ನಾಡಿನಾದ್ಯಂತ ಪ್ರದರ್ಶನ ನಡೆಸಿಕೊಡುತ್ತಿದ್ದವರು. ಅದೇ ಕಾಲದಲ್ಲಿ ಸಂಸ್ಥೆಗಾಗಿ ಸುಸಜ್ಜಿತ ವೇಷಬೂಷಣ ಸೆಟ್ಟ್ ಒಂದನ್ನು ಸಿದ್ದಗೊಳಿಸಿ ತನ್ನ ಮನೆಯಲ್ಲೇ ತನ್ನ ಉಸ್ತುವಾರಿಯಲ್ಲೇ ವ್ಯವಸ್ಥೆಗೊಳಿಸಿ ಇತರಸಂಘಗಳಿಗೆ ಬಾಡಿಗೆ ನೀಡಿದಾಗ ಬಂದ ಆದಾಯವನ್ನು ಯಕ್ಷಗಾನ ಸಂಘಕ್ಕೆ ನೀಡುತ್ತಾ ಬಂದವರು.

ಯೋಗೀಶ ರಾವ್‌ ಚಿಗುರುಪಾದೆ

Advertisement

Udayavani is now on Telegram. Click here to join our channel and stay updated with the latest news.

Next