ಬಂಗಾರಪೇಟೆ: ತಾಲೂಕಿನ ಸೂಲಿಕುಂಟೆ ಗ್ರಾಪಂ 2018-19ನೇ ಸಾಲಿನ “ಗಾಂಧಿ ಗ್ರಾಮ’ ಪುರಸ್ಕಾರಕ್ಕೆ ಭಾಜನವಾಗಿದೆ. ತಾಲೂಕು ಕೇಂದ್ರದಿಂದ 8 ಕಿ.ಮೀ. ಇರುವ ಸೂಲಿಕುಂಟೆ ಗ್ರಾಪಂ 10 ಹಳ್ಳಿ ಒಳಗೊಂಡಿದೆ. 6000 ಜನಸಂಖ್ಯೆ ಹೊಂದಿದೆ, 5 ವರ್ಷಗಳ ಹಿಂದೆ ಅಭಿವೃದ್ಧಿ ಅನ್ನೊದು ಮರೀಚಿಕೆಯಾಗಿತ್ತು. ಶಾಸಕರು, ಜಿಪಂ, ತಾಪಂ ಸದಸ್ಯರು, ಹಿರಿಯರ ಮಾರ್ಗದರ್ಶನದಲ್ಲಿ ಜನರಿಗೆ ಮೂಲ ಸೌಲಭ್ಯ ಕಲ್ಪಿಸಿ ಗ್ರಾಪಂ ಅನ್ನು ಅಭಿವೃದ್ಧಿ ಪಡೆಸಲಾಗಿದೆ.
1200ರಲ್ಲಿ 180 ಶೌಚಾಲಯ ನಿರ್ಮಾಣ: ಒಟ್ಟು 17 ಸದಸ್ಯರಿರುವ ಸೂಲಿಕುಂಟೆ ಪಂಚಾಯ್ತಿನಲ್ಲಿ 8 ಮಹಿಳೆಯರು ಇದ್ದಾ ರೆ. ಪಿಡಿಒ ಕೂಡ ಮಹಿಳೆಯೇ ಆಗಿದ್ದು, ಮೂರೂ ವರೆ ವರ್ಷದಿಂದ ಗ್ರಾಪಂ ಆಡಳಿತ ಮಹಿಳೆಯರ ಹಿಡಿತದಲ್ಲೇ ಇದೆ.ಗ್ರಾಪಂ ವ್ಯಾಪ್ತಿಯ ಕುಟುಂಬಗಳ ಆಧಾರದ ಮೇಲೆ 1200ಕ್ಕೂ ಹೆಚ್ಚು ಶೌಚಾಲಯನಿರ್ಮಾಣ ಮಾಡಬೇಕೆಂದು ಜಿಪಂನಿಂದ ನಿಗದಿ ಪಡಿಸಲಾಗಿತ್ತು. ಅದರಂತೆ 1180 ಶೌಚಾಲಯ ಪೂರ್ಣವಾಗಿ ನಿರ್ಮಿಸಿ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಅನುದಾನ ವನ್ನೂ ಜಮೆ ಮಾಡಲಾಗಿದೆ.
ಬಯಲು ಶೌಚ ಮುಕ್ತ: ಶೌಚಾಲಯಗಳ ನಿರ್ಮಾಣದ ವಿಷಯದಲ್ಲಿ ಗ್ರಾಪಂ ವ್ಯಾಪ್ತಿಯ ಎಲ್ಲಾ ಮನೆಗೂ ಆಡಳಿತ ಮಂಡಳಿ, ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಜಾಗ,ಫಿಟ್ ನಿರ್ಮಾಣ, ಹಣ ಸೇರಿದಂತೆ ಏನೇ ಸಮಸ್ಯೆ ಇದ್ರೂ ಸ್ಥಳದಲ್ಲಿಯೇ ಚರ್ಚೆ ನಡೆಸಿ, ಬಗೆಹರಿಸಿದ್ದರಿಂದ ಗ್ರಾಪಂ ಬಯಲು ಶೌಚಾಲಯ ಮುಕ್ತ ಆಗಿದೆ.
ಪತಿಯ ಸಹಕಾರ: ತಾಲೂಕಿನ ಸೂಲಿಕುಂಟೆ ಗ್ರಾಪಂ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಲು ಗ್ರಾಪಂ ಅಧ್ಯಕ್ಷೆ ವರಲಕ್ಷ್ಮೀ ಅವರ ಪತಿ ಸಂಪತ್‌ಗೌಡ ಅವರ ಸೇವೆಯೂ ಕಾರಣವಾಗಿದೆ. ಅಧ್ಯಕ್ಷೆಗೆ ರಾಜಕೀಯ ಅನುಭವ ಕಡಿಮೆ ಯಾಗಿದ್ದರೂ ವಿದ್ಯಾವಂತ ರಾಗಿದ್ದಾರೆ. ಇದರಿಂದ ಎಲ್ಲಾ ವಿಚಾರಗಳನ್ನು ಅರ್ಥ ಮಾಡಿ ಕೊಂಡು ಪತಿ ಸಂಪತ್‌ಗೌಡ ಅವರ ನೆರವಿ ನಿಂದ ಗ್ರಾಪಂ ವ್ಯಾಪ್ತಿಯಲ್ಲಿ ಉತ್ತಮ ಕೆಲಸ, ಕಾರ್ಯಗಳನ್ನು ಮಾಡಿದ್ದಾರೆ. ಬಡಜನರಿಗೆ, ನಿರಾಶ್ರಿತರಿಗೆ ವಸತಿ ಯೋಜನೆಯಡಿ ಸೌಲಭ್ಯ, ಮನೆ ನಿರ್ಮಾಣದ ನಂತರ ಅದರ ಹಣವನ್ನು ಫಲಾನುಭವಿ ಗಳಿಗೆ ಬ್ಯಾಂಕ್ ಖಾತೆಗೆ ತಡಮಾಡದೇ ಜಮೆ ಮಾಡಲಾಗುತ್ತಿತ್ತು. ಕುಡಿಯುವ ನೀರಿನ ಸೌಲಭ್ಯ, ಸ್ವಚ್ಛತೆ, ಉತ್ತಮ ಸೇವೆ ಒದಗಿಸಿದ್ದರಿಂದ ಸರ್ಕಾರವು ಈ ಬಾರಿ ಸೂಲಿಕುಂಟೆ ಗ್ರಾಪಂ ಅನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿದೆ.
ಬಂಗಾರಪೇಟೆ ತಾಲೂಕಿನ ಸೂಲಿ ಕುಂಟೆ ಗ್ರಾಪಂನಲ್ಲಿ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಒಮ್ಮತ ದಿಂದ ಅಭಿವೃದ್ಧಿಗೆ ಶ್ರಮಿಸಿದ್ದಕ್ಕೆ ಈ ವರ್ಷದ ಗಾಂಧಿ ಪುರಸ್ಕಾರ ಸಿಕ್ಕಿದೆ. 2018- 19ನೇ ಸಾಲಿನಲ್ಲಿ ಗ್ರಾಪಂನ ಸಾಂಸ್ಥಿಕ ಹಾಗೂ ಪ್ರಗತಿಯ ಸೂಚ್ಯಂಕ ಗಳನ್ನೊಳಗೊಂಡ 150 ಅಂಕಗಳ ಪ್ರಶ್ನಾವಳಿಗಳನ್ನು ಪಂಚತಂತ್ರಾಂಶದಲ್ಲಿ ಉತ್ತರಿಸುವ ಮೂಲಕ ತಾಲೂಕಿನ 37 ಗ್ರಾಪಂಗಳ ಪೈಕಿ ಸೂಲಿಕುಂಟೆ ಗ್ರಾಪಂಗೆ ಗಾಂಧಿ ಪುರಸ್ಕಾರ ಸಿಕ್ಕಿದೆ. ಸ್ವಚ್ಛತೆ, ಕುಡಿಯುವ ನೀರು, ನರೇಗಾ ಯೋಜನೆ ಯಡಿ ಮೂಲ ಸೌಲಭ್ಯ ಕಲ್ಪಿಸಿ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಪುರ ಸ್ಕಾರ ಆಯ್ಕೆಗೆ ಸಹಕಾರಿಯಾಗಿದೆ.
● ಎನ್.ವೆಂಕಟೇಶಪ್ಪ, ತಾಪಂ ಇಒ
● ಎಂ.ಸಿ.ಮಂಜುನಾಥ