Advertisement

ವೇದಾಂತ ಸಂಸ್ಥೆಗೆ ಪ್ರಶಸ್ತಿ

05:34 PM Nov 12, 2020 | Suhan S |

ಚಿತ್ರದುರ್ಗ: ಸದೃಢ ಪರಿಸರ ನಿರ್ವಹಣೆಗಾಗಿ ರಾಜ್ಯದ ವೇದಾಂತ ಕಬ್ಬಿಣದ ಅದಿರು ಸಂಸ್ಥೆಗೆ ಪ್ರತಿಷ್ಠಿತ ಎಫ್‌ ಐಎಂಐನ “ಶುಭ್‌ ಕರಣ್‌ ಸರವಾಗಿ’ ಪರಿಸರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

Advertisement

ಕರ್ನಾಟಕದ ಫೆಡರೇಷನ್‌ ಆಫ್‌ ಇಂಡಿಯನ್‌ ಮಿನರಲ್‌ ಇಂಡಸ್ಟ್ರಿಯ ಹಿರಿಯ ನಿರ್ವಹಣಾ ತಂಡದ ಉಪಸ್ಥಿತಿಯಲ್ಲಿ ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಅನಿಲ್‌ಕುಮಾರ್‌ ಜೈನ್‌ ಪ್ರಶಸ್ತಿ ಪ್ರದಾನ ಮಾಡಿದರು.

ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಚ್‌ಎಸ್‌ಇ ಡೆಪ್ಯೂಟಿ ಮ್ಯಾನೇಜರ್‌ ಪಾರ್ಥಿಬನ್‌ ಮಾದೇಶ್‌ ವೇದಾಂತ ಸಂಸ್ಥೆಯ ಪ್ರತಿನಿಧಿ ಯಾಗಿ ಭಾಗವಹಿಸಿದ್ದರು.

ಗಣಿಗಾರಿಕೆ ಮತ್ತು ಡಂಪ್‌ ತಾಣಗಳ ಪರಿಣಾಮಕಾರಿ ಸುಧಾರಣೆ, ನೀರಿನ ಸಂರಕ್ಷಣೆ, ಆರೋಗ್ಯಕರ ಪರಿಸರ ಮೇಲ್ವಿಚಾರಣಾ ಕಾರ್ಯ ವಿಧಾನ, ಕಾರ್ಯಾಚರಣೆಯ ಸ್ಥಳಗಳಲ್ಲಿ ಮತ್ತು ಸುತ್ತಮುತ್ತಲಿನ ಪ್ಲಾಂಟೇಶನ್‌ ಡ್ರೈವ್‌ ಗಳು ಸೇರಿದಂತೆ ಪರಿಸರ ನಿರ್ವಹಣಾ ಪದ್ಧತಿಗಳಲ್ಲಿ ವೇದಾಂತ ಕಬ್ಬಿಣದಅದಿರು ಸಂಸ್ತೆ ಹಲವಾರು ಅತ್ಯುತ್ತಮ ಕ್ರಮಗಳನ್ನು ಅಳವಡಿಸಿಕೊಂಡಿದೆ.

ಅಲ್ಲದೆ ಸುಸ್ಥಿರತೆ ಚೌಕಟ್ಟು ಮತ್ತು ಎಚ್‌ಎಸ್‌ಇನೀತಿಗಳನ್ನು ಅಳವಡಿಸಿಕೊಂಡಿದೆ. ಅಂತಾರಾಷ್ಟ್ರೀಯ ಮಾನದಂಡಗಳು ಪಾಲನೆ ಯಾಗುತ್ತಿರುವ ಹಿನ್ನೆಲೆಯಲ್ಲಿಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ವೇದಾಂತ ಸೆಸಾ ಗೋವಾ ಐರನ್‌ ಬಿಸಿನೆಸ್‌ ಸಿಇಒ ಸಾವಿಕ್‌ ಮಜುಂದಾರ್‌ ಮಾತನಾಡಿ, ನಮ್ಮ ಗುರಿ ಪರಿಸರಕ್ಕೆ ಶೂನ್ಯ ಹಾನಿ, ಶೂನ್ಯ ತ್ಯಾಜ್ಯ ಮತ್ತು ಶೂನ್ಯ ವಿಸರ್ಜನೆಯಾಗಿದೆ. ಈ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸುಸ್ಥಿರ ಬೆಳವಣಿಗೆಯನ್ನು ಸಾ ಸುವಲ್ಲಿಪ್ರಯತ್ನಶೀಲರಾಗಿದ್ದೇವೆ ಎಂದರು.

Advertisement

ಎಫ್‌ಐಎಂಐ ಪ್ರಧಾನ ಕಾರ್ಯದರ್ಶಿ ಆರ್‌.ಕೆ. ಶರ್ಮಾ ಮಾತನಾಡಿ, ಕೈಗಾರಿಕಾ ಬೆಳವಣಿಗೆಯಲ್ಲಿ ಸುಸ್ಥಿರ ಕ್ರಮಗಳುಮತ್ತು ಜವಾಬ್ದಾರಿಯುತ ನೀತಿಗಳನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ. ಉದ್ಯಮದ ಜತೆ ಜತೆಗೆ ಪರಿಸರ ಸಂರಕ್ಷಣೆಗೂ ಒತ್ತು ನೀಡಬೇಕಾಗಿದೆ. ವೇದಾಂತ ಮತ್ತು ಇತರ ಗಣಿಗಾರಿಕೆ ಮತ್ತು ಲೋಹದಕಂಪನಿಗಳು ಹಲವಾರು ನವೀನ ಪರಿಸರ ನಿರ್ವಹಣಾ ಕ್ರಮಗಳನ್ನು ಪರಿಚಯಿಸಿವೆಎಂದು ಹೇಳಿದರು.

ವೇದಾಂತ ಕಬ್ಬಿಣದ ಅದಿರು ಸಂಸ್ಥೆಯ ನಿರ್ದೇಶಕ ಕೃಷ್ಣ ರೆಡ್ಡಿಮತ್ತಿತರರು ಭಾಗವಹಿಸಿದ್ದರು.

ಓಬವ್ವ ಜಯಂತಿ ಸರಳ ಆಚರಣೆ :

ಚಿತ್ರದುರ್ಗ: ಜಿಲ್ಲಾಧಿಕಾರಿ ಕಚೇರಿ ಬಳಿ ಒನಕೆ ಓಬವ್ವ ವೃತ್ತದಲ್ಲಿರುವ ಪ್ರತಿಮೆಗೆ ಬುಧವಾರ ಮಾಲಾರ್ಪಣೆ ಮಾಡುವ ಮೂಲಕ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ವೀರ ವನಿತೆ ಒನಕೆ ಓಬವ್ವ ಜಯಂತಿ ಆಚರಿಸಲಾಯಿತು.

ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಒನಕೆ ಓಬವ್ವನ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಛಲವಾದಿ ಸಮಾಜದ ಮುಖಂಡರು ಕೋಟೆಯ ಒನಕೆ ಓಬವ್ವನ ಕಿಂಡಿಯ ಹತ್ತಿರ ಇರುವ ಒನಕೆ ಓಬವ್ವನ ಸಮಾಧಿ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌, ರಾಜಾವೀರ ಮದಕರಿ ನಾಯಕ ಪ್ರತಿಮೆಗೂ ಮಾಲಾರ್ಪಣೆ ಮಾಡಿದರು. ಈ ವೇಳೆ ಛಲವಾದಿ ಗುರುಪೀಠದ ಶ್ರೀ ಬಸವನಾಗಿ ದೇವ ಸ್ವಾಮೀಜಿ, ಛಲವಾದಿ ಸಮಾಜದ ಮುಖಂಡರಾದ ಎಚ್‌.ಸಿ. ನಿರಂಜನಮೂರ್ತಿ, ರುದ್ರಮುನಿ, ನಾಗರಾಜ್‌, ಜಯಪ್ಪ, ಬಸವರಾಜ್‌, ತಿಪ್ಪೇಸ್ವಾಮಿ, ನಟರಾಜ್‌, ಮಂಜುಳಮ್ಮ, ಸುವರ್ಣಮ್ಮ, ಭಾರ್ಗವಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next