Advertisement

ವಿವಿಧ ವಿಭಾಗದಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ

06:00 AM Sep 05, 2018 | |

ಬೆಂಗಳೂರು: ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ ಮತ್ತು ರಾಷ್ಟ್ರೀಯ ಶಿಕ್ಷಕ ಕಲ್ಯಾಣ ನಿಧಿಯಿಂದ ಸಾಧಕ ಶಿಕ್ಷಕರಿಗೆ ರಾಜೀವ್‌ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿ ಸೇರಿ ವಿವಿಧ ಪ್ರಶಸ್ತಿ ಪಟ್ಟಿ ಬಿಡುಗಡೆಯಾಗಿದೆ.

Advertisement

ರಾಜೀವ್‌ಗಾಂಧಿ ಸ್ಮಾರಕ ಅತ್ಯುತ್ತಮ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಿಕ್ಷಣ: ವಿಭಾಗದಲ್ಲಿ ಆನೇಕಲ್‌ನ ಎ.ವಿ.ಮಹಬೂಬ ಬಿ, ಪಾವಗಡದ ಬಿ.ದೊಡ್ಡಹಟ್ಟಿಯ ಸಾಧಿಕ್‌ ಉಲ್ಲಾ ಶರೀಫ್, ಪ್ರೌಢಶಾಲೆ ವಿಭಾಗದಲ್ಲಿ ದೇವನಹಳ್ಳಿಯ ಕೆ.ಎಂ.ಚನ್ನಪ್ಪ, ಮಸ್ಕಿ ತಾಲೂಕಿನ ಹಂಪನಾಳದ ಎಸ್‌.ಎಸ್‌.ರವೀಶ್‌, ವಿಜ್ಞಾನ ಕ್ಷೇತ್ರದಡಿ ಚಾಮರಾಜನಗರದ ಪಿ.ನಂಜುಂಡಸ್ವಾಮಿ, ಶಿರಹಟ್ಟಿ ತಾಲೂಕಿನ ಸುವರ್ಣ ಪ.ನಂದಿಕೋಲಮಠ, ಶಿಡ್ಲಘಟ್ಟ ತಾಲೂಕಿನ ಎಚ್‌.ಜಿ.ಚಂದ್ರಕಲಾ, ಯಲ್ಲಾಪುರ ತಾಲೂಕಿನ ಚಂದ್ರಶೇಖರ ವೇಣು ನಾಯಕ, ಗದಗ ತಾಲೂಕಿನ ಶ್ರೀದೇವಿ ಪ್ರಭುಸ್ವಾಮಿ ನೀಲಕಂಠಮಠ, ಹುಣಸೂರು ತಾಲೂಕಿನ ಜಿ.ಆರ್‌.ಶಶಿಕಲಾ, ಪಾಂಡವಪುರ ತಾಲೂಕಿನ ಎನ್‌.ಮಹದೇವಪ್ಪ, ಕೊರಟಗೆರೆ ತಾಲೂಕಿನ
ಬಿ.ಎಸ್‌.ಗಿರೀಶ್‌, ಗದಗ ತಾಲೂಕಿನ ಈಶ್ವರ ಎಸ್‌.ಗೌಡರ, ಮುಧೋಳ ತಾಲೂಕಿನ ಜಿ.ಎಸ್‌.ಹಂಚಿನಾಳ, ಸೋಮವಾರಪೇಟೆ ತಾಲೂಕಿನ ಟಿ.ಜಿ.ಪ್ರೇಮಕುಮಾರ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವಿಭಾಗದಲ್ಲಿ: ಕೆ.ಆರ್‌.ಪೇಟೆ ತಾಲೂಕಿನ ಕೆ.ಪಿ.ಬೋರೇಗೌಡ, ಹೊಸಕೋಟೆ ತಾಲೂಕಿನ ಈಶ್ವರಪ್ಪ ಪೂಜಾರಿ, ಡಿ.ವಿ.ಮುನಿಸ್ವಾಮಿ, ಹಳಿಯಾಳ ತಾಲೂಕಿನ ಮನೋಹರ ಸಿ.ಶೆಟ್ಟಿ, ಶಿರಸಿಯ ಶ್ರೀದೇವಿ ದಾಸ ಬಾಲಚಂದ್ರ ನಾಯಕ್‌ ಅಗಸೂರು, ಕಡೂರಿನ ಎಚ್‌.ಎನ್‌.
ಶಿವಕುಮಾರ್‌, ಧಾರವಾಡದ ಗುಡುಸಾಬ ಎಂ.ನದಾಫ‌, ಬೆಂಗಳೂರು ಉತ್ತರ ವಲಯದ ಆರ್‌.ವೆಂಕಟೇಶ ಮೂರ್ತಿ, ಕುಂದಾಪುರದ ಸುರೇಂದ್ರ ಅಡಿಗ, ಸಿದ್ದಾಪುರ ತಾಲೂಕಿನ ಗಣಪತಿ ನಾರಾಯಣ ನಾಯ್ಕ, ಧಾರವಾಡ ತಾಲೂಕಿನ ಎಸ್‌.ರೇವಣ್ಣ ಸಿದ್ದಪ್ಪ, ಶಿರಹಟ್ಟಿ ತಾಲೂಕಿನ ರವಿ
ಬ.ಬೆಂಚಳಿ, ಹೊಸಕೋಟೆ ತಾಲೂಕಿನ ಪುಂಡಲೀಕ ಕೆ.ದಡ್ಡಿ, ಪಾಂಡವಪುರ ತಾಲೂಕಿನ ಡಾ.ಪರ್ವಿನ್‌, ಮಾಲೂರಿನ ಎಂ.ನಂಜುಂಡಗೌಡ,

ದೈಹಿಕ ಶಿಕ್ಷಣ ವಿಭಾಗದಿಂದ:  ಕೊಳ್ಳೇಗಾಲದ ಜಿ.ಪಳನಿಸ್ವಾಮಿ, ಆನೇಕಲ್‌ನ ಎಚ್‌.ರುದ್ರೇಶ್‌, ವೃತ್ತಿ ಶಿಕ್ಷಣ ವಿಭಾಗದಲ್ಲಿ ಗದಗದ ಪದ್ಮರಾಜ ಅನಂತರಾವ್‌ ಕುಲಕರ್ಣಿ, ದೊಡ್ಡಬಳ್ಳಾಪುರ ತಾಲೂಕಿನ ಪ್ರಕಾಶ್‌ ಕೋಟಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next