Advertisement

ಗ್ರಾಮಾಭಿವೃದ್ಧಿಗೆ ಸಂದ ಗೌರವ

02:29 PM Oct 02, 2019 | Suhan S |

ಇಂಡಿ: ಕೇವಲ ನಾಲ್ಕೂವರೆ ವರ್ಷದ ಅವಧಿಯಲ್ಲಿಯೇ ಒಂದು ಗ್ರಾಮ ಪಂಚಾಯತ್‌ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿ ಇತರ ಗ್ರಾಮ ಪಂಚಾಯತ್‌ ಗಳಿಗೆ ಮಾದರಿಯಾಗಿದೆ.

Advertisement

ಇಂಡಿ ತಾಲೂಕಿನ ಚವಡಿಹಾಳ ಗ್ರಾಪಂನಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಗಮನಿಸಿ ಕರ್ನಾಟಕ ಸರಕಾರ ಅಕ್ಟೋಬರ್‌ 2ರಂದು ಗಾಂಧಿ ಜಯಂತಿಯಂದು ಮುಖ್ಯಮಂತ್ರಿಗಳು 5 ಲಕ್ಷ ರೂ. ಚೆಕ್‌ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಿದ್ದಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವ ಜತೆಗೆ ಗ್ರಾಮದ ಜನರಿಗೆ ಒಂದೇ ಸೂರಿನಡಿ ಸರಕಾರ ಸೇವೆ ಒದಗಿಸುವ ಮೂಲಕ ಚೌಡಿಹಾಳ ಗ್ರಾಪಂ ಪುರಸ್ಕಾರಕ್ಕೆ ಭಾಜನವಾಗಿದೆ.

ಹೈಟೆಕ್‌ ಕಟ್ಟಡ: ರಾಜೀವ್‌ ಗಾಂಧಿ  ಸೇವಾ ಕೇಂದ್ರದಿಂದ 20 ಲಕ್ಷ ರೂ. ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ 10 ಲಕ್ಷ ರೂ. ಎಂಜಿಆರ್‌ ಯೋಜನೆಯಿಂದ 16 .20 ಲಕ್ಷ, ಗ್ರಾಪಂ 14ನೇ ಹಣಕಾಸಿನಿಂದ 3.90 ಲಕ್ಷ ರೂ. ಸೇರಿ ಅಂದಾಜು 50 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್‌ ಗ್ರಾಪಂ ಕಟ್ಟಡ ನಿರ್ಮಾಣಗೊಂಡಿದೆ. ಪಿಡಿಒ, ಅಧ್ಯಕ್ಷ, ಉಪಾಧ್ಯಕ್ಷ, ಸಭಾ ಭವನ, ಅಭಿಲೇಖಾಲಯ, ಕಾರ್ಯದರ್ಶಿಗಳ ಕೋಣೆ, ತಾಂತ್ರಿಕ ವಿಭಾಗ, ದಸ್ತು ಪತ್ರಗಳ ವಿಭಾಗ ಡಿಜಟೀಲೀಕರಣವಾಗಿವೆ. ಗ್ರಾಪಂನಲ್ಲಿ ಪಹಣಿ, ಪಡಿತರ ಚೀಟಿ, ಆರ್‌ಟಿಸಿ, ಜಾತಿ ಪ್ರಮಾಣ ಪತ್ರ ತ್ವರಿತವಾಗಿ ಸಿಗುವಂತೆ ಮಾಡಿದ್ದಾರೆ.

ಅಭಿವೃದ್ಧಿ: ಎನ್‌ಆರ್‌ಜಿ 2.50 ಕೋಟಿ ಅನುದಾನದಲ್ಲಿ ಗ್ರಾಮದ ಅನೇಕ ಕಾಮಗಾರಿಗಳು ಸಾಕಾಗೊಂಡಿವೆ. ರೈತರ ಜಮೀನುಗಳಲ್ಲಿ 4 ಲಕ್ಷ ರೂ. ವೆಚ್ಚದಲ್ಲಿ 4 ಚಕ್‌ ಡ್ಯಾಂ ನಿರ್ಮಾಣ, 9 ಲಕ್ಷ ರೂ.ದಲ್ಲಿ 2 ಚಕ್‌ಡ್ಯಾಂ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಲ್ಲಿ ಅಂಬೇಡ್ಕರ ನಗರ ಹಾಗೂ ದಶವಂತ ಓಣಿಗೆ 90 ಲಕ್ಷ ರೂ.ದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗಿದೆ. ಚೋರಗಿ ಹಾಗೂ ಚವಡಿಹಾಳ ಗ್ರಾಮಗಳಲ್ಲಿ ಮೂರು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next