ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್ ವತಿಯಿಂದ 3ನೇ ವರ್ಷದ ಕೋಟಿ ಚೆನ್ನಯ್ಯ ಟ್ರೋಫಿ ಕ್ರಿಕೆಟ್ ಪಂದ್ಯಾಟವು ಮಾ. 7ರಂದು ಪುಣೆಯ ಎಸ್‌ಪಿ ಕಾಲೇಜ್ ಗ್ರೌಂಡ್ ಜರಗಿತು.
ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ ಈ ಕ್ರಿಕೆಟ್ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದವು. ಮಸಕ ಸೀ ಫುಡ್, ಸಾಯಿ ಕ್ರಿಕೆಟರ್ಸ್, ತುಳು ಕೂಟ ಇಲೆವೆನ್, ಕೋಟಿ-ಚೆನ್ನಯ, ಪ್ರಸೆಂಟ್ ಗ್ರೂಪ್, ಶಬರಿ, ಕೊಥ್ರೊಡ್ ವಾರಿಯರ್ಸ್, ಕಿನಾರ ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಲೀಗ್ ಮಾದರಿಯಲ್ಲಿ ಜರಗಿದ ಈ ಪಂದ್ಯಾಟದ ಫೈನಲ್‌ನಲ್ಲಿ ಮಸಕ ಸೀ ಫುಡ್ ಮತ್ತು ಸಾಯಿ ಕ್ರಿಕೆಟರ್ಸ್ ತಂಡಗಳು ಸೆಣಸಾಡಿದ್ದು, ಸಾಯಿ ಕ್ರಿಕೆಟರ್ಸ್ ತಂಡವು 3ನೇ ಬಾರಿಗೆ ವಿಜಯಿಯಾಗಿ ಕೋಟಿ-ಚೆನ್ನಯ ಟ್ರೋಪಿ ಮತ್ತು 22,222 ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನಿ ಮಸಕ ತಂಡವು ಟ್ರೋಫಿ ಮತ್ತು 11,111 ರೂ. ನಗದನ್ನು ಪಡೆಯಿತು. ತೃತೀಯ ಸ್ಥಾನಿಯಾದ ತುಳು ಕೂಟ ಪುಣೆ ತಂಡವು ಪ್ರಶಸ್ತಿ ಪಡೆಯಿತು. ಪಂದ್ಯಾಟದಲ್ಲಿ ಉತ್ತಮ ದಾಂಡಿಗನಾಗಿ ಸಾಯಿ ತಂಡದ ಜನಾರ್ದನ್, ಉತ್ತಮ ಎಸೆತಗಾರನಾಗಿ ಮಸಕ ತಂಡದ ರವಿ ಹಾಗೂ ಫೈನಲ್‌ಮಾÂಚ್‌ನ ಉತ್ತಮ ಆಟಗಾರನಾಗಿ ಸಾಯಿ ತಂಡ ಸಂದೀಪ್ ಪ್ರಶಸ್ತಿ ಪಡೆದರು. ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿ-ಗಣ್ಯರು ವಿಜೇತ ತಂಡಗಳಿಗೆ ಪ್ರಶಸ್ತಿ ವಿತರಿಸಿ ಶುಭ ಹಾರೈಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ ಪುಣೆ