Advertisement

ವಿವಿಧ ವಿಭಾಗಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ

04:56 PM Apr 21, 2018 | Team Udayavani |

ಹುಬ್ಬಳ್ಳಿ: ನೈಋತ್ಯ ರೈಲ್ವೆಯ 63ನೇ ಸಪ್ತಾಹ ಕಾರ್ಯಕ್ರಮ ಚಾಲುಕ್ಯ ರೈಲ್ವೆ ಇನ್ಸ್‌ಟಿಟ್ಯೂಟ್‌ನಲ್ಲಿ ಶುಕ್ರವಾರ ನಡೆಯಿತು.

Advertisement

ವಿವಿಧ ವಿಭಾಗಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದವರಿಗೆ ಪ್ರಶಸ್ತಿ ನೀಡಿದ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಎ.ಕೆ. ಗುಪ್ತಾ ಮಾತನಾಡಿ, ಸಿಬ್ಬಂದಿ ಉತ್ಕೃಷ್ಟ ಕಾರ್ಯ ಮಾಡುತ್ತಿರುವುದರಿಂದ ಪ್ರಯಾಣಿಕರಿಗೆ ಉತ್ತಮ ಸೇವೆ ಸಿಗುತ್ತಿದೆ. ಕಳೆದ 57 ವರ್ಷಗಳಲ್ಲಿಯೇ ವಲಯದಲ್ಲಿ ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.

2017-18ರಲ್ಲಿ ವಲಯ ಅಗಾಧ ಸಾಧನೆ ಮಾಡಿದೆ. ಮುಂಗಡವಲ್ಲದ ಟಿಕೆಟ್‌ ಪಡೆಯಲು ಅಪ್ಲಿಕೇಶನ್‌ ಬಿಡುಗಡೆ, ಟಿಕೆಟ್‌ ಪರಿಶೀಲನೆ ಮೂಲಕ ಹೆಚ್ಚಿನ ಆದಾಯ, ದೀರ್ಘಾವಧಿ ಸಂಚರಿಸುವ 12 ರೈಲುಗಳು, 30 ಕಿಮೀ ಹೊಸ ಲೈನ್‌ ಹಾಗೂ 74 ಕಿಮೀ ಡಬ್ಲಿಂಗ್‌ ಮಾಡಲಾಗಿದೆ. ಎಲ್ಲ ನಿಲ್ದಾಣಗಳಲ್ಲಿ ಶೇ. 100ರಷ್ಟು ಎಲ್‌ಇಡಿ ಲೈಟಿಂಗ್‌ ಅಳವಡಿಸಲಾಗಿದೆ. ಮಾನವರಹಿತ ಲೆವಲ್‌ ಕ್ರಾಸಿಂಗ್‌ನಲ್ಲಿ ರೈಲ್‌ಮಿತ್ರ ನೇಮಕ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

16 ಹಿರಿಯ ಅಧಿಕಾರಿಗಳು, 48 ಸಿಬ್ಬಂದಿ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರೆ, ಇಬ್ಬರು ಮಹಿಳಾ ಸಿಬ್ಬಂದಿ ವರ್ಷದ ಮಹಿಳೆ ಪ್ರಶಸ್ತಿಗೆ ಭಾಜನರಾದರು. ಸಮಗ್ರ ಎಫಿಶಿಯೆನ್ಸಿ ಪ್ರಶಸ್ತಿ ಬೆಂಗಳೂರು ವಿಭಾಗದ ಪಾಲಾಯಿತು. ಎಸ್‌.ಕೆ. ಅಲ್ಬೇಲಾ ಸ್ವಾಗತಿಸಿದರು. ಶ್ರೀನಿವಾಸ ರಾಘವನ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next