Advertisement

ಕನ್ನಡ ಭಾಷೆಯಲ್ಲಿದೆ ಉಜ್ವಲ ಶಕ್ತಿ

01:44 PM Jan 24, 2021 | Team Udayavani |

ಬೈಲಹೊಂಗಲ: ಇಡೀ ಕನ್ನಡ ನಾಡಿನ ಉಜ್ವಲ ಶಕ್ತಿಯು ಕನ್ನಡದ ಭಾಷೆಯಲ್ಲಿದೆ. ಕರ್ನಾಟಕದಲ್ಲಿ ಕನ್ನಡವೇ ಮಾತೃ ಭಾಷೆಯಾಗಿ, ವ್ಯವಹಾರದ ಭಾಷೆಯಾಗಬೇಕು ಎಂದು ತಾಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆ ಅನ್ನಪೂರ್ಣಾ ಕನೋಜ ಹೇಳಿದರು.

Advertisement

ತಾಲೂಕಿನ ಯರಡಾಲದಲ್ಲಿ ನಡೆದ 6 ನೇ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಭಾಷಣ ಮಾಡಿದ ಅವರು, ಕನ್ನಡದ ಕೃತಿಗಳು ಬೇರೆ ಬೇರೆ ಭಾಷೆಯಲ್ಲಿ ಪ್ರಕಟವಾಗುವಂತಾಗಬೇಕು. ಕನ್ನಡದ ಭಾಷೆಯ ಉಳಿವಿನ ದೃಷ್ಟಿಯಿಂದ ಕನ್ನಡಿಗರಾದ ನಾವು ಕನ್ನಡದಲ್ಲಿಯೇ ವ್ಯವಹರಿಸುವುದು ಅತೀ ಅವಶ್ಯಕ. ಇಂಗ್ಲಿಷ್‌ ಮಾಧ್ಯಮದಲ್ಲಿ ಓದಿದರೆ ಮಾತ್ರ ನಾನು ಬದುಕಲು ಸಾಧ್ಯ ಎಂದು ತಿಳಿಯುವುದು ಕೇವಲ ಭ್ರಮೆ. ನಾವು ಕನ್ನಡವನ್ನೇ ಜೀವಿಸಬೇಕು. ಕನ್ನಡದ ಪತ್ರಿಕೆಗಳನ್ನು ಓದಬೇಕು. ಕನ್ನಡದ ಸಿನಿಮಾಗಳನ್ನು ನೋಡಬೇಕು. ಕನ್ನಡ ಯಾವತ್ತೂ ಬೆಳಗುವ ದೀಪವಾಗಬೇಕು ಎಂದು ಸಲಹೆ ಮಾಡಿದರು.

ಚನ್ನಮ್ಮನ ಕಿತ್ತೂರು ಶಾಸಕ ಮಹಾಂತೇಶ್‌ ದೊಡ್ಡಗೌಡರ ಮಾತನಾಡಿ, ಕನ್ನಡ ನಾಡು ನುಡಿಗೆ ಕಸಾಪ ಉತ್ತಮ ಕೊಡುಗೆ ನೀಡುತ್ತಿದೆ. ಸಣ್ಣ ಹಳ್ಳಿ ಯರಡಾಲದಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸ್ತುತ್ಯಾರ್ಹ ಎಂದರು. ಶಾಸಕ ಮಹಾಂತೇಶ್‌ ಕೌಜಲಗಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೆ ಬೈಲಹೊಂಗಲದ ಮಂಗಲಾ ಮೆಟಗುಡ್ಡ ಅಧ್ಯಕ್ಷೆ ಆದ ಮೇಲೆಕ್ರಿಯಾಶೀಲ ಕಾರ್ಯಗಳಾಗುತ್ತಿವೆ. 5 ವರ್ಷದಲ್ಲಿ 40 ಸಮ್ಮೇಳನ ನಡೆಸಿದ್ದಾರೆ. ಇನ್ನೂ ಹೆಚ್ಚಿನ ಕನ್ನಡ ಕಾರ್ಯ ಅವರಿಂದ ಮಾಡಲಿ. ಕನ್ನಡ ಭಾಷೆ ಉಳಿಸಿ ಬೆಳೆಸುವಲ್ಲಿ ಪ್ರತಿಯೊಬ್ಬ ಕನ್ನಡಾಭಿಮಾನಿಗಳ ಕರ್ತವ್ಯ ಮುಖ್ಯವಾಗಿದೆ. ಸಾಹಿತ್ಯದ ಸಂಪೂರ್ಣ ಸದುಪಯೋಗವನ್ನು ಜನತೆ ಪಡೆದುಕೊಳ್ಳುವಂತಾಗಲಿ ಎಂದರು.

ಬೆಳಗಾವಿ ಕಾಡಾ ಪ್ರಾಧಿಕಾರದ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ್‌ ಮಾತನಾಡಿ, ಕನ್ನಡ ನಾಡು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಹಿತ್ಯ ಪರಿಷತನ ಸಮ್ಮೇಳನದಲ್ಲಿ ಸಾಹಿತಿಗಳಿಂದ ಉತ್ತಮ ಮಾತುಗಾರಿಕೆಯಿಂದ ಜನರನ್ನು ಕನ್ನಡದತ್ತ ಸೆಳೆಯುವ ಕೆಲಸವಾಗಲಿ ಎಂದರು. ಮೂರು ಸಾವಿರಮಠದ ಪ್ರಭು ನೀಲಕಂಠ  ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ನಿವೃತ್ತ ಶಿಕ್ಷಕ ಬಸಪ್ಪ ತಿಗಡಿ, ಪರಿಷತ್‌ ಧ್ವಜಾರೋಹಣವನ್ನು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ನಾಡ ಧ್ವಜಾರೋಹಣವನ್ನು ತಾಲೂಕು ಕಸಾಪ ಅಧ್ಯಕ್ಷೆ ಗೌರಾ ದೇವಿ ತಾಳಿಕೋಟಿ ಮಠ ನೆರವೇರಿಸಿದರು. ಸಮ್ಮೇಳನದ ಸರ್ವಾಧ್ಯಕ್ಷೆ ಅನ್ನಪೂರ್ಣಾ ಕನೋಜ ದಂಪತಿಯನ್ನು ಸಾರೋಟಿನಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು.

Advertisement

ಇದನ್ನೂ ಓದಿ:‘ಜಿಡಿಪಿ’ಯಲ್ಲಿ ಭಾರಿ ಬೆಳವಣಿಗೆ ಕಂಡಿದೆ : ರಾಹುಲ್ ಟೀಕೆ

ಮಾಜಿ ಸಂಸದ ಎಸ್‌.ಪಿ. ಸಿದ್ನಾಳ್‌, ಜಿ.ಪಂ ಸದಸ್ಯೆ ರೋಹಿಣಿ ಪಾಟೀಲ್‌,ಧಾರವಾಡ ಆಕಾಶವಾಣಿ ಮುಖ್ಯಸ್ಥ ಡಾ.ಬಸು ಬೆವಿನಗಿಡದ, ಸಾಹಿತಿ ಯ.ರು.ಪಾಟೀಲ, ಎಪಿಎಂಸಿ ಮಾಜಿಅಧ್ಯಕ್ಷ ಸಿ.ಆರ್‌. ಪಾಟೀಲ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಕಸಾಪ ಜಿಲ್ಲಾ ಕಾರ್ಯದರ್ಶಿ ಎಂ.ವೈ.ಮೆಣಶಿನಕಾಯಿ, ತಾಲೂಕಾಧ್ಯಕ್ಷೆ ಗೌರಾದೇವಿ ತಾಳಿಕೊಟಿಮಠ, ಮಂಗಲಾ ಮೆಟಗುಡ್ಡ,ಯರಡಾಲ ಗ್ರಾಮದ ಮುಖಂಡರು, ಸಾಹಿತ್ಯಾಸಕ್ತರು ಪಾಲ್ಗೊಂಡಿದ್ದರು. ಗೌರಿ ಶಿವಯ್ಯ ಕುಲಕರ್ಣಿ ಭರತನಾಟ್ಯ ಸಾಹಿತ್ಯಾಸಕ್ತರ ಗಮನ ಸೆಳೆಯಿತು.

Advertisement

Udayavani is now on Telegram. Click here to join our channel and stay updated with the latest news.

Next