Advertisement
ದೇಶದ ಅತೀ ದೊಡ್ಡ ರಾಜ್ಯ ಎಂಬ ಹೆಗ್ಗಳಿಕೆ ಪಾತ್ರವಾ ಗಿರುವ ಉತ್ತರ ಪ್ರದೇಶ ರಾಜ ಕೀಯದ ಯುದ್ಧಾಂಗಣ ನನಗೆ ರಾಜಕೀಯವಾಗಿ ಹೊಸ ಪಾಠ ಕಲಿಸಿ ಕೊಟ್ಟಿದೆ. ಅಲ್ಲಿನ ಆಹಾರ, ಉಡುಗೆ ತೊಡುಗೆ, ಬೇರೆ-ಬೇರೆ ಭಾಷೆಯ ಸಂಸ್ಕೃತಿಯ ಪರಿಚಯವಾಗಿದೆ.
Related Articles
Advertisement
ನಮ್ಮ ದಕ್ಷಿಣ ಭಾರತಕ್ಕೆ ಹೋಲಿಕೆ ಮಾಡಿ ನೋಡಿದಾಗ ಇಲ್ಲಿನ ಜನ ತುಂಬಾ ಮುಗ್ಧರು. ಜತೆಗೆ ಬಡವರು. ದಕ್ಷಿಣ ಭಾರತದ ಜನರಲ್ಲಿ ರಾಜಕೀಯದ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜ ನೆಗಳು ಮತ್ತು ಸವಲತ್ತುಗಳ ಬಗ್ಗೆ ಸಾಕಷ್ಟು ಮಾಹಿತಿ ಇರುತ್ತದೆ. ಆದರೆ ಇಲ್ಲಿನ ಹಲವು ಜನರಿಗೆ ಅಬೆಲೆಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತು ಗಳ ಬಗ್ಗೆ ಅಷ್ಟೊಂದು ಮಾಹಿತಿಯಿಲ್ಲ. ಇಲ್ಲಿ ಚುನಾಯಿತ ಪ್ರತಿ ನಿಧಿ ಏನೋ ಹೇಳುತ್ತಾರೋ ಅದನ್ನು ಕೇಳುವ ಪರಿಸ್ಥಿಯಲ್ಲಿ ಜನ ರಿದ್ದಾರೆ. ನಮ್ಮಲ್ಲಿ ರೇಷನ್ ಇಲ್ಲದವರಿಗೆ ರೇಷನ್ ಕೊಟ್ಟರೆ ಬಹಳ ದೊಡ್ಡ ವಿಷಯ ಆಗುವುದಿಲ್ಲ. ಆದರೆ, ಇಲ್ಲಿ ತಿಂಗಳಿಗೆ 2 ಸಲ ರೇಷನ್ ಸಿಗುತ್ತದೆ ಎನ್ನುವುದೇ ಚುನಾವಣೆಯ ವಿಷಯ ಆಗಿ ಉಳಿದು ಕೊಂಡಿದೆ. ನಾನು ಅವಧ್ ಪ್ರಾಂತ್ಯದಲ್ಲಿ ಸುತ್ತಾಟ ನಡೆಸಿದ ಅನುಭವದಲ್ಲಿ ಹೇಳುವುದಾದರೆ ರೇಷನ್ ಎರಡು ಬಾರಿ ಸಿಗುತ್ತಿದೆ. ಹಸಿದವರಿಗೆ ಅನ್ನವನ್ನು ನೀಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಅವರ ಋಣ ನಮ್ಮ ಮೇಲೆ ಇದೆ. ಅದನ್ನು ತೀರಿಸುತ್ತೇವೆ ಎಂಬ ಮಾತು ಗಳನ್ನು ಅಲ್ಲಿನ ಜನರು ಆಡುತ್ತಿದ್ದಾರೆ. ಶೇ. 90ರಷ್ಟು ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳಲ್ಲೂ ಕೂಡ ಇದೇ ಭಾವನೆ ಇದೆ. ಅಭ್ಯರ್ಥಿಗಳ ತಪ್ಪು ಇದ್ದರೂ “ಮೋದಿ, ಯೋಗಿ, ರಾಮ’ ಎಂಬ ಮೂರು ವಿಷಯಗಳ ಮುಂದೆ ಇಲ್ಲಿ ಎಲ್ಲವೂ ನಗಣ್ಯ ಎನಿಸುತ್ತದೆ.
ಯೋಗಿ ಆದಿತ್ಯನಾಥ್ ಅವರು ಉತ್ತಮ ರೀತಿ ಯಲ್ಲಿ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ. ಹೀಗಾಗಿ ಅಭಿವೃದ್ಧಿಯ ಆಧಾರದಲ್ಲಿ ರಾಜಕೀಯ ಮಾಡಬಹುದು ಎಂಬುವುದು ನನಗೆ ಖುದ್ದಾಗಿ ಚುನಾವಣೆ ಅಖಾಡದಲ್ಲಿ ಅನುಭವಕ್ಕೆ ಬಂತು.
ಇನ್ನು ಕೆಲವು ಭಾಗಗಳ ಜನರಲ್ಲಿ ದಕ್ಷಿಣ ಭಾರತ ಎಂದರೆ ವಿದೇಶದಲ್ಲಿ ಇದೆ ಎಂಬ ರೀತಿಯಲ್ಲಿ ಭಾವಿಸಿ ಕೊಂಡಿದ್ದಾರೆ. ಅದು ತುಂಬಾ ದೂರದ ಊರು ಎಂದು ಅಂದು ಕೊಂಡಿದ್ದಾರೆ. ಆದರೆ ನಾನು ಆ ನಾಡಿಗೆ ಕಾಲಿಟ್ಟಾಗ ಜನರೆಲ್ಲರೂ ಅಕ್ಕರೆಯಿಂದ ಸ್ವೀಕರಿಸಿ, ಪ್ರೀತಿ ತೋರಿಬೆಲೆು.
ಅವಧ್ ಪ್ರಾಂತ್ಯಕ್ಕೆ ಹೆಜ್ಜೆಯಿರಿಸುವಾಗ ನನಗೆ ಭಾಷೆ ವಿಚಾರದಲ್ಲಿ ಸ್ವಲ್ಪಮಟ್ಟಿನ ಅಳುಕಿತ್ತು. ಹಿಂದಿ ಭಾಷೆ ಮಾತನಾಡುವಾಗ ಏಕವಚನ ಮತ್ತು ಬಹು ವಚನಗಳ ಬಗ್ಗೆ ನನಗೆ ಹೆಚ್ಚಿನ ರೀತಿಯ ಅರಿವಿರಲಿಲ್ಲ. ಆದರೆ ನಾನು ಪ್ರಚಾರಕ್ಕೆ ಹೋದಾಗಲೆಲ್ಲ ನಾನು ದಕ್ಷಿಣ ಭಾರತದವಳು, ಹಿಂದಿ ಸರಿಯಾಗಿ ಮಾತ ನಾಡಲು ಬರುವುದಿಲ್ಲ ಎಂದು ಹೇಳಿಯೇ ಭಾಷಣ ಆರಂಭಿಸುತ್ತಿದ್ದೆ. ನಾನು ತಪ್ಪು ತಪ್ಪು ಮಾತನಾಡಿಬೆಲೊ ಜನರು ಖುಷಿ ಪಟ್ಟರು. ದಕ್ಷಿಣ ಭಾರತದವರಿಗೆ ಹಿಂದಿ ಭಾಷೆ ಬರೋದಿಲ್ಲ ಎಂದು ಕೊಂಡಿದ್ದೇವೆ. ಆಬೆಲೊ ಮಾತನಾಡಲು ಪ್ರಯತ್ನಿಸುತ್ತಾರೆ ಎಂದು ಸಂತಸ ಪಟ್ಟರು.
ಬುಂದೇಲ್ ಖಂಡದ ಭಾಗಗಳಲ್ಲಿ ಬೇರೆ-ಬೇರೆ ಭಾಷೆಗಳನ್ನು ಸ್ಥಳೀಯರು ಮಾತನಾಡುತ್ತಾರೆ. ನೇಪಾಲದ ಗಡಿ ಭಾಗದ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಅಲ್ಲಿನ ಜನರ ಭಾಷೆ ಕೂಡ ಬೇರೆ ಶೈಲಿಯದ್ದಾಗಿದೆ. ಪ್ರಚಾರದ ವೇಳೆ ಕೆಲವು ಸಲ ನನಗೆ ಜನರ ಭಾಷೆ ಅರ್ಥ ಆಗದಿರುವ ಸನ್ನಿವೇಶ ಕೂಡ ಇದೆ. ಹೀಗಾಗಿ ಹಿಂದಿಯನ್ನು ಅಲ್ಪ ಸ್ವಲ್ಪ ಕಲಿಯುವಂತೆ ಆಯಿತು.
ನಾವು ದಕ್ಷಿಣ ಭಾರತದವರು ಅಕ್ಕಿಯಲ್ಲಿ ಹೆಚ್ಚಿನ ಆಹಾರ ಖಾದ್ಯಗಳನ್ನು ಮಾಡುತ್ತೇವೆ. ಹೀಗಾಗಿ ಅಲ್ಲಿ ಆಹಾರ ಸೇವೆ ಸವಾಲಾಗಿತ್ತು. ಬರೀ ದಾಲ್, ಚಪಾತಿ ತಿನ್ನುವುದೇ ಆಗಿ ಹೋಗಿತ್ತು. ನಮ್ಮೂರಿನಲ್ಲಿ ಅಕ್ಕಿ ಬಳಸುವಷ್ಟು ಇಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. ಬಾಸುಮತಿ ಅಕ್ಕಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆ ಮಾಡುತ್ತಾರೆ. ಆದರೆ ಪ್ಲೇನ್ ರೈಸ್ ತಿನ್ನೋದೆ ಕಷ್ಟ ಆಯಿತು. ಆದರೂ ಅನಂತರ ದಿನಗಳಲ್ಲಿ ಆ ಆಹಾರಕ್ಕೆ ಒಗ್ಗಿಕೊಂಡೆ. ಉಜ್ವಲ್ ಯೋಜನೆ, ರೇಷನ್ ಕಾರ್ಡ್ ಸೇರಿದಂತೆ ಸರಕಾರದ ಅನುಪಮ ಯೋಜನೆಗಳು ಜನರ ಮನದ ಜತೆಗೆ ಮನೆಗೆ ತಲುಪಿವೆ. ಉತ್ತರ ಪ್ರದೇಶ ದಲ್ಲಿ ಸತತ 24 ಗಂಟೆಗಳ ಕಾಲ ವಿದ್ಯುತ್ ನೀಡ ಲಾಗುತ್ತಿದೆ. ಜತೆಗೆ ನಮ್ಮ ರಾಜ್ಯದಲ್ಲೂ ಆಗದಂತಹ ಪ್ರಧಾನಮಂತ್ರಿ ಆವಾಸ್ ಯೋಜನೆ ಯಶಸ್ವಿಯಾಗಿ ದೊಡ್ಡ ಪ್ರಮಾಣದಲ್ಲಿ ಜಾರಿಯಾಗಿದೆ.
-ಶೋಭಾ ಕರಂದ್ಲಾಜೆ