Advertisement

ಮತದಾರರಿಗೆ ಆಮಿಷವೊಡ್ಡುವ ರಾಜಕಾರಣಿಗಳ ದೂರವಿಡಿ

01:20 PM Feb 23, 2018 | Team Udayavani |

ಪಿರಿಯಾಪಟ್ಟಣ: ಚುನಾವಣಾ ಸಮಯದಲ್ಲಿ ಮತದಾರರಿಗೆ ಆಸೆ-ಆಮಿಷಗಳನ್ನೊಡುವ ರಾಜಕಾರಣಿಗಳನ್ನು ಅಧಿಕಾರದಿಂದ ದೂರವಿಡಬೇಕೆಂದು ಸಂಸದ ಪ್ರತಾಪ್‌ ಸಿಂಹ ಹೇಳಿದರು. ತಾಲೂಕಿನ ಪಂಚವಳ್ಳಿ ಗ್ರಾಮದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

Advertisement

ರಾಜಕಾರಣದಲ್ಲಿ ಬದಲಾವಣೆಯಾಗಬೇಕಿದೆ, ಮತದಾರರಿಗೆ ಹಣ ನೀಡಿ ಆಣೆ-ಪ್ರಮಾಣಗಳನ್ನು ಮಾಡಿಸಿ ದೇವರ ಹೆಸರಿನಲ್ಲಿ ರಾಜಕೀಯ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಶಾಸಕರಿಲ್ಲದಿದ್ದರು ಸಹ ಕೇಂದ್ರದ ಸಂಸದ ನಿಧಿಯ ಅನುದಾನಗಳನ್ನು ತಂದು ಎಲ್ಲಾ 11 ವಿಧಾನಸಭಾ ಕ್ಷೇತ್ರಗಳಿಗೂ ಸಮಾನಾಗಿ ನೀಡಿದ್ದೇನೆ.

ಕೇವಲ ಮತ ನೀಡಿದ ಕ್ಷೇತ್ರಗಳಿಗೆ ಅನುದಾನ ನೀಡಿ ಮತ ನೀಡದ ಕ್ಷೇತ್ರಗಳನ್ನು ನಿರ್ಲಕ್ಷ್ಯ ಮಾಡುವ ಅಧಿಕಾರ ದುರಾಸೆ ನನಗಿಲ್ಲ.  ಜಿಲ್ಲೆಯ ಹೊಗೆಸೊಪ್ಪು ಬೆಳೆಗಾರರಿಗೆ ಸರಾಸರಿ ಉತ್ತಮ ಬೆಲೆ ನೀಡಿಕೆ, ಸಕಾಲಕ್ಕೆ ಗೊಬ್ಬರ ವಿತರಣೆ, ಮೈಸೂರಿನಲ್ಲಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಸ್ಥಾಪನೆ, ಮೊದಲ ಮೇಲ್ಸೆತುವೆ ನಿರ್ಮಾಣ,

ರಿಂಗ್‌ ರಸ್ತೆ ಅಭಿವೃದ್ಧಿ ಸೇರಿದಂತೆ ಮೈಸೂರಿಗೆ ಪ್ರಧಾನ ಮಂತ್ರಿ ಅವರನ್ನು ಕರೆಸಿ ಹೆಚ್ಚುವರಿ ರೈಲು ಸೇವೆಗೆ ಚಾಲನೆ, ರೈಲ್ವೆ ಟರ್ಮಿನಲ್‌ ನಿರ್ಮಾಣ, ಬೆಂಗಳೂರು-ಮೈಸೂರು ರಸ್ತೆ ಮೇಲœರ್ಜೆಗೇರಿಸುವ ಯೋಜನೆಗಳಿಗೆ ಚಾಲನೆ ನೀಡಿದಂತ ಕೆಲಸಗಳನ್ನು ಮಾಡಿದ್ದೇನೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ: ತಾಲೂಕು ಬಿಜೆಪಿ ಮುಖಂಡ ಹೆಚ್‌.ಡಿ.ಗಣೇಶ್‌ ಮಾತನಾಡಿ, ಕೇಂದ್ರ ಸರ್ಕಾರ ಅನುದಾನಗಳಿಗೆ ರಾಜ್ಯ ಸರ್ಕಾರ ತನ್ನ ಕೊಡುಗೆ ಎಂಬಂತೆ ಬಿಂಬಿಸುತ್ತಿದೆ. ಸಂಸದ ಪ್ರತಾಪ್‌ಸಿಂಹ ಅವರು ತಾಲೂಕಿನ ಜನತೆಯ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸಿದ್ದಾರೆ. ಶಾಸಕ ಕೆ.ವೆಂಕಟೇಶ್‌ ಅವರಿಗೆ ಚುನಾವಣಾ ಸಮಯದಲ್ಲಿ ಮಾತ್ರ ಮತದಾರರ ನೆನಪಾಗುತ್ತಿದ್ದು ಈ ಬಾರಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸುವಂತೆ ಮನವಿ ಮಾಡಿದರು.

Advertisement

ಇದೆ ಸಂದರ್ಭದಲ್ಲಿ ಇತ್ತೀಚಿಗೆ ವಿದ್ಯುತ್‌ ಅಪಘಾತದಿಂದ ಮೃತಪಟ್ಟಿದ್ದ ತಾಲೂಕು ಬಿಜೆಪಿ ಯುವ ಮೋರ್ಚಾ ಮಾಜಿ ಅಧ್ಯಕ್ಷ ಮಲ್ಲಿನಾಥಪುರ ಗ್ರಾಮದ ಎಂ.ಡಿ.ಪುರುಷೋತ್ತಮ್‌ ಮನೆಗೆ ಭೇಟಿ ನೀಡಿ ಮೃತನ ಪೋಷಕರಿಗೆ ಸಾಂತ್ವನ ಹೇಳಿದರು. ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪಿ.ಜೆ.ರವಿ, ಯುವಮೋರ್ಚಾ ಅಧ್ಯಕ್ಷ ಪಿ.ಟಿ.ಲಕ್ಷ್ಮೀನಾರಾಯಣ್‌, ಮುಖಂಡರಾದ ರಾಜೇಗೌಡ, ಶಶಿಕುಮಾರ್‌, ಶಂಭುಲಿಂಗಪ್ಪ, ಲೋಕಪಾಲಯ್ಯ, ವಿಕ್ರಂರಾಜ್‌, ಸರವಣ್‌ ಕುಮಾರ್‌, ಮಹದೇವ್‌, ಪ್ರಹ್ಲಾದ್‌, ಆನಂದ್‌, ನಾಗೇಶ್‌, ಸ್ವಾಮಿ ಮತ್ತಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next