Advertisement
ದೇಹದಲ್ಲಿ ಕಬ್ಬಿಣಾಂಶ ಕಡಿಮೆ ಇರುವುದನ್ನು ತಿಳಿಯುವ ಪ್ರಮುಖ ಲಕ್ಷಣಗಳು.
ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದರೆ ರಕ್ತಹೀನತೆ ಉಂಟಾಗು ತ್ತದೆ. ಇದರಿಂದಾಗಿ ನಮ್ಮ ನಾಲಿಗೆ ದಪ್ಪವಾಗಿ ಊದಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ರುಚಿ ಗ್ರಂಥಿಗಳು ಆಹಾರದ ಸ್ವಾದವನ್ನು, ರುಚಿಯನ್ನು ಗ್ರಹಿಸಲು ಆಸಾಧ್ಯವಾದಾಗುತ್ತದೆ. ಸೀಳುವ ತುಟಿಗಳು
ಚಳಿಗಾಲದಲ್ಲಿ ತುಟಿಗಳು ಒಡೆಯುವುದು ಸಹಜ. ಆದರೆ ಇದಲ್ಲದೇ ಇನ್ನೊಂದು ಬಾರಿ ತುಟಿ ಒಡೆಯುವುದು ದೇಹದಲ್ಲಿ ಕಬ್ಬಿಣಾಂಶ ಕಡಿಮೆಯಾದಾಗ ಮಾತ್ರ. ಇದರಿಂದ ಆಹಾರ ತಿನ್ನಲು, ಮಾತನಾಡಲು ಕಷ್ಟವಾಗುತ್ತದೆ.
Related Articles
ಕಬ್ಬಿಣಾಂಶ ಕೊರತೆಯಿಂದಾಗಿ ನಾಲಿಗೆಯೂ ಊದಿಕೊಳ್ಳುತ್ತದೆ. ಈ ಕಾರಣದಿಂದ ರೋಗಿಯೂ ಹೆಚ್ಚು ಮಂಜುಗಡ್ಡೆಯನ್ನು ತಿನ್ನಲು ಇಚ್ಚಿಸುತ್ತಾನೆ. ಅಲ್ಲದೇ ಮಣ್ಣು, ಪೈಂಟ್, ಪ್ಲಾಸ್ಟರ್ ತಿನ್ನಲು ಪ್ರಚೋದನೆಗೆ ಒಳಗಾಗುತ್ತಾರೆ ಎನ್ನುತ್ತಾರೆ ವೈದ್ಯರು. ಈ ಲಕ್ಷಣಗಳು ನಮ್ಮ ದೇಹದಲ್ಲಿ ಕಬ್ಬಿಣಾಂಶ ಕೊರತೆಯಿಂದ ಮಾತ್ರ ಸಾಧ್ಯ.
Advertisement
ಕಾಲುಗಳಲ್ಲಿ ಜೋಮು ತುಂಬುವುದು ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗದಿದ್ದಾಗ ಅಥವಾ ರಕ್ತ ಕಡಿಮೆಯಿಂದಾಗಿ ಕಬ್ಬಿಣಾಂಶ ಕೊರತೆಯಿಂದ ಕೈ, ಕಾಲುಗಳಲ್ಲಿ ಜೋಮು ತುಂಬಿಕೊಳ್ಳುತ್ತದೆ. ಬಿರುಸಾದ ಉಗುರುಗಳು
ಕಬ್ಬಿಣಾಂಶದ ಕೊರತೆಯಿಂದಾಗಿ ಉಗುರುಗಳು ತುಂಬಾ ಬಿರುಸುಗಾತ್ತವೆ. ಈ ಸಂದರ್ಭದಲ್ಲಿ ಸುಲಭವಾಗಿ ಮುರಿಯ ಬಹುದು. ಇದಕ್ಕಾಗಿ ವೈದ್ಯರ ಸಂಪರ್ಕ ಅತ್ಯಗತ್ಯ. ಪರಿಹಾರಗಳು
ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಬೇಕು.ಕಬ್ಬಿಣಾಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸುವುದರಿಂದ ರಕ್ತಹೀನತೆ ತಡೆಯಬಹುದು.
ತರಕಾರಿ, ಸೊಪ್ಪು,ರಾಗಿ,ಮೊಳಕೆ ಕಟ್ಟಿದ ಕಾಳುಗಳು,ಬೆಲ್ಲ, ನೆಲ್ಲಿಕಾಯಿ,ಕಿತ್ತಳೆ ಹಣ್ಣು ಮೊದಲಾದ ಸೇವನೆಯಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕಬ್ಬಿಣಾಂಶ ಹೊರೆಯುತ್ತದೆ. ಕಬ್ಬಿಣಾಂಶ ಯುಕ್ತ ವಾದ ಮಾತ್ರೆಗಳು ಅಥವಾ ಸಿರಪ್ ಸೇವಿಸಿಬೇಕು.ಇದರಿಂದ ರಕ್ತ ಹೀನತೆ ತಡೆಯಬಹುದಾಗಿದೆ. -ಅಭಿನವ