ಹೊಸದಿಲ್ಲಿ: ನಕ್ಸಲ್ ಭೀತಿ ನಿವಾರಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಹೊಸದಿಲ್ಲಿಯಲ್ಲಿ ನಕ್ಸಲ್ ಪೀಡಿತ ಹತ್ತು ರಾಜ್ಯಗಳ ಸಿಎಂಗಳು ಮತ್ತು ಅಧಿಕಾರಿಗಳ ಜತೆಗೆ ರವಿವಾರ ಸಭೆ ನಡೆಸಿದ ಸಂದರ್ಭದಲ್ಲಿ ಈ ಅಂಶ ಸ್ಪಷ್ಟಪಡಿಸಿದ್ದಾರೆ.
ನಕ್ಸಲರಿಗೆ ಹಣದ ಹರಿವು ತಪ್ಪಿಸಲು ಕೇಂದ್ರ ಮತ್ತು ರಾಜ್ಯಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದಿದ್ದಾರೆ.
ಮಾವೋವಾದಿಗಳೊಂದಿಗಿನ ನಮ್ಮ ಹೋರಾಟ ಕೊನೆಯ ಹಂತ ತಲುಪಿದೆ. 2020ರಲ್ಲಿ ನಕ್ಸಲರಿಂದ ಸಂಭವಿಸಿದ ಸಾವಿನ ಸಂಖ್ಯೆಯಲ್ಲೂ ಭಾರೀ ಇಳಿಕೆಯಾಗಿದೆ. ಅದನ್ನು ಈಗ ಅಂತ್ಯಗೊಳಿಸಬೇಕಿದೆ.
ನಕ್ಸಲ್ ಭೀತಿಯನ್ನು ಕೊನೆಗಾಣಿಸುವುದು ರಾಜ್ಯಗಳಿಗೆ ಆದ್ಯತೆಯಾಗಬೇಕು. ಹಾಗೆಯೇ ನಕ್ಸಲರಿಗೆ ಹಣ ಪೂರೈಕೆ ಮಾಡುತ್ತಿರುವ ಮೂಲಗಳನ್ನು ತಪ್ಪಿಸಬೇಕು ಎಂದಿದ್ದಾರೆ.
ಇದನ್ನೂ ಓದಿ:ನನ್ನ ರಾಜೀನಾಮೆಗೆ ಮೋದಿಯೂ ಬೆರಗಾಗಿದ್ದರು: ಬಿಎಸ್‌ವೈ
ಒಡಿಶಾ, ತೆಲಂಗಾಣ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಝಾರ್ಖಂಡ್ ಸಿಎಂಗಳು ಭಾಗವಹಿಸಿದ್ದರು. ಉಳಿದ ರಾಜ್ಯಗಳಿಂದ ಪ್ರತಿನಿಧಿಗಳನ್ನು ಕಳುಹಿಸಿಕೊಡಲಾಗಿತ್ತು.