Advertisement
ಪ್ರಿಯಾಂಕಾ ಗೋಸ್ವಾಮಿ ಅವರು ಕಾಮನ್ವೆಲ್ತ್ ಕೂಟದಲ್ಲಿ ವೇಗದ ನಡಿಗೆಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ದಾಖಲೆಗೆ ಪಾತ್ರರಾದರು. ತನ್ನದೇ ದಾಖಲೆಯನ್ನು ಉತ್ತಮ ಪಡಿಸಿಕೊಂಡ ಪ್ರಿಯಾಂಕಾ 43 ನಿಮಿಷ 38 ಸೆಕೆಂಡ್ಸ್ ನಲ್ಲಿ ಗುರಿ ತಲುಪಿದರು. ಚಿನ್ನದ ಪದಕ ಪಡೆದ ಆಸ್ಟ್ರೇಲಿಯಾದ ಜೆಮಿಮಾ ಮೊಂಟಾಗ್ ಅವರು 42 ನಿಮಿಷ 34 ಸೆಕೆಂಡ್ಸ್ ನಲ್ಲಿ ಅಂತಿಮ ಗುರಿ ತಲುಪಿದರು. ಕೀನ್ಯಾದ ವಮುಸ್ಯಿ ಎನ್ ಗಿ ಅವರು ಕಂಚಿನ ಪದಕ ಪಡೆದರು.
Related Articles
Advertisement
ಪುರುಷರ ಸ್ಟೀಪಲ್ ಚೇಸ್ ಪಂದ್ಯದಲ್ಲಿ ಭಾರತದ ಅವಿನಾಶ ಮುಕುಂದ್ ಸಬ್ಲೆ ಅವರು ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. 3000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಅವರು ರಾಷ್ಟ್ರೀಯ ದಾಖಲೆಯನ್ನು 9 ನೇ ಬಾರಿಗೆ ಮುರಿದರು. 8:11.20 ರಲ್ಲಿ ಗುರಿ ತಲುಪಿದ ಅವರು ಭಾರತದ ಮೊಟ್ಟಮೊದಲ ಸ್ಟೀಪಲ್‌ಚೇಸ್ ಪದಕವನ್ನು ಗೆದ್ದರು.