Advertisement
ಆವತಿ ಬೆಟ್ಟದ ಮೇಲೆ ರಣಭೈರೇಗೌಡ ವಾಸವಿದ್ದ ಮನೆ ಕುರುಹುಗಳಿವೆ. ಮುದ್ದೆ ಬಂಡೆ ಸೇರಿದಂತೆ ಅನೇಕ ಜೀವವೈವಿಧ್ಯ, ಸಸ್ಯ ಸಂಕುಲಗಳಿವೆ. ಇತಿಹಾಸದ ಕುರುಹುಗಳನ್ನು ತನ್ನ ಒಡಲಿನಲ್ಲಿಟ್ಟುಕೊಂಡಿರುವ ಈ ಬೆಟ್ಟವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕಾಗಿದೆ. ಕೇವಲ ಜಯಂತಿಗಳಲ್ಲಿ ಘೋಷಣೆಗಷ್ಟೇ ಮೀಸಲಾಗಿದೆ ಹೊರತು, ಯಾವುದೂ ಕಾರ್ಯಗತವಾಗಿಲ್ಲ. ಚರಿತ್ರೆಯ ಪುಟದಲ್ಲಿರುವ ಆವತಿ ಗ್ರಾಮ ರಣಭೈರೇಗೌಡ ಕಟ್ಟಿದ ಸಂಸ್ಥಾನ ರಣಭೈರೇಗೌಡರ ಪುತ್ರಿ ವೀರಕೆಂಪಮ್ಮ ಗ್ರಾಮಸ್ಥರ ಒಳತಿಗಾಗಿ ಪ್ರಾಣ ತ್ಯಾಗ ಮಾಡಿದ ಸ್ಥಳ ಬೆಟ್ಟದಲ್ಲಿದೆ.
Related Articles
Advertisement
ಒಕ್ಕಲಿಗರ ಸಂಘದಿಂದ ಅಭಿವೃದ್ಧಿಯ ಚಿಂತನೆ: ಮುಂದಿನ ದಿನಗಳಲ್ಲಿ ಸರ್ಕಾರ ಅಭಿವೃದ್ಧಿಪಡಿಸದಿದ್ದರೆ, ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯ ನಿರ್ಣಯ ಕೈಗೊಂಡು ಅಭಿವೃದ್ಧಿಪಡಿಸುವ ಚಿಂತನೆಯಿದೆ. ಪ್ರವಾಸೋದ್ಯಮ ಇಲಾಖೆ ಮತ್ತು ಕೇಂದ್ರ ಪ್ರಾಚ್ಯವಸ್ತು ಸರ್ವೇಕ್ಷಣ ಇಲಾಖೆ ಐತಿಹಾಸಿಕ ಸ್ಥಳ ಅಭಿವೃದ್ಧಿಗೆ ವಿಫಲವಾಗಿದೆ. ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು. ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆ ನಿರ್ಮಾಣ ಸಂತಸ ತಂದಿದೆ. ಅದೇ ಮಾದರಿಯಲ್ಲಿ ಕೆಂಪೇಗೌಡ ವಂಶಸ್ಥ ರಣಭೈರೇಗೌಡರ ಕರ್ಮಭೂಮಿಯನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು ಎಂದು ತಾಲೂಕು ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಜೊನ್ನಹಳ್ಳಿ ಮುನಿರಾಜು ಮನವಿ ಮಾಡಿದ್ದಾರೆ.
ಪಾರಂಪರಿಕ ನೆಲೆ ಮತ್ತು ಕುರುಹು ಉಳಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ. ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಈ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಿದರೆ ಹೆಚ್ಚಿನ ಜನ ಬರುತ್ತಾರೆ. ಬೆಟ್ಟ ಉಳಿದರೆ ರಣಭೈರೇಗೌಡರ ಇತಿಹಾಸ ತಿಳಿಯಬಹುದಾಗಿದೆ. – ಬಸವರಾಜು, ಗ್ರಾಮಸ್ಥ
ರಣಭೈರೇಗೌಡರ ಕರ್ಮಭೂಮಿಯಾದ ಆವತಿ ಬೆಟ್ಟವನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಪ್ರವಾಸೋದ್ಯಮ ಇಲಾಖೆ ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಆವತಿ ಬೆಟ್ಟದಲ್ಲಿ ಯಾವರೀತಿ ಅಭಿವೃದ್ಧಿಪಡಿಸಬೇಕು ಎಂಬ ಸಮಗ್ರ ಮಾಹಿತಿ ನೀಡಲಾಗಿದೆ. – ಚೆಲುವಾಂಬ, ಸಹಾಯಕ ನಿರ್ದೇಶಕಿ, ಪ್ರವಾಸೋದ್ಯಮ ಇಲಾಖೆ
ಆವತಿ ಐತಿಹಾಸಿಕ ಬೆಟ್ಟವಾಗಿದೆ. ರಣಭೈರೇಗೌಡ ಆಳ್ವಿಕೆಯ ಕುರುಹುಗಳಿವೆ. ಅವರ ಕಾಲದಲ್ಲಿ ಮಣ್ಣಿನ ಕೋಟೆಯಿತ್ತು. ಅವರ ಇತಿಹಾಸವನ್ನು ಮತ್ತೆ ಮರುಕಳಿಸಲು ಸರ್ಕಾರ ಅಭಿವೃದ್ದಿಪಡಿಸಬೇಕು. – ಬಿಟ್ಟಸಂದ್ರ ಬಿ.ಜಿ.ಗುರುಸಿದ್ದಯ್ಯ, ಇತಿಹಾಸಕಾರ