Advertisement

ಮಾರುಕಟ್ಟೆಯಲ್ಲಿ ಕಾಣುತ್ತಿಲ್ಲಅವರೆಕಾಯಿ

10:18 AM Dec 17, 2021 | Team Udayavani |

ಬೆಂಗಳೂರು: ಚಳಿಗಾಲ ಆರಂಭವಾಯಿತೆಂದರೆ “ಸೊಗಡು ಅವರೆಕಾಯಿ’ ಸೊಬಗು ಎಲ್ಲೆಂದರಲ್ಲಿ ಕಾಣುತ್ತದೆ. ಹಾಗೆಯೇ ಅವರೆ ಕಾಯಿ ಮೇಳಗಳು ಶುರುವಾಗುತ್ತವೆ. ಆದರೆ ಈ ಬಾರಿ ಡಿಸೆಂಬರ್‌ ಅರ್ಧ ಮುಗಿಯುತ್ತಾ ಬಂದರೂ ಇನ್ನೂ ಮಾರುಕಟ್ಟೆಯಲ್ಲಿ ಅವರೆ ಕಾಯಿಯೇ ಕಾಣುತ್ತಿಲ್ಲ.

Advertisement

ನವೆಂಬರ್‌ನಲ್ಲೆ ನಗರದವಿವಿಪುರ,ಮಲ್ಲೇಶ್ವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸೊಗಡು ಅವರೆ ಕಾಯಿಯ ಮೇಳ ಆರಂಭವಾಗುತ್ತಿತ್ತು. ಅವರೆಕಾಯಿಂದ ಅಣಿಗೊಳಿಸಿದ ತಾಜಾತನದ ತರೇವಾರಿ ಉತ್ಪನ್ನಗಳು ಆಹಾರ ಪ್ರಿಯರಿಗೆ ದೊರಕುತ್ತಿತ್ತು. ಖಾದ್ಯ ಪ್ರಿಯರು ಕೂಡ ಅವರೆ ಮೇಳವನ್ನು ಎದುರು ನೋಡುತ್ತಿದ್ದರು. ಆದರೆ ಈ ಬಾರಿ ಅವರೆ ಮೇಳ ನಡೆಯುವ ಲಕ್ಷಣಗಳೇ ಗೋಚರಿಸುತ್ತಿಲ್ಲ.ಇತ್ತೀಚೆಗೆ ಸುರಿದ ಮಳೆ ಅವರೆಕಾಯಿಫ‌ಸಲಿಗೆಹಾನಿಉಂಟುಮಾಡಿದೆ.

ಆ ಹಿನ್ನೆಲೆಯಲ್ಲಿಯೇ ಬೇಡಿಕೆಯಿರುವಷ್ಟು ಪೊರೈಕೆ ಆಗುತ್ತಿಲ್ಲ. ಅಳಿದುಳಿದ ಅವರೆಕಾಯಿಗಳು ಮಾರುಕಟ್ಟೆಗೆ ಬಾರದೇ ಹೊಲಗಳಲ್ಲೆ ಮಾರಾಟವಾಗುತ್ತಿದೆ ಎಂದು ಅವರೆಕಾಯಿ ವ್ಯಾಪಾರಿಗಳು ಹೇಳುತ್ತಾರೆ. ಅವರೆಕಾಯಿ ಬೆಳೆಗೆ ಇಬ್ಬನಿ ಇರಬೇಕು: ಕಳೆದ ವರ್ಷ ಅವರೆಕಾಯಿಯ ಉತ್ತಮ ಫ‌ಸಲು ಬಂದಿತ್ತು ಪೂರೈಕೆ ಹೇರಳವಾಗಿತ್ತು. ಆದರೆ ಈ ಸಲ ಅವರೆಕಾಯಿ ಬೆಳೆ, ಹೂವು ಬಿಡುವ ಸಂದರ್ಭದಲ್ಲಿ ಮಳೆ ಸುರಿಯಿತು.

ಆ ಹಿನ್ನೆಲೆಯಲ್ಲಿ ನೆಲದಲ್ಲಿ ತೇವಾಂಶ ಕೂಡ ಅಧಿಕವಾಯಿತು. ಸೂರ್ಯನ ಬಿಸಿಲಿಲ್ಲದ ಹಿನ್ನೆಲೆಯಲ್ಲಿ ಇಳುವರಿ ಕೂಡ ಕೈ ಕೊಟ್ಟಿತು ಎಂದು ಮಾಗಡಿಯ ಅವರೆಕಾಯಿ ವ್ಯಾಪಾರಿ ತಿಮ್ಮೇಗೌಡ ಹೇಳುತ್ತಾರೆ. ಸೊಗಡಿನ ಅವರೆಗೆ ಇಬ್ಬನಿ ಇರಬೇಕು ಹಾಗೆಯೇ ಸೂರ್ಯನ ಬಿಸಿಲು ಬೆಳೆಗಳ ಮೇಲೆ ಬೀಳಬೇಕು.ಆದರೆ ಈ ಬಾರಿ ಅಧಿಕ ಮಳೆಯ ಹಿನ್ನೆಲೆಯಲ್ಲಿ ಅವರೆ ಬೆಳೆ ಕೂಡ ಹಾನಿಗೊಳ ಗಾಯಿತು ಎಂದು ಮಾಹಿತಿ ನೀಡುತ್ತಾರೆ. ಅವರೆಕಾಯಿಬೇಳೆ ಬೆಲೆ ದುಪ್ಪಟ್ಟು: ಕಳೆದ ವರ್ಷ ಮಾರುಕಟ್ಟೆಯಲ್ಲಿ ಹೇಳರವಾಗಿ ಅವರೆ ಕಾಯಿ ಸಿಗುತ್ತಿತ್ತು.

ಹೀಗಾಗಿ ಅವರೆಕಾಯಿ ಕೆಜಿಗೆ 20 ರೂ.ದಿಂದ 30ರೂ.ಗೆ ಮಾರಾಟವಾಗಿತ್ತು. ಆದರೆ ಈ ಬಾರಿ ಮಾರುಕಟ್ಟೆಯಲ್ಲಿ ಕಳೆದ ಬಾರಿಯ ವಾತಾವರಣ ಕಾಣುತ್ತಿಲ್ಲ. ಆ ಹಿನ್ನೆಲೆಯಲ್ಲಿ ಕೆಜಿಗೆ 40 ರೂ.ದಿಂದ 50ರೂ. ವರೆಗೂ ಅವರೆಕಾಯಿ ಮಾರಾಟವಾಗುತ್ತಿದೆ ಎಂದು ಕೆ.ಆರ್‌.ಮಾರುಕಟ್ಟೆಯ ಅವರೆಕಾಯಿ ವ್ಯಾಪಾರಿ ಮೂರ್ತಿ ಹೇಳುತ್ತಾರೆ. ಹಾಗೆಯೇ ಕಳೆದ ಸಲ ಅವರೆಬೇಳೆ ಕೆಜಿಗೆ 120ರೂ ದಿಂದ 130ರೂ.ಗೆ ಖರೀದಿ ಆಗುತ್ತಿತ್ತು. ಆದರೆ ಮಾರುಕಟ್ಟೆಯಲ್ಲಿ ಪೊರೈಕೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ 180 ರೂ.ದಿಂದ 200 ರೂ.ವರೆಗೂ ಮಾರಾಟವಾಗುತ್ತಿದೆ ಎಂದು ತಿಳಿಸುತ್ತಾರೆ.

Advertisement

ಇದನ್ನೂ ಓದಿ;- ಉತ್ತಮ ಇಳುವರಿ ಬಂದ್ರೂ ಬಾಳೆಹಣ್ಣಿಗೆ ಬರಲಿಲ್ಲ ಬೆಲೆ

ಮಹಾರಾಷ್ಟ್ರ ಕೂ R ಪೂರೈಕೆ ಆಗುತ್ತಿದೆ ನವೆಂಬರ್‌-ಡಿಸೆಂಬರ್‌ ತಿಂಗಳು ಅವರೆಕಾಯಿ ಸೀಜನ್‌.ಆದರೆ ಇತ್ತೀಚೆಗೆ ಸುರಿದ ಮಳೆಯಿಂದಾಗಿ ರಾಜ್ಯವ್ಯಾಪಿ ಅವರೆಕಾಯಿ ಫ‌ಸಲು ನಷ್ಟವಾಗಿದೆ. ಮಹಾರಾಷ್ಟ್ರದಲ್ಲೂ ಅವರೆಕಾಯಿಗೆ ಬೇಡಿಕೆ ಇದೆ.ಆ ಹಿನ್ನೆಲೆಯಲ್ಲಿ ಚಿತ್ರದುರ್ಗ ಭಾಗದ ರೈತರು ಹೆಚ್ಚಿನ ಬೆಲೆಗಾಗಿ ಮಹಾರಾಷ್ಟ್ರ ರಾಜ್ಯಕ್ಕೆ ಮಾರಾಟಮಾಡುತ್ತಿದ್ದಾರೆ. ಕೆ.ಆರ್‌.ಮಾರುಕಟ್ಟೆಗೆಈಗ ದಿನಕ್ಕೆ 30ರಿಂದ 40 ಮೂಟೆ ಅವರೆಕಾಯಿ ಪೂರೈಕೆ ಆಗುತ್ತಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಮಾರುಕಟ್ಟೆಗೆ ಪೂರೈಕೆ ಆಗುತ್ತಿರುವ ಅವರೆಕಾಯಿ ಕ್ಷಣಮಾತ್ರದಲ್ಲಿ ಮಾರಾಟವಾಗುತ್ತಿದೆ. ಅವರೆಖಾದ್ಯ ತಯಾರಿಸಲೆಂದೇ ಅಧಿಕ ಸಂಖ್ಯೆಯಲ್ಲಿ ವ್ಯಾಪಾರಸ್ಥರುಖರೀದಿ ಮಾಡುತ್ತಾರೆ ಎನ್ನುತ್ತಾರೆ.

ಎಲ್ಲೆಲ್ಲಿ ಅವರೆ ಕಾಯಿಬೆಳೆಯುತ್ತಾರೆ? ಅತಿ ಹೆಚ್ಚು ಅವರೆಯನ್ನು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ , ಮೈಸೂರು, ಚಿತ್ರದುರ್ಗ ಭಾಗಗಳಲ್ಲಿ ಬೆಳೆಯಲಾಗುತ್ತದೆ.ಅವರೆಯಲ್ಲಿ ಬಹಳ ವಿಧಗಳಿವೆ ಸೋನೆ ಅವರೆ, ಮಣಿ ಅವರೆ, ಕಡ್ಲೆ ಅವರೆ, ದಪ್ಪ ಅವರೆ ಎಲ್ಲವೂ ಚಳಿಗಾದಲ್ಲಿ ಬೆಳೆಯುವಂತದ್ದಾದರೂ ಸೋನೆ ಅವರೆಗಿರುವ ಬೇಡಿಕೆ, ರುಚಿ ಮತ್ತಾವುದಕ್ಕೂ ಬರುವುದಿಲ್ಲ.ಹೀಗಾಗಿಯೇ ಇದಕ್ಕೆ ಬೇಡಿಕೆ ಹೆಚ್ಚು.

“ಚಳಿಗಾಲಬಂತೆಂದರೆಅವರೆಕಾಯಿ ಸೀಜನ್‌ಆರಂಭ ವಾಗುತ್ತದೆ. ಆದರೆ ಇತ್ತೀಚೆಗೆ ಸುರಿದ ಮಳೆಯು ಅವರೆಕಾಯಿ ಬೆಳೆ ನಷ್ಟಕ್ಕೆಕಾರಣವಾಗಿದೆ.ಹೀಗಾಗಿ ಮಾರುಕಟ್ಟೆಯಲ್ಲಿ ಬೇಡಿಕೆ ಇರುವಷ್ಟು ಅವರೆಕಾಯಿ ಪೂರೈಕೆ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಅವರೆಕಾಯಿ ಬೆಲೆಯಲ್ಲಿಕೂಡ ಏರಿಕೆಯಾಗಿದೆ.” ●ಉಮೇಶ್‌ಮಿರ್ಜಿ,ಹಾಪ್‌ಕಾಮ್ಸ್‌ನವ್ಯವಸ್ಥಾಪಕ ನಿರ್ದೇಶಕ

– ದೇವೇಶ ಸೂರುಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next