Advertisement
ಜ. 16ರಿಂದ 26ರ ವರೆಗೆ ಈ ಏರಿಯಲ್ ವಾರ್‌ಗೇಮ್ ನಡೆಯಲಿದೆ. ಸ್ಕ್ವಾಡ್ರನ್ ಲೀಡರ್ ಆಗಿರುವ ಅವನಿ ಸುಖೋಯ್ 30ಎಂಕೆಐನ ಪೈಲಟ್ ಆಗಿದ್ದಾರೆ.
Related Articles
Advertisement
ಯಾರಿವರು ಅವನಿ ಚತುರ್ವೇದಿ?
ಅವನಿ ಚತುರ್ವೇದಿ ಮೂಲತಃ ಮಧ್ಯಪ್ರದೇಶದ ರೇವಾ ಜಿಲ್ಲೆಯವರು. ಇವರ ಸಹೋದರ ಕೂಡ ಸೇನೆಯಲ್ಲೇ ಇದ್ದಾರೆ. 1994ರಲ್ಲಿ ಜನಿಸಿದ ಅವನಿ ಚೆಸ್ ಮತ್ತು ಟೇಬಲ್ ಟೆನ್ನಿಸ್ ಪ್ರಿಯೆ. ಬಿಇ ವಿದ್ಯಾಭ್ಯಾಸ ಮುಗಿಸಿ, ಹೈದರಾಬಾದ್‌ನ ಏರ್‌ಫೋರ್ಸ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿದ್ದಾರೆ. 2016ರಲ್ಲಿ ವಾಯುಪಡೆಗೆ ಮೊದಲ ಬಾರಿಗೆ ಸೇರಿದ ಮೂವರು ಮಹಿಳೆಯರ ಪೈಕಿ ಒಬ್ಬರು.
ಜಪಾನ್ ಮತ್ತು ಭಾರತ ಮಾತ್ರ ಭಾಗಿ
2022ರ ಸೆ. 8ರಂದು ಜಪಾನ್‌ನ ಟೋಕಿಯೋದಲ್ಲಿ ಉಭಯ ದೇಶಗಳ ವಿದೇಶಾಂಗ-ರಕ್ಷಣ ಸಚಿವರ ನಡುವಿನ ಮಾತುಕತೆಯಲ್ಲಿ ರಕ್ಷಣಾತ್ಮಕ ಸಹಭಾಗಿತ್ವದ ಬಗ್ಗೆ ಒಪ್ಪಂದವಾಗಿತ್ತು. ಎರಡು ದೇಶಗಳು ಪರಸ್ಪರ ಶಸ್ತ್ರಾಭ್ಯಾಸ ನಡೆಸುವ ಬಗ್ಗೆಯೂ ತೀರ್ಮಾನವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಮರಾಭ್ಯಾಸ ನಡೆಯುತ್ತಿದೆ.