Advertisement

ನ.28ಕ್ಕೆ “ಅವನೇ ಶ್ರೀಮನ್ನಾರಾಯಣ’ಟ್ರೇಲರ್‌

09:58 AM Nov 26, 2019 | Lakshmi GovindaRaj |

“ಅವನೇ ಶ್ರೀಮನ್ನಾರಾಯಣ’ನ ಹವಾ ಶುರುವಾಗಿದೆ. ಚಿತ್ರದ ಟೀಸರ್‌ ನೋಡಿಯೇ ಫಿದಾ ಆಗಿದ್ದ ಸಿನಿ ಪ್ರೇಮಿಗಳು ಈಗ ಮತ್ತಷ್ಟು ಕಾತುರದಿಂದ ಎದುರು ನೋಡುವಂತಹ ಒಂದೊಂದೇ ಅಂಶಗಳನ್ನು ಚಿತ್ರತಂಡ ಬಿಡುತ್ತಿದೆ. ಸದ್ಯ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಫ‌ಸ್ಟ್‌ಲುಕ್‌ ಹಿಟ್‌ಲಿಸ್ಟ್‌ ಸೇರಿದೆ. ಇದರ ಜೊತೆಗೆ ಚಿತ್ರದ ಟ್ರೇಲರ್‌ ರಿಲೀಸ್‌ ದಿನಾಂಕವನ್ನೂ ಚಿತ್ರತಂಡ ಅನೌನ್ಸ್‌ ಮಾಡಿದೆ.

Advertisement

ಚಿತ್ರದ ಟ್ರೇಲರ್‌ ಯಾವಾಗ ಬಿಡುಗಡೆಯಾಗುತ್ತದೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿತ್ತು. ಈಗ ಅದಕ್ಕೂ ಉತ್ತರ ಸಿಕ್ಕಿದ್ದು, ನವೆಂಬರ್‌ 28 ರಂದು ಚಿತ್ರದ ಟ್ರೇಲರ್‌ ಬಿಡುಗಡೆಯಾಗಲಿದೆ. ಎಲ್ಲರಿಗೂ ಗೊತ್ತಿರುವಂತೆ “ಅವನೇ ಶ್ರೀಮನ್ನಾರಾಯಣ’ ಚಿತ್ರ ಪ್ಯಾನ್‌ ಇಂಡಿಯಾ ಬಿಡುಗಡೆಯಾಗುತ್ತಿದ್ದು, ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂನಲ್ಲಿ ಏಕಕಾಲಕ್ಕೆ ತೆರೆಕಾಣಲಿದೆ. ಹಾಗಾಗಿ, ಐದು ಭಾಷೆಗಳ ಟ್ರೇಲರ್‌ ಕೂಡಾ ನ.28 ರಂದು ಬಿಡುಗಡೆಯಾಗಲಿದೆ.

ಈಗಾಗಲೇ ಚಿತ್ರದ ನಿರ್ಮಾಪಕ ಪುಷ್ಕರ್‌ ಚಿತ್ರದ ಬಿಡುಗಡೆಯ ಪೂರ್ವ ತಯಾರಿಯಲ್ಲಿ ತೊಡಗಿದ್ದು, ಚೆನ್ನೈ, ಹೈದರಾಬಾದ್‌, ಮುಂಬೈ ಎಂದು ಓಡಾಡುತ್ತಿದ್ದಾರೆ. ಸಚಿನ್‌ ಈ ಚಿತ್ರದ ನಿರ್ದೇಶಕರು. ರಕ್ಷಿತ್‌ ಶೆಟ್ಟಿ ನಾಯಕರಾಗಿರುವ ಈ ಚಿತ್ರದಲ್ಲಿ ಶಾನ್ವಿ ನಾಯಕಿ. ಇದೊಂದು ಯುನಿವರ್ಸಲ್‌ ಸಬ್ಜೆಕ್ಟ್ ಆಗಿದ್ದರಿಂದ ಚಿತ್ರವನ್ನು ಪ್ಯಾನ್‌ ಇಂಡಿಯಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ. ಚಿತ್ರ ಡಿಸೆಂಬರ್‌ 27 ರಂದು ಬಿಡುಗಡೆಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next