Advertisement

ಎಲ್ಲೆಲ್ಲೂ ಅವನೇ ಶ್ರೀಮನ್ನಾರಾಯಣ

10:05 AM Dec 18, 2019 | Team Udayavani |

ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ’ ಚಿತ್ರದ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ ಚಿತ್ರತಂಡ ಕೂಡಾ ಚಿತ್ರವನ್ನು ಮತ್ತಷ್ಟು ಜನರಿಗೆ ತಲುಪಿಸಲು ಮುಂದಾಗಿದ್ದು, ವಿಭಿನ್ನ ಶೈಲಿಯ ಪ್ರಚಾರದ ಮೊರೆ ಹೋಗಿದೆ. ಚಿತ್ರ ಹಳ್ಳಿ ಹಳ್ಳಿಗೂ ತಲುಪಬೇಕೆಂಬ ಉದ್ದೇಶದಿಂದ “ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ರೈಲಿನ ಮೊರೆ ಹೋಗಿದೆ. ರೈಲು ಬೋಗಿಗಳ ಹೊರಗೆ ಹಾಗೂ ಒಳಗೆ ಚಿತ್ರದ ಪೋಸ್ಟರ್‌ ಅಂಟಿಸುವ ಮೂಲಕ ಚಿತ್ರವನ್ನು ಪ್ರತಿ ಹಳ್ಳಿಗೂ ತಲುಪುವಂತೆ ಮಾಡಿದೆ.

Advertisement

ಇದಕ್ಕಾಗಿ ಚಿತ್ರತಂಡ ಐದು ಮಾರ್ಗಗಳಲ್ಲಿ ಸಂಚರಿಸುವ ಬೆಂಗಳೂರು ಲೋಕಲ್‌ ರೈಲಿನ ಮೊರೆ ಹೋಗಿದೆ. ಈ ರೈಲು ಬೆಂಗಳೂರು, ರಾಮನಗರ, ಮೈಸೂರು, ಮಾರಿಕುಪ್ಪಂ ಹಿಂದುಪುರ, ಬಂಗಾರು ಪೇಟೆ, ವೈಟ್‌ ಫೀಲ್ಡ್ ಈ ಪ್ರದೇಶಗಳ ಜೊತೆಗೆ ಮೈಸೂರು, ಅರಸೀಕೆರೆ, ಶಿವಮೊಗ್ಗ ಹಾಗೂ ಹುಬ್ಬಳಿ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್‌ ರೈಲಿನ ಬೋಗಿಗಳನ್ನು “ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಪ್ರಚಾರಕ್ಕಾಗಿ ಬಳಸಿಕೊಂಡಿದ್ದು, ಇದಕ್ಕಾಗಿ ಎರಡು ರೈಲುಗಳನ್ನು ಬಳಸಿಕೊಂಡಿದೆ.

ಈ ರೈಲಿನ ಹೊರ ಹಾಗೂ ಒಳಭಾಗಗಳಲ್ಲಿ ಚಿತ್ರದ ಪೋಸ್ಟರ್‌ ಅಂಟಿಸಿ, ಪ್ರಚಾರ ಕೈಗೊಳ್ಳುತ್ತಿದೆ. ಸಾಮಾನ್ಯವಾಗಿ ರೈಲಿನ ಹೊರಭಾಗದಲ್ಲಿ ಚಿತ್ರದ ಪೋಸ್ಟರ್‌ ಕಂಡರೂ, ರೈಲಿನ ಒಳಭಾಗಗಳಲ್ಲಿ ಪ್ರಚಾರಕ್ಕೆ ಅವಕಾಶ ಕೊಟ್ಟಿರಲಿಲ್ಲ. ಆದರೆ, ಮೊದಲ ಬಾರಿಗೆ “ಅವನೇ ಶ್ರೀಮನ್ನಾರಾಯಣ’ ತಂಡ ಆ ಅವಕಾಶವನ್ನು ಪಡೆದಿದೆ. ಈ ಪೋಸ್ಟರ್‌ಗಳು ಜನವರಿ 20ರವರೆಗೆ ರೈಲಿನಲ್ಲಿರಲಿವೆ.

ಫೋಟೋ ಬೂತ್‌: ವಿಶಿಷ್ಟ ಪ್ರಚಾರದ ಮತ್ತೂಂದು ಅಂಗವಾಗಿ “ಅವನೇ ಶ್ರೀಮನ್ನಾರಾಯಣ’ ಚಿತ್ರತಂಡ ಫೋಟೋಬೂತ್‌ ಎಂಬ ಕಾನ್ಸೆಪ್ಟ್ ಮಾಡಿದ್ದು, ಆರಡಿ ಬಾಕ್ಸ್‌ನಲ್ಲಿ ನಿಂತು ಫೋಸ್‌ ಕೊಟ್ಟರೆ ನಿಮ್ಮ ಪಕ್ಕ ರಕ್ಷಿತ್‌ ಶೆಟ್ಟಿ ಬಂದು ನಿಂತಂತೆ ಫೋಟೋ ಬರುತ್ತದೆ. ಆ ಬಾಕ್ಸ್‌ನಲ್ಲಿರುವ ಅಪ್ಶನ್‌ ಬಳಸಿ ನೀವು ಆ ಫೋಟೋವನ್ನು ಅಲ್ಲೇ ಪ್ರಿಂಟ್‌ ಹಾಕಿಸಿಕೊಳ್ಳಬಹುದು ಅಥವಾ ಇ-ಮೇಲ್‌ ಕೂಡಾ ಮಾಡಿಕೊಳ್ಳಬಹುದು. ಈ ರೀತಿಯ ವಿಭಿನ್ನ ಪ್ರಚಾರದ ಮೂಲಕ ಚಿತ್ರತಂಡ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next