ಜಮ್ಮುಕಾಶ್ಮೀರ: ಕಾಶ್ಮೀರದ ಕುಪ್ವಾರ ಪ್ರದೇಶದಲ್ಲಿ ಹಿಮಪಾತವಾದ್ದರಿಂದ ಓರ್ವ ಯೋಧ ಮೃತಪಟ್ಟು, ಇಬ್ಬರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ( 17-11-2020) ನಡೆದಿದೆ.
ಕುಪ್ವಾರ ಜಿಲ್ಲೆಯ ತಾಂಗ್ದಾರ್ ಪ್ರದೇಶದಲ್ಲಿದ್ದ ಸೇನಾ ಶಿಬಿರದ ಮೇಲೆ ಹಿಮಪಾತವಾಗಿದೆ. ಮಂಗಳವಾರ ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಈ ದುರ್ಘಟನೆ ನಡೆದಿದ್ದು, ಕೂಡಲೇ ಮೂವರು ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗ್ಯೂ ಬುಧವಾರದ ವೇಳೆಗೆ ಓರ್ವ ಯೋಧ ಮೃತಪಟ್ಟಿದ್ದಾನೆಂದು ವರದಿಯಾಗಿದೆ.
ಕಳೆದ 5 ದಿನಗಳಿಂದ ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದೆ. ಸರ್ಕಾರ ಕೂಡ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಿತ್ತು. ಕುಪ್ವಾರ ಮತ್ತು ಬಂಡಿಪೋರ ಜಿಲ್ಲೆಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಿಮಪಾತವಾಗುತ್ತಿದ್ದರೇ, ಗಂದೇರ್ ಬಲ್ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ತೀವ್ರ ಪ್ರಮಾಣದಲ್ಲಿ ಹಿಮ ಸುರಿಯುತ್ತಿದೆ.
ಇದನ್ನೂ ಓದಿ: ಬಿಜೆಪಿ ನಾಯಕಿ ಖುಷ್ಬೂ ಪ್ರಯಾಣಿಸುತ್ತಿದ್ದ ಕಾರು ಅಪಘಾತ! ಅಪಾಯದಿಂದ ಪಾರು
ಇದನ್ನೂ ಓದಿ: ಡಿ.7ರಿಂದ ಚಳಿಗಾಲದ ಅಧಿವೇಶನ! ಬೆಳಗಾವಿ ಬದಲು ಬೆಂಗಳೂರಿಗೆ ಶಿಫ್ಟ್ !