ಅವಲಕ್ಕಿ: 1 ಕಪ್
ಅಕ್ಕಿ ಹಿಟ್ಟು: ಕಾಲು ಕಪ್
ಗೋಧಿ ಹಿಟ್ಟು: ಕಾಲು ಕಪ್
ಖಾರದ ಪುಡಿ: 1 ಚಮಚ
ಚಿಟಿಕೆ ಇಂಗು
ಜೀರಿಗೆ: 1 ಚಮಚ
ಕರಿಯಲು ಬೇಕಾದಷ್ಟು ಎಣ್ಣೆ ,
ಉಪ್ಪು ರುಚಿಗೆ ತಕ್ಕಷ್ಟು
Advertisement
ಮೊದಲು ಅವಲಕ್ಕಿಯನ್ನು ಮಿಕ್ಸಿಗೆ ಹಾಕಿ ಪುಡಿ ಮಾಡಿ. ಅನಂತರ ಗೋಧಿ ಹಿಟ್ಟು , ಅಕ್ಕಿ ಹಿಟ್ಟು , ಉಪ್ಪು, ಜೀರಿಗೆ, ಖಾರದ ಪುಡಿ, 2 ರಿಂದ 3 ಚಮಚ ಬಿಸಿ ಎಣ್ಣೆ ಹಾಕಿ ಚೆನ್ನಾಗಿ ಬೆರೆಸಿ. ಅನಂತರ ಸ್ವಲ್ಪ ನೀರು ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಕಲಸಿ. ಬಳಿಕ ಚಕ್ಕುಲಿ ಅಚ್ಚಿಗೆ ಸ್ವಲ್ಪ ಹಿಟ್ಟು ಹಾಕಿ ವೃತ್ತಾಕಾರವಾಗಿ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆದರೆ ಗರಿಗರಿ ಚಕ್ಕುಲಿ ಸವಿಯಲು ಸಿದ್ಧ.